NEWSನಮ್ಮಜಿಲ್ಲೆನಮ್ಮರಾಜ್ಯ

20ವರ್ಷಗಳಿಂದ ಸಾರಿಗೆ ನಿಗಮಗಳಿಗೆ 4265.80ಕೋಟಿ ರೂ. ಪಾವತಿಸದೆ ಉಂಡೆನಾಮ ತಿಕ್ಕಿದ ರಾಜ್ಯ ಸರ್ಕಾರಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ನಮಗೂ ಸರಿ ಸಮಾನ ವೇತನಕೊಡಿ ಎಂದು ಬೀದಿಗಿಳಿದು ಹೋರಾಟ ಮಾಡಿದರು ಅವರ ಹೋರಾಟವನ್ನು ಹತ್ತಿಕ್ಕಿದ ರಾಜ್ಯ ಬಿಜೆಪಿ ಸರ್ಕಾರ ವೇತನ ಹೆಚ್ಚಳ ಮಾಡುವ ಭರವಸೆ ನೀಡಿ ಮೋಸ ಮಾಡಿತು. ಅಲ್ಲದೆ ನೌಕರರನ್ನು ಬೀದಿಗೆ ತಳ್ಳಿತು.

ಇನ್ನು ಇದಕ್ಕೂ ಮೊದಲು ಕಳೆದ 2001ರಿಂದ 2021ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌, ಜೆಡಿಎಸ್‌, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಸರ್ಕಾರ, ಬಳಿಕ ಬಂದ ಬಿಜೆಪಿ – ಜೆಡಿಎಸ್‌ ಮೈತ್ರಿಸರ್ಕಾರ, ಇನ್ನು ಈ ನಡುವೆ ಕೆಲಗೊಂದಲದಿಂದ ಬಿಜೆಪಿ – ಜೆಡಿಎಸ್‌ ಮೈತ್ರಿಸರ್ಕಾರ ಬಿದ್ದುಹೋಗಿ ನಂತರ ವಿಧಾನಸಭಾ ಚುನಾವಣೆ ನಡೆಯಿತು.

ಆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಐದು ವರ್ಷ ಅಧಿಕಾರ ಅನುಭವಿಸಿತು. ನಂತರ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು. ಅಂತೆಯೆ 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಸಿಗದೆ ಅತಂತ್ರ ಸ್ಥಿತಿ ತಲುಪಿ ಬಳಿಕ ಹಲವು ರಾಜಕೀಯ ಸರ್ಕಸ್‌ ನಂತರ ಬಿಜೆಪಿ ಅಧಿಕಾರ ಅನುಭವಿತು.

ಈ ಎಲ್ಲ ಪಕ್ಷಗಳು ತಮ್ಮ ಅಧಿಕಾರವಧಿಯಲ್ಲಿ ಅಂದರೆ 2001ರಿಂದ 2021ರ ಮಾರ್ಚ್‌ವರೆಗೂ ಸಾರಿಗೆ ನಿಗಮಗಳಿಗೆ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಪತ್ರಕರ್ತರು ಸೇರಿ ಹಲವಾರು ಮಂದಿಗೆ ನೀಡಿರುವ ಪಾಸ್‌ಗಳ ಹಣವನ್ನು ನಿಗಮಗಳಿಗೆ ನೀಡದೆ ಸರ್ಕಾರಗಳು ಮುಂದೂಡಿಕೊಂಡೆ ಬಂದಿವೆ.

ಇದರಿಂದ ನಿಗಮಗಳು ತಮ್ಮ ಅಧಿಕಾರಿಗಳು ಮತ್ತು ನೌಕರರಿಗೆ ಸರಿಯಾದ ಸಮಯಕ್ಕೆ ವೇತನಕೊಡಲಾಗದೆ ತತ್ತರಿಸಿಹೋಗುತ್ತಿವೆ. ಅಲ್ಲದೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡುವುದಕ್ಕೂ ಸರ್ಕಾರವನ್ನು ಅವಲಂಬಿಸಿವೆ. ಅದಕ್ಕೆ ಕಾರಣ ನಿಗಮಗಳು ಸರ್ಕಾರದ ಅಧೀನ ಸಂಸ್ಥೆಗಳಾಗಿರುವುದು.

ಆದರೆ, ಈ ಸಂಸ್ಥೆಗಳಿಗೆ ಸರಿಯಾದ ಸಮಯಕ್ಕೆ ಅವುಗಳಿಗೆ ಪಾವತಿಸಬೇಕಾದ ಹಣವನ್ನು ಪಾವತಿಸದೆ 2001 ರಿಂದ 2021ರ ವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿಕೊಂಡು ಬಂದಿರುವ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಸಾರಿಗೆಯ ನಾಲ್ಕೂ ನಿಗಮಗಳಿಗೂ ಉಂಡೆನಾಮ ಹಾಕುತ್ತಲೇ ಬಂದಿದ್ದಾರೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಕಳೆದ 20 ವರ್ಷಗಳಿಂದ (2021ರ ಮಾರ್ಚ್‌ ವರೆಗೂ ) ಸಾರಿಗೆಯ ನಾಲ್ಕೂ ನಿಗಮಗಳಿಗೆ ಒಟ್ಟು 4265.80 ಕೋಟಿ ರೂಪಾಯಿಯನ್ನು ಪಾವತಿಸದೆ ಸಾರ್ವಜನಿಕರಿಗೆ ಅತ್ಯವಶ್ಯವಾಗಿ ಬೇಕಿರುವ ನಿಗಮಗಳನ್ನು ಕಡೆಗಣಿಸಿಕೊಂಡು ಬಂದಿವೆ.

ಈ ವಿಷಯ ಲೆಕ್ಕ ಪರಿಶೋಧನೆಯಲ್ಲಿ ಬಟಾಬಯಲಾಗಿದೆ. ಈ ಬಗ್ಗೆ ಕೇಳಬೇಕಾದ ನಿಗಮಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಐಎಎಸ್‌ ಅಧಿಕಾರಿಗಳು ಅಂದರೆ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಸುಮ್ಮನಾಗಿರುವುದು ಬಿಟ್ಟರೆ ಬೇರೆ ಏನನ್ನು ಮಾಡಿಲ್ಲ. ಕಾರಣ ತಮ್ಮನ್ನು ನಿಗಮದಿಂದ ಎಲ್ಲಿ ಎತ್ತಂಗಡಿ ಮಾಡಿಬಿಡುತ್ತಾರೋ ಎಂಬ ಭಯ.

ಇನ್ನು ನೌಕರರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ನೌಕರರ ಪರ ಸಂಘಟನೆಗಳು ಕೂಡ ಈ ಬಗ್ಗೆ ಚಕಾರವೆತ್ತದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರಿಂದ ರಾಜ್ಯದಲ್ಲಿ ಲಾಭದಲ್ಲಿದ್ದ ಸಾರಿಗೆ ನಿಗಮಗಳನ್ನು ಯಾವಾಗಲು ಲಾಸ್‌ ಲಾಸ್‌ ಎಂದು ತೋರಿಸಿಕೊಂಡೇ ಬಂದಿರುವ ಸರ್ಕಾರಗಳು ಈಗಲು ಅದನ್ನೇ ಮಾಡುತ್ತಿವೆ.

ಸರ್ಕಾರ ಸಾರಿಗೆ ನಿಗಮಗಳಿಗೆ ಸಮಯಕ್ಕೆ ಸರಿಯಾಗಿ ಕೊಡಬೇಕಾದ ಹಣ ಪಾವತಿಸಿದ್ದರೆ, ಇನ್ನಷ್ಟು ಉತ್ಸಾಹದಿಂದಲೇ ನೌಕರರು ಕೆಲಸ ಮಾಡುತ್ತಿದ್ದರು. ಈಗಲೂ ಆ ಕೆಲಸ ಮಾಡಿದರೆ ಸದೃಢವಾಗಿರಲಿವೆ. ಆದರೆ, ಆ ಯೋಚನೆ ಮಾಡದೆ ದಿವಾಳಿಯತ್ತ ನೂಕುತ್ತಲೇ ಇರುವುದು ನೋವಿನ ಸಂಗತಿಯಾಗಿದೆ.

ಇದರ ನಡುವೆ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಅದರ ಹಣವನ್ನು ಪಾವತಿಸಲು ಹೆಣಗಾಡುತ್ತಿದೆ ಪ್ರಸ್ತುತವಿರುವ ರಾಜ್ಯ ಸರ್ಕಾರ. ಇನ್ನು ಕೊಡಬೇಕಿರುವ 4265.80 ಕೋಟಿ ರೂಪಾಯಿಯನ್ನು ಯಾವಾಗ ಕೊಡುತ್ತದೋ ಗೊತ್ತಿಲ್ಲ. ಈಗ ಇದರ ಜತೆಗೆ 2021-2022 ಹಾಗೂ 2022-2023ನೇ ಸಾಲಿನಲ್ಲಿ ಬರಬೇಕಿರುವ ಹಣವನ್ನು ಬಿಡುಗಡೆ ಮಾಡಬೇಕಿದೆ.

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕಿರುವ ಹಣವನ್ನು ಹೇಗೆ ಪಾವತಿಸುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು