NEWSನಮ್ಮಜಿಲ್ಲೆರಾಜಕೀಯ

ಚಿಕ್ಕಪೇಟೆಯ 50 ಸಾವಿರ ಕುಟುಂಬಗಳಿಗೆ 26ಕೋಟಿ ರೂ. ಚೆಕ್ ವಿತರಣೆ: ಕೆಜಿಎಫ್ ಬಾಬು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರ ನಿವಾಸಿಗಳಿಗೆ ಕಾಂಗ್ರೆಸ್ ನಾಯಕ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಬುಧವಾರ ಚೆಕ್ ವಿತರಣೆ ಮಾಡಿದ್ದಾರೆ.

ಖಾಸಗಿ ಯೋಜನೆಯಂತೆ ಬಾಬು 50 ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂ.ಗಳಂತೆ ಸುಮಾರು 26 ಕೋಟಿ ರೂ. ಚೆಕ್ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್‌ಗೆ ಕೆಜಿಎಫ್ ಬಾಬು ಸೆಡ್ಡು ಹೊಡೆದಿದ್ದಾರೆ.

ಚಿಕ್ಕಪೇಟೆಯ ಸ್ಥಳೀಯ ನಾಯಕರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವ ಕೆಜಿಎಫ್ ಬಾಬು, ಒಟ್ಟು 26 ಕೋಟಿ ರೂ. ಚೆಕ್ ವಿತರಿಸುವ ಬ್ಯಾನರ್ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆ ನಗರದ ಟೌನ್ ಹಾಲ್‌ನಲ್ಲಿ 700ಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ.

ಚೆಕ್ ವಿತರಣೆ ವೇಳೆ ಮಾತನಾಡಿದ ಕೆಜಿಎಫ್ ಬಾಬು, ಈ ಕಾರ್ಯಕ್ರಮವನ್ನು ನಿಲ್ಲಿಸಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಒತ್ತಡ ಹಾಕುತ್ತಿದ್ದಾರೆ. ಅರ್.ವಿ. ದೇವರಾಜ್ ಅಲ್ಲ, ಹೈಕಮಾಂಡ್ ಹೇಳಿದರೂ ಈ ಚೆಕ್ ವಿತರಣೆ ಕಾರ್ಯಕ್ರಮ ನಿಲ್ಲಿಸಲ್ಲ. ನಾನು ಪಾರ್ಟಿ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ಉಮ್ರಾ ಡೆವಲಪರ್ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ನಾನು ನನ್ನ ಸ್ವಂತ ದುಡ್ಡು ಕೊಡುತ್ತಿದ್ದೇನೆ. ನಾನು ಶ್ರೀಮಂತ, 10 ಜನ ಶ್ರೀಮಂತರಲ್ಲಿ ನಾನು ಕೂಡಾ ಒಬ್ಬ. 50 ಸಾವಿರ ಮನೆಗಳಿಗೆ ತಲಾ 5 ಸಾವಿರ ರೂ.ಚೆಕ್ ಕೊಟ್ಟೇ ಕೊಡುತ್ತೇನೆ. ನನಗೆ ಎಷ್ಟೇ ಒತ್ತಡ ಬಂದರೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ, ಇಟ್ಟ ಹೆಜ್ಜೆ ಮತ್ತೆ ಹಿಂದಿಡಲ್ಲ ಎಂದು ತಿಳಿಸಿದರು.

ಎಂಎಲ್‌ಸಿ ಚುನಾವಣೆಯ ವೇಳೆ ಈ ಹಿಂದೆ ಕೋಲಾರದಲ್ಲಿ ಕೆಜಿಎಫ್ ಬಾಬು ಇದೇ ರೀತಿ ಚೆಕ್ ವಿತರಣೆ ಮಾಡಿದ್ದರು. ಈ ಹಿಂದೆ ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದು, ಈಗ ಕೆಜಿಎಫ್ ಬಾಬು ಚಿಕ್ಕಪೇಟೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ಏನು ಮಾಡುತ್ತಾರೆ ಎಂಬುದಕ್ಕೆ ಕಾಲ ಬರಬೇಕಿದೆ ಅಷ್ಟೇ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC