Friday, November 1, 2024
CrimeNEWSನಮ್ಮರಾಜ್ಯರಾಜಕೀಯ

ಕರ್ನಾಟಕದ ಆಯ್ದ ಪತ್ರಕರ್ತರಿಗೆ  ಸಿಎಂ ಕಚೇರಿಯಿಂದ ಸಿಹಿತಿಂಡಿ ಜತೆಗೆ ತಲಾ 2.5 ಲಕ್ಷ ರೂ.ಗಳ ಗಿಫ್ಟ್ ರೂಪದ ಲಂಚ : ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೀಪಾವಳಿಯ ಸಂದರ್ಭದಲ್ಲಿ ಕರ್ನಾಟಕದ ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂ.ಗಳನ್ನು ಗಿಫ್ಟ್ ರೂಪದಲ್ಲಿ ಲಂಚ ನೀಡಿರುವ ಆರೋಪದ ಆಘಾತಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ನಾನು ಗೌರಿ.ಕಾಂ ವರದಿ ಮಾಡಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕರ್ನಾಟಕದ ಬಹುತೇಕ ಎಲ್ಲ ಪತ್ರಕರ್ತರಿಗೂ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳು ಮತ್ತು ತಲಾ 2.5 ಲಕ್ಷ ರೂ. ನಗದು ಉಡುಗೊರೆಯಾಗಿ ನೀಡಿದ್ದಾರೆ. ದಯವಿಟ್ಟು ಚುನಾವಣೆಯವರೆಗೂ ಮಾಧ್ಯಮಗಳಿಂದ ಸರ್ಕಾರ ವಿರೋಧಿ ಸುದ್ದಿಗಳನ್ನು ನಿರೀಕ್ಷಿಸಬೇಡಿ ಎಂಬ ವೈರಲ್ ವಾಟ್ಸಾಪ್ ಸಂದೇಶದ ಜಾಡು ಹಿಡಿದು ಹೊರಟಾಗ ಸರ್ಕಾರದ ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ತಿಳಿಸಿದೆ.

ಕೆಲ ಪತ್ರಕರ್ತರು ಸಿಹಿ ತಿಂಡಿಯ ಪೊಟ್ಟಣದ ಜೊತೆ ನೋಟಿನ ಕಂತೆ ನೋಡಿದ ಕೂಡಲೇ ಸಿಎಂ ಕಚೇರಿಗೆ ವಾಪಸ್ ಮಾಡಿದ್ದಲ್ಲದೆ ಸರ್ಕಾರದ ಈ ಭ್ರಷ್ಟಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸು ಬಂದಿರುವುದಾಗಿ ವರದಿ ಮಾಡಿದೆ.

ಇನ್ನು ಕೆಲವು ಟಿವಿ ಚಾನೆಲ್‌ ನಿರೂಪಕರಿಗೆ ಮತ್ತು ರಾಜಕೀಯ ವಿಷಯಗಳನ್ನು ಕವರ್ ಮಾಡುವವರಿಗೆ ಸಹ 5 ಲಕ್ಷ ರೂ.ಗಳ ವರೆಗೆ ಹಣ ನೀಡಿರುವುದನ್ನು ಮೂಲಗಳು ಖಚಿತಪಡಿಸಿವೆ. ಅದೇ ಸಂದರ್ಭದಲ್ಲಿ ಕೆಲ ಪತ್ರಿಕೆಗಳಿಗೆ ಕೇವಲ ಸಿಹಿ ತಿಂಡಿಗಳ ಪೊಟ್ಟಣಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಜಾವಾಣಿಯ ಸಿಇಒ ಸೀತಾರಾಮನ್ ಶಂಕರ್‌ ಅವರಿಗೆ ಕರೆ ಮಾಡಿದಾಗ, “ಸಾರಿ, ನೋ ಕಮೆಂಟ್” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಎಂ ಕಚೇರಿಯ ಮಾಧ್ಯಮ ಕಾರ್ಯದರ್ಶಿ ಮೋಹನ್ ಕೃಷ್ಣ ಅವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಲಾಯಿತು. ಅವರು, ನಾನು ಯಾರಿಗೂ ಹಣ ಕೊಟ್ಟಿಲ್ಲ, ಹುಷಾರಿಲ್ಲದ ಕಾರಣದಿಂದ 15 ದಿನದಿಂದ ಕಚೇರಿಗೆ ನಾನು ಹೋಗಿಲ್ಲ, ಹಾಗಾಗಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು ಎಂದು ವರದಿಯಲ್ಲಿ ವಿವರಿಸಿದೆ.

ಇನ್ನು ಈ ಕುರಿತು ಸ್ಪಷ್ಟೀಕರಣ ಪಡೆಯಲು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ಪಾಗೋಜಿ ಶಂಕರ್‌ ಅವರನ್ನು ಸಂಪರ್ಕಿಸಲು ಯತ್ನಿಸಲಾದರೂ ಅವರು ಕರೆಗೆ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ನಂತರ ಅಪ್‌ಡೇಟ್ ಮಾಡಲಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ.

ಸರ್ಕಾರದ ಈ ನಡೆಯಿಂದ ಹಬ್ಬದ ಉಡುಗೊರೆ ರೂಪದಲ್ಲಿ ಕೋಟ್ಯಂತರ ರೂ.ಗಳನ್ನು ಪತ್ರಕರ್ತರಿಗೆ ನೀಡುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ? ಇಷ್ಟು ಹಣ ಎಲ್ಲಿಂದ ಬಂತು? ಅದರ ಮೂಲವೇನು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ ಎಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸರ್ಕಾರ ಪತ್ರಕರ್ತರಿಗೆ ಹಣದ ರೂಪದಲ್ಲಿ ಉಡುಗೊರೆ ನೀಡುವ ಮೂಲಕ ಅವರು ಪಕ್ಷಪಾತಿಗಳನ್ನಾಗಿ ವರ್ತಿಸಲು ಲಂಚದ ಆಮಿಷ ಒಡ್ಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ ಸಚಿವರೊಬ್ಬರು ಪತ್ರಕರ್ತರಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ ಎಂದು ವರದಿ ಮಾಡಿದೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...