ನ್ಯೂಯಾರ್ಕ್: ಫ್ಲೋರಿಡಾದ ರಿವರ್‌ವ್ಯೂ ಪ್ರೌಢಶಾಲೆಯ ಶಿಕ್ಷಕಿಯೊಬ್ಬ ತರಗತಿಯಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಸಂಬಂಧ ಪೊಲೀಸರು ಬಂಧಿಸಿದ್ದಾರೆ.
27 ವರ್ಷದ ಬ್ರೂಕ್ ಆಂಡರ್ಸನ್ ಒಬ್ಬ ಶಿಕ್ಷಕಿಯಾಗಿದ್ದು, ಶಾಲಾ ದಿನ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಆಂಡರ್ಸನ್ ವಿರುದ್ಧ ತಿಂಗಳುಗಟ್ಟಲೆ ಅಪ್ರಾಪ್ತ ವಯಸ್ಕಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪವಿದೆ. ಎರಡು ವಾರಗಳ ಹಿಂದೆ ಅಪ್ರಾಪ್ತನೊಂದಿಗೆ ಕಾನೂನುಬಾಹಿರ ಲೈಂಗಿಕ ಕ್ರಿಯೆ ನಡೆಸಿದ ಮೂರು ಆರೋಪಗಳನ್ನು ಆಕೆ ಎದುರಿಸಿದ್ದಾರೆ.
ಮೇ 16 ರ ಬೆಳಗ್ಗೆ ಬಂಧಿಸಲ್ಪಡುವ ಮೊದಲು ಆಂಡರ್ಸನ್ ರಿವರ್‌ವ್ಯೂ ಪ್ರೌಢಶಾಲಾ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಿ ಆರೋಪಿಸಲಾಗಿದೆ.
ಹಿಲ್ಸ್‌ಬರೋ ಕೌಂಟಿ ಪಬ್ಲಿಕ್ ಸ್ಕೂಲ್ ಟೀಚರ್ಸ್ ಡೈರೆಕ್ಟರಿಯ ಪ್ರಕಾರ, ಆಂಡರ್ಸನ್ ರಿವರ್‌ವ್ಯೂ ಹೈಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಆದಾಗ್ಯೂ, ಅವರ ಬಂಧನದ ನಂತರ ಅವರ ಹೆಸರನ್ನು ಆ ಡೈರೆಕ್ಟರಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.
“ಈ ಶಿಕ್ಷಕಿ ತನ್ನ ವಿದ್ಯಾರ್ಥಿಗಳು, ತನ್ನ ಶಾಲೆ ಮತ್ತು ತನ್ನ ಇಡೀ ಸಮುದಾಯದ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಕಲಿಕೆಗೆ ಸುರಕ್ಷಿತ, ಬೆಂಬಲ ನೀಡುವ ವಾತಾವರಣ ಇರಬೇಕಾದ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ. ಆಕೆಯ ನಡೆ ಕ್ರಿಮಿನಲ್” ಎಂದು ಶೆರಿಫ್ ಚಾಡ್ ಕ್ರೋನಿಸ್ಟರ್ ಹೇಳಿದರು.

Related

 










