ನ್ಯೂಡೆಲ್ಲಿ: ಸುಪ್ರೀಂ ಕೋರ್ಟ್ ಆದೇಶದ ಬಳಿಕ ಮಧ್ಯ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರೊಬ್ಬರು ಮೊದಲ ಬಾರಿಗೆ 28,695 ರೂಪಾಯಿ ಪಿಂಚಣಿ ಪಡೆದುಕೊಂಡಿದ್ದಾರೆ.
ಈ ಹಿಂದೆ ಇದ್ದ ಸ್ಲಾಬ್ ಮೇಲಷ್ಟೇ (ಅಂದರೆ ಮೂಲ ವೇತನಕ್ಕೂ ಪಿಂಚಣಿ ಕೊಡುತ್ತಿರಲಿಲ್ಲ) ಪಿಂಚಣಿ ಸಿಗುತ್ತಿತ್ತು. ಆದರೆ, ಹೊಸ ಪಿಂಚಣಿ ವ್ಯವಸ್ಥೆ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಾರಿಗೆ ನೌಕರರೊಬ್ಬರು 28,695 ರೂಪಾಯಿ ಪಿಂಚಣಿ ಪಡೆದುಕೊಂಡಿದ್ದಾರೆ.
ಇಪಿಎಫ್ (ನೌಕರರ ಭವಿಷ್ಯ ನಿಧಿ ಸಂಸ್ಥೆ)ನ ಕೊಡುಗೆಯನ್ನು ಲೆಕ್ಕಹಾಕಲು ವೇತನಕ್ಕೆ ಭತ್ಯೆಗಳನ್ನು ಸೇರಿಸುವ ಅಗತ್ಯವಿದೆ ಎಂದು ಇತ್ತೀಚಿನ ಸುತ್ತೋಲೆ ಹೊರಡಿಸಲಾಗಿತ್ತು. ಅದರಂತೆ ಇಪಿಎಫ್‌ಗೆ ನೌಕರನ ಕೊಡುಗೆ ವೇತನಕ್ಕೆ ಅನುಗುಣವಾಗಿ ಹೆಚ್ಚಳವಾಗಿದ್ದರಿಂದ ಈ ಪಿಂಚಣಿ ದೊರೆತಿದೆ ಎಂದು ಹೇಳಬಹುದು.
ಅಂದರೆ, ಈ ಹಿಂದೆ ಒಬ್ಬ ನೌಕರ ನಿವೃತ್ತನಾದರೆ ಅವರಿಗೆ ಮೂಲ ವೇತನ ಅವರು ನಿವೃತ್ತರಾದ ವೇಳೆ ಎಷ್ಟಿರುತ್ತದೆಯೋ ಅದಕ್ಕೆ ಅವರು ಎಷ್ಟು ವರ್ಷ, ಎಷ್ಟು ತಿಂಗಳು, ಎಷ್ಟು ದಿನ ಸೇವೆ ಸಲ್ಲಿಸಿದ್ದಾರೂ ಅಷ್ಟನ್ನು ಲೆಕ್ಕಹಾಕಿ ಕೊಡುವ ಬದಲಿಗೆ ಕೇವಲ ಪಿಎಫ್ ಸಂಸ್ಥೆ ಅಳವಡಿಸಿಕೊಂಡಿದ್ದ ಸ್ಲಾಬ್‌ಗಳ ಜತೆಗೆ ಎಷ್ಟು ವರ್ಷ, ಎಷ್ಟು ತಿಂಗಳು, ಎಷ್ಟು ದಿನ ಸೇವೆ ಸಲ್ಲಿಸಿದ್ದಾರೂ ಅಷ್ಟನ್ನು ಗುಣಕಾರ ಮಾಡಿದಾಗ ಬರುವ ಮೊತ್ತವನ್ನು ಮತ್ತೆ 70ರಿಂದ ಭಾಗಿಸಿದಾಗ ಬರುವ ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತಿತ್ತು.
ಈಗಲೂ ಕೂಡ ನಮಗೆ ಸುಪ್ರೀಂ ಕೋರಟ್ ನೀಡಿರುವ ಆದೇಶ ಮೇಲೆ ಪಿಂಚಣಿ ಬೇಡ ಎಂದು ಹೇಳುವವರಿಗೆ ಇದೇ ಹಳೆಯ ಪಿಂಚಣಿ ಸೌಲಭ್ಯವೆ ಇರುವುದು. ಇಲ್ಲ ನಮಗೆ ಹೊಸ ಪಿಂಚಣಿ ವ್ಯವಸ್ಥೆ ಬೇಕು ಎಂದು ನೌಕರ ಬಯಸಿದರೆ ಆತ ಸೇವೆಗೆ ಸೇರಿದ ದಿನದಿಂದ ಇಲ್ಲಿಯವರೆಗೂ ಬಡ್ಡಿ, ಚಕ್ರ ಬಡ್ಡಿ ಸಹಿತ ಪಿಂಚಣಿಗೆ ಹಣ ತುಂಬ ಬೇಕಾಗುತ್ತದೆ. ಆ ಬಳಿಕವಷ್ಟೇ ಆತನಿಗೆ ಈ ಹೊಸ ಪಿಂಚಣಿ ಸೌಲಭ್ಯ ಸಿಗುತ್ತದೆ.
ಉದಾ: 30 ವರ್ಷಗಳಿಂದ ಸೇವೆಯಲ್ಲಿದ್ದರೆ. ಆ ನೌಕರ ಸರಿ ಸುಮಾರು 30 ಲಕ್ಷ ರೂಪಾಯಿಗಳನ್ನು ಪಿಂಚಣಿ ಯೋಜನೆಗೆ ಈಗ ಹಣ ಭರಿಸಬೇಕು. ಆ ಬಳಿಕ ಆತನ ಸೇವೆ ಇನ್ನು 5-10 ವರ್ಷ ಇದ್ದರೆ ಮುಂದಿನ ದಿನದ ಪಿಂಚಣಿಗೆ ವೇತನದಿಂದ ಕಟ್ ಮಾಡಿಕೊಳ್ಳಲಾಗುತ್ತದೆ.
ಆದರೆ, ಈಗ 20-30 ವರ್ಷ ಸೇವೆ ಸಲ್ಲಿರುವ ನೌಕರರು ಮತ್ತೆ ನಿವೃತ್ತರಾದಾಗ ಹೆಚ್ಚಿನ ಮೊತ್ತದ ಪಿಂಚಣಿ ಪಡೆಯಬೇಕು ಎಂದರೆ ಈಗ 20-30 ಲಕ್ಷ ರೂ.ಗಳವರೆಗೆ ಹಣವನ್ನು ಪಿಂಚಣಿ ಯೋಜನೆಗೆ ಒಂದೇ ಬಾರಿ ಕಟ್ಟಬೇಕು. ಇದು ಸಾಧ್ಯವೇ ಎಂಬ ಲೆಕ್ಕಾಚಾರದಿಂದ ನೌಕರರು ಗೊಂದಲಕ್ಕೆ ಸಿಲುಕಿದ್ದಾರೆ.
ಇಲ್ಲ ಅಷ್ಟೂ ಹಣವನ್ನು ಕಟ್ಟುತ್ತೇವೆ ಎಂದರೆ, ಈಗ ಮಧ್ಯಪ್ರದೇಶದಲ್ಲಿ ಸಾರಿಗೆ ನೌಕರರೊಬ್ಬರು ನಿವೃತ್ತಿಯಾಗುವಾಗ ತೆಗೆದುಕೊಳ್ಳುತ್ತಿದ್ದ 87,665 x 20 ವರ್ಷ 11 ತಿಂಗಳು 25 ದಿನದ ಜತೆಗೆ 2 ವರ್ಷವನ್ನು ಗುಣಾಕಾರ ಮಾಡಿ ಬಳಿಕ 70ರಿಂದ ಭಾಗಿಸಿದರೆ ಈ 28,695 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೋ ಅದೇ ರೀತಿ ನಿವೃತ್ತರಾದ ಮೇಲೆ ನೀವು ಪಡೆಯುತ್ತಿದ್ದ ಒಟ್ಟು ವೇತನದ ಮೇಲೆಯೇ ಪಿಂಚಣಿ ಪಡೆಯುತ್ತೀರಿ.
ಇಲ್ಲದೇ ಹೋದರೆ ನಿಮಗೆ ಈಗ ನಿವೃತ್ತರಾದವರು ಪಡೆಯುತ್ತಿರುವಂತೆ 2351 ರೂ., 2313 ರೂ.ಗಳನ್ನು ನೀವು ಪಡೆಯುತ್ತೀರಿ. (ಇದರಲ್ಲಿ ಕಾಲ ಕಾಲಕ್ಕೆ ಸ್ವಲ್ಪಮಟ್ಟಿಗಿನ ವ್ಯತ್ಯಾಸವು ಆಗಬಹುದು. ಇಷ್ಟೇ ಹಣವನ್ನು ಪಿಂಚಣಿಯಾಗಿ ಪಡೆಯುತ್ತೀರಿ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ).