4 ಸಾರಿಗೆ ನಿಗಮಗಳ ನಿವೃತ್ತ ನೌಕರರ ₹416 ಕೋಟಿ ನುಂಗಿದ್ರಾ ಭ್ರಷ್ಟ ಅಧಿಕಾರಿಗಳು? ರಾಜ್ಯದ ಮುಖ್ಯಮಂತ್ರಿ, ಸಾರಿಗೆ ಸಚಿವರು ಕೈಗೆ ಏನು ಹಾಕಿಕೊಂಡು ಕುಳಿತಿದ್ದಾರೆ…!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಅಗೆದಷ್ಟು ಭ್ರಷ್ಟಾಚಾರ ಬಯಲಿಗೆ ಬರುತ್ತಲೇ ಇದೆ ಆದರೂ ಇದಕ್ಕೆ ಸಂಬಂಧಪಟ್ಟ ಸಚಿವರು ಮತ್ತು ಆಡಳಿತ ಮಂಡಳಿ ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಇವರು ಕೂಡ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಿಂಬಾಗಿಲಿನಿಂದ ಕುಮ್ಮುಕ್ಕು ಕೊಡುತ್ತಿದ್ದಾರೇನೋ ಎಂಬ ಅನುಮಾನ ಮೂಡುತ್ತಿದೆ.
ಕೆಲಸ ಮಾಡುತ್ತಿದ್ದಾಗಲು ಸಮಯಕ್ಕೆ ಸರಿಯಾಗಿ ಸರಿಯಾದ ವೇತನ ಕೊಡಲಿಲ್ಲ. ಇನ್ನು ನಿವೃತ್ತರಾದಗಲಾದರೂ ತಮಗೆ ಬರುಬೇಕಿರುವ ಹಣ ಕೈಸೇರುತ್ತದೆ ಅದರಿಂದ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ನಮ್ಮ ಆರೋಗ್ಯ ಸಮಸ್ಯೆಗೆ ಉಪಯೋಗಿಸಿಕೊಳ್ಳಬಹುದು ಎಂದುಕೊಂಡೆ ಅದನ್ನು ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸಾರಿಗೆ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ ಸುಮಾರು ₹416 ಕೋಟಿ ಬರಬೇಕಿದೆ. ಅದರೆ ಅದನ್ನು ನೌಕರರಿಗೆ ಕೊಡುವ ಬದಲು ಅಧಿಕಾರಿಗಳೇ ನುಂಗಿ ನೀರು ಕುಡಿದರಾ? ಅಧಿಕಾರಿಗಳು ಜತೆ ಆಡಳಿತ ಮಂಡಳಿ, ಸಚಿವರೂ ಸೇರಿ ಕೊಂಡು ನುಂಗಿದ್ರಾ..? ಇಲ್ಲ ಸಂಸ್ಥೆಗಾಗಿ ಬಳಕೆ ಮಾಡಿದ್ದಾರಾ? ಈ ಬಗ್ಗೆ ಸರಿಯಾಗಿ ಸಚಿವರು ಉತ್ತರ ಕೊಡುತ್ತಿಲ್ಲ, ನಿಗಮದ ಅಧಿಕಾರಿಗಳು ಕೊಡುತ್ತಿಲ್ಲ.
ಅಂದರೆ 4 ನಿಗಮದ ಅಧಿಕಾರಿಗಳು ₹416 ಕೋಟಿ ನುಂಗಿ ನೀರು ಕುಡಿಯಲು ಹೊರಟಿದ್ದಾರಾ ಎಂ ಅನುಮಾನ ಕಾಡುತ್ತಿದೆ. ಇಲ್ಲಿ ಪ್ರತಿ ನಿವೃತ್ತ ನೌಕರನಿಗೆ ₹10 ರಿಂದ ₹15 ಲಕ್ಷ ಕೊಡಬೇಕು. ಅದು ಅಧಿಕಾರಿಗಳು ಅವರ ತಾತಾ ಇಲ್ಲ ಅಪ್ಪನ ಮನೆಯಿಂದ ನೌಕರರಿಗೆ ದಾನವಾಗಿ ಕೊಡುತ್ತಿದ್ದಾರಾ? ಅದು ನೌಕರರ ಸಂಬಳದಲ್ಲಿ ಕಟ್ ಮಾಡಿದ ಗ್ರಾಚ್ಯೂಟಿ ಹಣ. ಅದನ್ನು ಕೊಡುವುದಕ್ಕೂ ನಾಯಿಯಂತೆ ಅಲೆಸುತ್ತಿದ್ದಾರೆ ಇವರಿಗೇನು ಮನುಷ್ಯತ್ವವೇ ಇಲ್ಲವೇ? ಇಂಥ ಭ್ರಷ್ಟ ಅಧಿಕಾರಿಗಳ ಹೆಡೆ ಮುರಿಕಟ್ಟುವ ಪುರುಷತ್ವ ಸರ್ಕಾರಕ್ಕೆ ಇಲ್ಲವೇ ಎಂದು ಕೇಳಬೇಕಿದೆ.
₹416 ಕೋಟಿ ಗ್ರಾಚ್ಯೂಟಿ ಹಣ ಎಲ್ಲಿ ಹೋಗಿದೆ. ಅಧಿಕಾರಿಗಳು ತಮ್ಮ ಹೆಂಡತಿ ಮಕ್ಕಳೊಂದಿಗೆ ಶೋಕಿ ಮಾಡಲು ಈ ನೌಕರರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರಾ? ಪಾಪ ಇತ್ತ ಸಂಬಳವು ಇಲ್ಲ, ಅತ್ತ ಗ್ರಾಚ್ಯೂಟಿ ಹಣವು ಇಲ್ಲದೆ ಸುಮಾರು 3300 ನಿವೃತ್ತ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ಅಂಥ ನೌಕರರ ಜತೆ ಚೆಲ್ಲಾಟವಾಡ್ತಿರುವ ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬೆವರಿಳಿಸುವವರು ಸರ್ಕಾರದಲ್ಲಿ ಇಲ್ಲವೇ?
ಇನ್ನು ನಿವೃತ್ತಿಗೊಂಡು ಗ್ರಾಚ್ಯೂಟಿ ಹಣಕ್ಕಾಗಿ ಕಾಯುತ್ತಿರುವ ನೌಕರರಿಗೆ ಕೆಎಸ್‌ಆರ್‌ಟಿಸಿ- ₹85 ಕೋಟಿ, ಬಿಎಂಟಿಸಿ- ₹94 ಕೋಟಿ, – KKRTC- ₹33 ಕೋಟಿ, NWKRTC – ₹ 204 ಕೋಟಿ ಕೊಡಬೇಕು. ಈ ನಾಲ್ಕು ನಿಗಮದಿಂದ ಒಟ್ಟು ₹416 ಕೋಟಿ ಬರಬೇಕು. ಈ ಗ್ರಾಚ್ಯೂಟಿ ಹಣವನ್ನೇ ನಂಬಿಕೊಂಡ ನೌಕರರ ಬದುಕು ಈಗ ಚಿಂತಾಜನಕವಾಗಿದೆ.
ಇದನ್ನು ಕೇಳಬೇಕಾದ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಕೈಗೆ ಏನು ಹಾಕಿಕೊಂಡು ಕುಳಿತಿದ್ದಾರೋ ಎಂಬುವುದು ನಮಗೆ ತಿಳಿಯುತ್ತಿಲ್ಲ. ಏಕೆಂದರೆ ಅವವರು ಅಧಿಕಾರಿಗಳು ಮತ್ತ ಭ್ರಷ್ಟರಿಗಷ್ಟೇ ಹತ್ತಿರದಲ್ಲಿರೋದು. ಸಾರಿಗೆ ನೌಕರರ ಬಳಿಗೂ ಹೋಗೋದಿಲ್ಲ ಅಂದಮೇಲೆ ಜನರ ಬಳಿಗಂತೂ ಬರೋದೇ ಇಲ್ಲ. ನಾವೇ ಹೋದರು ನಮ್ಮನ್ನು ಹತ್ತಿರ ಬಿಟ್ಟಿಕೊಳ್ಳುವುದೂ ಇಲ್ಲ. ಹೀಗಾಗಿ ಅವರ ಕೈಗಳಲ್ಲಿ ಏನಿದೆ ಅನ್ನೂದು ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದು. ಕೂಡಲೇ ನೌಕರರಿಗೆ ಸಿಗಬೇಕಿರುವ 416 ಕೋಟಿ ಗ್ರಾಚ್ಯೂಟಿ ಹಣವನ್ನು ಕೊಡಲು ಕ್ರಮ ವಹಿಸಿ ಎಂದು ಛೀಮಾರಿ ಹಾಕುತ್ತಿದ್ದಾರೆ.