CRIMENEWSಬೆಂಗಳೂರು

ಪಾದರಕ್ಷೆಯಿಂದ ಆಟೋ ಚಾಲಕನಿಗೆ ಹೊಡೆದ ಮಹಿಳೆ ಕಾಲಿಡಿದು ಕ್ಷೆಮೆ ಕೇಳಿದಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಹಾರದ ಹಿಂದಿ ಮಹಿಳೆಯೊಬ್ಬರು ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹೊಡೆದ ಘಟನೆಯಿಂದ ಆಕ್ರೋಶ ಹೆಚ್ಚಾಗಿ, ಪೊಲೀಸ್‌ ಪ್ರಕರಣ ದಾಖಲಾಗುತ್ತಿದ್ದಂತೆ ಮಹಿಳೆ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ.

ದಂಪತಿಗಳು ಆಟೋ ಚಾಲಕನಲ್ಲಿ ಕ್ಷಮೆಯಾಚಿಸಿ, “ಎಲ್ಲಾ ಕನ್ನಡಿಗರೇ, ದಯವಿಟ್ಟು ನಮ್ಮನ್ನು ಕ್ಷಮಿಸಿ. ನಮಗೆ ಆಟೋ ಚಾಲಕರ ಮೇಲೆ ಗೌರವವಿದೆ. ನಾವು ಬೆಂಗಳೂರನ್ನು ತುಂಬಾ ಪ್ರೀತಿಸುತ್ತೇವೆ. ಇಲ್ಲಿನ ವಾತಾವರಣ ನಮಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ನಾವು ಹೊರಡುವಾಗ ಏನೋ ಆಯಿತು. ನಾನು ಬೇಕಲು ಬೇಕು ಎಂದು ಹಾಗೆ ಮಾಡಲಿಲ್ಲ, ಕ್ಷಮಿಸಿ. ನಾನು ಗರ್ಭಿಣಿ. ಗರ್ಭಪಾತವಾಗುವ ಭಯದಿಂದ ನಾನು ಹೀಗೆ ಮಾತನಾಡಿದೆ. ನನಗೆ ಬೆಂಗಳೂರು ತುಂಬಾ ಇಷ್ಟ. ನನಗೆ ಬೆಂಗಳೂರು ಮತ್ತು ಬೆಂಗಳೂರು ಸಂಸ್ಕೃತಿಯ ಬಗ್ಗೆ ತುಂಬಾ ಗೌರವ ಮತ್ತು ಪ್ರೀತಿ ಇದೆ ಎಂದು ಆ ಮಹಿಳೆ ಕ್ಷೆಮೆಯಾಚಿವ ಜತೆಗೆ ಹೇಳಿಕೊಂಡಿದ್ದಾಳೆ.

“ನಾವು ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇವೆ. ನಮಗೆ ಮನೆಯಷ್ಟೇ ಇಷ್ಟ. ಬೆಂಗಳೂರಿನ ಬಗ್ಗೆ ನಮಗೆ ಯಾವುದೇ ನಕಾರಾತ್ಮಕ ಅಭಿಪ್ರಾಯಗಳಿಲ್ಲ. ನಾವು ಆಟೋ ಚಾಲಕರನ್ನು ಗೌರವಿಸುತ್ತೇವೆ” ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾನುವಾರ ಪೊಲೀಸರು ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಮಹಿಳೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಬೆಳ್ಳಂದೂರು ಬಳಿ ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದ ನನ್ನ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಆಟೋ ಡಿಕ್ಕಿ ಹೊಡೆದಿದೆ. ಈ ವೇಳೆ ನಾನು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಹೀಗಾಗಿ ಘಟನೆ ಸಮಯದಲ್ಲಿ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ನಡೆಸಿರುವುದಾಗಿ ಮಹಿಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಿದ್ದರು.

ಆ ಬಳಿಕ ಆಟೋ ಚಾಲಕನ ಬಳಿಗೆ ಹೋಗಿ ಕ್ಷೆಮೆ ಕೇಳಿ ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಬೆಡಿಕೊಂಡಿದ್ದಾಳೆ.

Megha
the authorMegha

Leave a Reply

error: Content is protected !!