NEWS

ಶೆಟ್ಟಿಹಳ್ಳಿಯಲ್ಲಿ 4 ನೇ ಬಿಎಸ್ ವೈ ಕ್ಯಾಂಟೀನ್ ಆರಂಭ

ಯುವ ಮುಖಂಡ ಸುರೇಶ್ ಶ್ರಮಕ್ಕೆ ಮಾಜಿ ಶಾಸಕ ಮುನಿರಾಜು ಶ್ಲಾಘನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು (ದಾಸರಹಳ್ಳಿ): ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳು ಸೀಲ್ ಡೌನ್ ಆದರೂ, ದಾಸರಹಳ್ಳಿ ವಿಧಾನಸಭಾಕ್ಷೇತ್ರದಲ್ಲಿ ಮನೆ ಮನೆಗೆ ಆಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜು ಮಾಡುವ ಸ್ವಯಂಸೇವಕರು ಹೆಚ್ಚಿದ್ದಾರೇ, ಪ್ರತಿ ವಾಡ್೯ನ ಸದಸ್ಯರೇ ಆಯಾ ಕ್ಷೇತ್ರದ ಉಸ್ತವಾರಿ ವಹಿಸುತ್ತಾರೇ ಎಂದು ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ಹೇಳಿದರು.

ದಾಸರಹಳ್ಳಿ ನಗರದ ವಾಡ್೯ ನಂ.12 ರ ಶೆಟ್ಟಿಹಳ್ಳಿ ಯಲ್ಲಿ ಯುವಮುಖಂಡ ಸುರೇಶ್ ಮತ್ತು ಸಂಗಡಿಗರು ಸೇರಿ ನೂತನವಾಗಿ ಪ್ರಾರಂಭವಾದ ಕ್ಷೇತ್ರದ ನಾಲ್ಕನೇ ಬಿಎಸ್ ವೈ ಕ್ಯಾಂಟೀನ್ ಗೆ ಚಾಲನೆ ನೀಡಿ, ಆಹಾರ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಿಎಸ್ ವೈ ಕ್ಯಾಂಟೀನ್ ಇದ್ಶಾಗಿದ್ದು, ಮಹಾಮಾರಿ ಕೊರೊನಾ ಹಿನ್ನೆಲೆ ದೇಶ ಲಾಕ್ ಡೌನ್ ಆದ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಮುಖ್ಯವಾಗಿ ಈ ವಾಡ್೯ನಲ್ಲಿರುವ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟ ಸಿಗದ ಪರಿಸ್ಥಿತಿ ಯಾಗಬಾರದು, ಎಲ್ಲರಿಗೂ ಆಹಾರ ಸಿಗುವಂತಾಗಬೇಕಬ ಸದುದ್ದೇಶದಿಂದ ಈ ಕ್ಯಾಂಟೀನ್ ಆರಂಭವಾಗಿದೆ ಎಂದರು.

ಈಗಾಗಲೇ ಮಲ್ಲಸಂದ್ರ, ಚಿಕ್ಕಬಾಣಾವಾರ, ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ, ಪ್ರಾರಂಭವಾಗಿ ಪ್ರತಿನಿತ್ಯ ಆಹಾರ ವಿತರಿಸುತ್ತಿದ್ದೇವೆ, ವಾಡ್೯ನ ಯುವಮುಖಂಡ ಸುರೇಶ್ ರ ತಂದೆ ಬೋರೇಗೌಡ್ರು, ಲಕ್ಷ್ಮಮ್ಮರ ಆಶೀರ್ವಾದದೊಂದಿಗೆ ಆಹಾರ ಸಾಮಗ್ರಿ ವಿತರಿಸುತ್ತಿದ್ಧಾರೆ. ಆಹಾರದ ಜೊತೆಗೆ ಶುದ್ಧ ಕುಡಿಯುವ ನೀರಿನ್ನು‌ ನೀಡುತ್ತಿದ್ದಾರೆ. ಲಾಕ್ ಡೌನ್ ಮುಕ್ತಾಯದವರೆಗೂ ಬೆಳಗ್ಗೆಯಿಂದ ಮಧ್ಯಾಹ್ನ ದ ವರೆಗೆ ಈ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ,ದಾಸರಹಳ್ಳಿ  ಮಂಡಲ ಬಿಜೆಪಿ ಅಧ್ಯಕ್ಷ  ಎನ್.ಲೋಕೇಶ್ ,ನಾಮ ನಿರ್ದೇಶಿತ ಪಾಲಿಕೆ ಸದಸ್ಯ ಗಂಗರಾಜು , ರಾಮಕೃಷ್ಣಯ್ಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್ ,ರಮೇಶ್ ಯಾದವ್ ,ಜಬ್ಬರ್ ,ಇನ್ನೂ ಮುಂತಾದವರು ಇದ್ದರು.

ಬಿಎಸ್ ವೈ ಕ್ಯಾಂಟೀನ್ ನಲ್ಲಿ ಆಹಾರ ಪಡೆದುಕೊಂಡು ಹೋದವರು ಉಳಿದವರಿಗೂ ತಿಳಿಸಿ, ಯಾರು ಹಸಿವಿನಿಂದ ಇರಬಾರದು, ನಮ್ಮ ಕ್ಷೇತ್ರ ನಾಲ್ಕು ಬಿಎಸ್ ವೈ ಕ್ಯಾಂಟೀನ್ ನಿಂದ ಕಾರೋನ ಸಂದರ್ಭದಲ್ಲೂ ಆಹಾರದ ವಿಚಾರದಲ್ಲಿ ಸಂತೃಪ್ತರಾಗಿದ್ದಾರೆ”.

l ಸುರೇಶ್, ಯುವ ಮುಖಂಡ ಶೆಟ್ಟಿಹಳ್ಳಿ

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ