NEWSದೇಶ-ವಿದೇಶಸಂಸ್ಕೃತಿಸಿನಿಪಥ

‘ಥಗ್ ಲೈಫ್’ ಸಿನಿಮಾ ಬಿಡುಗಡೆಯಾದರೆ ಬೆಂಗಳೂರು ಬಂದ್: ಪ್ರವೀಣ್ ಶೆಟ್ಟಿ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಆದರೆ ಎಲ್ಲೋ ಒಂದು ಪಿತೂರಿ ನಡೆಯುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ರಾಜ್ಯದ ಯಾವುದಾದರೂ ಒಂದೇಒಂದು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾದರೂ ಬೆಂಗಳೂರು ಬಂದ್ ಆಗಲಿದೆ ಎಂದು ಪ್ರವೀಣ್ ಶೆಟ್ಟಿ ಎಚ್ಚರಿಸಿದ್ದಾರೆ.

ಜೂನ್ 5 ರಂದು ಸಿನಿಮಾ ಎಲ್ಲೂ ಬಿಡುಗಡೆಯಾಗಬಾರದು. ಸಿನಿಮಾ ಬಿಡುಗಡೆಯಾದರೆ ಕರ್ನಾಟಕದಲ್ಲಿ ಹೋರಾಟದ ಬಿಸಿ ಹೆಚ್ಚಾಗುತ್ತದೆ. ಜೂನ್ 5 ರಂದು ಸಿನಿಮಾ ಬಿಡುಗಡೆಯಾದರೆ ಥಿಯೇಟರ್‌ಗೆ ನುಗ್ಗಿ ಧ್ವಂಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಬಂದ್ ಮಾಡುವ ಬಗ್ಗೆ ನಾವೆಲ್ಲರೂ ಎಚ್ಚರಿಕೆ ನೀಡಿದ್ದೇವೆ. ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಹೇಳಿಕೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ನಟ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ನಾನು ಯಾವಾಗಲೂ ಕನ್ನಡದ ಪರವಾಗಿರುತ್ತೇನೆ. ಕನ್ನಡ ಸಂಘಟನೆಯ ಹಿರಿಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಚಿತ್ರ ಬಿಡುಗಡೆಯಾದರೆ ಹೋರಾಟ ರೂಪಿಸುತ್ತೇವೆ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

Megha
the authorMegha

Leave a Reply

error: Content is protected !!