CrimeNEWSದೇಶ-ವಿದೇಶನಮ್ಮರಾಜ್ಯ

ಇಂದು ಮುಂಜಾನೆ ಗಲ್ಲಿಗೇರಿದ ನಿರ್ಭಯಾ ಹಂತಕರು

ಧನ್ಯವಾದ ಅರ್ಪಿಸಿದ ನಿರ್ಭಯಾ ತಾಯಿ l ಮಾನವ ಹಕ್ಕು ಹೋರಾಟದ ಮೇಲೆ ಅಳಿಸಲಾಗದ ಕಲೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ತಿಹಾರ್ ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಅವರನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದೆ.

ಈ ನಡುವೆ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಕ್ರಮ ಭಾರತದ ಮಾನವ ಹಕ್ಕು ಹೋರಾಟದ ಮೇಲೆ ಅಳಿಸಲಾಗದ ಕಲೆಯನ್ನುಂಟು ಮಾಡಿದೆ ಎಂದು ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಹೇಳಿದೆ.

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿರುವ ಈ ಸಂಸ್ಥೆ, ಮರಣ ದಂಡನೆ ಎಂದೂ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ ಪರಿಹಾರವಲ್ಲ ಎಂದು ಹೇಳಿದೆ.

2015 ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ಭಾರತದಲ್ಲಿ ಗಲ್ಲು ಶಿಕ್ಷೆಯಾಗಿರಲಿಲ್ಲ. ಆದರೆ ಶುಕ್ರವಾರ ಏಕಕಾಲದಲ್ಲೇ ನಾಲ್ಕು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಈ ಮೂಲಕ ಜನಪ್ರತಿನಿಧಿಗಳು ಅಪರಾಧವನ್ನು ನಿಭಾಯಿಸುವ ಅಥವಾ ನಿಯಂತ್ರಿಸುವುದಕ್ಕಾಗಿ ಮರಣ ದಂಡನೆ ಅಥವಾ ಗಲ್ಲು ಶಿಕ್ಷೆಯನ್ನು ವೈಭವೀಕರಿಸಿದ್ದಾರೆ. ಆದರೆ ಮಹಿಳೆಯ ವಿರುದ್ಧದ ದೌರ್ಜನ್ಯ ತಡೆಗೆ ಮರಣದಂಡನೆ ಎಂದಿಗೂ ಪರಿಹಾರವಲ್ಲ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ.

ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯಲು ಸಂರಕ್ಷಣಾ ಕಾರ್ಯ ವಿಧಾನಗಳಂತಹ ಪರಿಣಾಮಕಾರಿ, ದೀರ್ಘಕಾಲೀನ ಪರಿಹಾರಗಳನ್ನು ಜಾರಿಗೊಳಿಸಬೇಕಿದೆ. ತನಿಖಾ ವ್ಯವಸ್ಥೆಯನ್ನು ಸುಧಾರಿಸುವುದು, ಕಾನೂನು ಕ್ರಮಗಳನ್ನು ಬಲಪಡಿಸುವುದು ಮತ್ತು ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡುವುದು ನಿಜಕ್ಕೂ ಅತ್ಯಗತ್ಯವಾಗಿದೆ ಎಂದು  ಹೇಳಿದ್ದಾರೆ.

ಕೊನೆ ಕ್ಷಣದ ಅರ್ಜಿಯೂ ತಿರಸ್ಕಾರ

ಇಂದು ಬೆಳಗ್ಗೆಯ ಗಲ್ಲುಶಿಕ್ಷೆಗೆ ತಡೆನೀಡುವಂತೆ ನಿರ್ಭಯಾ ಹಂತಕರು ನ್ಯೂಡೆಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಕೊನೆ ಕ್ಷಣದ ಅರ್ಜಿಯನ್ನು ತಿರಸ್ಕರಿಸಿದ್ದು, ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದು ಫಿಕ್ಸ್‌ ಆಯಿತು. ರಾತ್ರಿ 11.15ರವರೆಗೆ ವಿಚಾರಣೆ ನಡೆಸಿದ ನ್ಯಾ.ಮನಮೋಹನ್‌ ಮತ್ತು ನ್ಯಾ.ಸಂಜೀವ್‌ ನರೂಲಾ ಇದ್ದ ಪೀಠವು ”ಡೆತ್‌ ವಾರೆಂಟ್‌ಗೆ ಬೆಲೆ ಇಲ್ಲವೆ? ಅಕ್ಷಯ್‌ ಪತ್ನಿ ವಿಚ್ಛೇದನ ಅರ್ಜಿ ಬಾಕಿ ಇದೆ ಎಂಬುದು ಗಲ್ಲುಶಿಕ್ಷೆಗೆ ತಡೆ ನೀಡಲು ಸಕಾರಣವಲ್ಲ ಎಂದು ಹೇಳಿತು..

ಗಲ್ಲುಶಿಕ್ಷೆ ಜಾರಿಗೆ ತಡೆ ನೀಡಲು ಸೆಷೆನ್ಸ್‌ ಕೋರ್ಟ್‌ ನಿರಾಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

15 ದಿನಗಳ ಬಳಿಕ ಕೊನೆಯುಸಿರೆಳೆದಿದ್ದ  ನಿರ್ಭಯಾ

2012ರ ಡಿಸೆಂಬರ್‌ 16ರ ಮಧ್ಯರಾತ್ರಿ ವೈದ್ಯ ವಿದ್ಯಾರ್ಥಿನಿ ನಿರ್ಭಯಾ ಮತ್ತು ಆತನ ಸ್ನೇಹಿತ ನ್ಯೂಡೆಲ್ಲಿಯ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆರು ಮಂದಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೇ ಬರ್ಬರವಾಗಿ ಹಿಂಸೆ ನೀಡಿದ್ದರು. ಜತೆಗಿದ್ದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಸಿಂಗಾಪುರದಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ 15 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಳು.

ಮೂರು ಸಲ ಡೆತ್‌ ವಾರೆಂಟ್‌

ತ್ವರಿತ ನ್ಯಾಯಾಲಯವು 2013 ರಲ್ಲಿಯೇ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ, ಅಕ್ಷಯ್‌ಕುಮಾರ್‌ ಸಿಂಗ್‌, ರಾಮ್‌ಸಿಂಗ್‌ಗೆ ಗಲ್ಲು ಶಿಕ್ಷೆ ನೀಡಿತ್ತು. ರಾಮ್‌ಸಿಂಗ್‌ 2013ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ, ಬಾಲಾಪರಾಧಿಯನ್ನು 2015ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದೇ ವರ್ಷದ ಜನವರಿ 22, ಫೆಬ್ರವರಿ 1 ಮತ್ತು ಮಾರ್ಚ್ 3ರಂದು ನೇಣಿಗೆ ಏರಿಸಲು ಡೆತ್‌ ವಾರೆಂಟ್‌ ಹೊರಡಿಸಲಾಗಿತ್ತು. ನಾಲ್ವರ ಗಲ್ಲು ಶಿಕ್ಷೆಯನ್ನು ನ್ಯೂಡೆಲ್ಲಿ ಹೈಕೋರ್ಟ್‌  ಎತ್ತಿ ಹಿಡಿದಿತ್ತು. ಆದರೂ ಕಾನೂನು ಹೋರಾಟದಿಂದ ಶಿಕ್ಷೆ ಜಾರಿ ವಿಳಂಬವಾಗಿತ್ತು. ಮೂರು ಸಲ ನೇಣಿಗೇರಿಸುವ ದಿನ ನಿಗದಿಪಡಿಸಿ ಡೆತ್‌ ವಾರೆಂಟ್‌ ಹೊರಡಿಸಿದರೂ, ಶಿಕ್ಷೆ ಜಾರಿ ಮುಂದೂಡುವಲ್ಲಿ ಅಪರಾಧಿಗಳು ಯಶಸ್ವಿಯಾಗಿದ್ದರು.

ಪ್ರತಿಯೊಬ್ಬರಿಗೂ ಧನ್ಯ

ನಿರ್ಭಯಾ ತಾಯಿ ಆಶಾ ದೇವಿ ಸುದ್ದಿಗಾರರೊಂದಿಗೆ ಮಾತನಾಡಿ, ಜೀತೇಂದ್ರ ಮತ್ತು ಸೀಮಾಜೀ ವಕೀಲಿ ವೃತ್ತಿ ಜತೆ ತಮ್ಮ ಕೆಲಸ ಮಾಡಿದರು. ನಮ್ಮ ನ್ಯಾಯ ಸಿಗಲಿದೆ ಎಂಬ ಭರವಸೆಯನ್ನು ನೀಡಿದ್ದರು. ಇಂದು ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ ಎಂದರು.

ರಾಷ್ಟ್ರಪತಿ, ಸರ್ಕಾರ ಮತ್ತು ದೇಶದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅಪರಾಧಿಗಳು ಪದೇಪದೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಡೆತ್ ವಾರೆಂಟ್ ಮುಂದೂಡಿಕೆಯಾಗಿತ್ತು. ಹಾಗಾಗಿ ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿತ್ತು. ಇಂದು ಏಕಕಾಲದಲ್ಲಿ ನಾಲ್ವರಿಗೂ ಶಿಕ್ಷೆಯಾಗಿದೆ ಎಂದು ಹೇಳಿದರು.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...