NEWSಸಿನಿಪಥ

ಕಿರುತೆರೆ ಕಲಾವಿದರು ಮನೆಯಲ್ಲಿ ಕುಳಿತು ಏನುಮಾಡ ಹೊರಟಿದ್ದಾರೆ ….

ಕಿರುತೆರೆ ನಟಿ ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ ಕೈಚಳಕ ನೋಡಿ

ವಿಜಯಪಥ ಸಮಗ್ರ ಸುದ್ದಿ

ವಿಶ್ವಮಾರಿ ಕೊರೊನಾದಿಂದಾಗಿ ಇಡೀ ವಿಶ್ವವೇ ಮಕಾಡೆ ಮಲಗಿದೆ.  ಪ್ರತಿಯೊಬ್ಬರೂ ಕೂಡಾ ಮನೆಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ ಡೌನ್, ಸೀಲ್‌ಡೌನ್‌ ಮತ್ತು ಕ್ವಾರಂಟೈನ್‌ ನಿಂದಾಗಿ ಮನೆಯಿಂದ ಹೊರಗೆ ಕಾಲಿಡದಂತಹ ಸ್ಥಿತಿ ಬಂದೊದಗಿದೆ.

ಆದರೆ ಪ್ರಸ್ತುತ ಸನ್ನಿವೇಶದಲ್ಲಿ  ಮನೆಯಲ್ಲೂ ಕೂರಲು ಸಾಧ್ಯವಾಗುತ್ತಿಲ್ಲ. ಏಕೆ ಎಂದು ಯೋಚಿಸುತ್ತಿದ್ದೀರ ಅದಕ್ಕೆ ಪ್ರಮುಖ ಕಾರಣವು ಇಲ್ಲದಿಲ್ಲ. ನೋಡಿ….. ನಿತ್ಯ ಅಡುಗೆ ಮಾಡುತ್ತಲೋ ಇಲ್ಲ ಯಾವುದೋ ಬೇರೆ ಮನೆಕೆಲಸ ಮಾಡಿಕೊಂಡೆ ಟಿವಿ ಮುಂದೆ ಸುಳಿದಾಡುತ್ತ ಎಂಜಾಯ್‌ ಮಾಡುತ್ತಿದ್ದ ಗೃಹಿಣಿಯರಿಗೆ ಈಗ ಬೇಜಾರೂ ಆಗುತ್ತಿದೆ. ಕಾರಣ ಏನಪ್ಪ ಅಂದರೆ ಪ್ರತಿದಿನ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕಲಾವಿದರೇ  ಶೂಟಿಂಗ್ ಇಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವುದು.

ಹೌದು ನಿತ್ಯ ಎಲ್ಲರ ಮನೆಗಳ ಕಿರುಪರದೆಯ ಮೇಲೆ ಸ್ವಲ್ಪ ಕಾಮಿಡಿ, ಕೀಟಲೆ, ತರ್ಲೆ  ಜತೆಗೆ ಜೀವನ ಪಾಠವನ್ನು ತಿಳಿಸಿಕೊಡುತ್ತಿದ್ದ ಧಾರಾವಾಹಿಗಳ ಶೂಟಿಂಗ್‌ ಕೊರೊನಾದಿಂದ ನಿಂತುಹೋಗಿದೆ. ಇನ್ನು ನಿತ್ಯ ಬಿಜಿಯಾಗಿರುತ್ತಿದ್ದ ಕಲಾವಿದರು ತಮಗೇ ಕೆಲಸವಿಲ್ಲದೆ ಸಮಯ ಕಳೆಯಲೂ ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ಸಮಯ ಮುಳುಗುತ್ತಿದ್ದಾರೆ. ಆದರೂ ಸಾಮಯ ದೂಡಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಈ ನಡುವೆ ಕಿರುತೆರೆ ಕಲಾವಿದೆ ಕುಲವಧು ಧಾರಾವಾಹಿಯ ವಚನಾಳಾಗಿ ಟಿವಿ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ ಈ ಲಾಕ್ ಡೌನ್ ಸಮಯದಲ್ಲೇ ಜನರಿಗೆ ಬಹು ಉಪಯುಕ್ತವಾದ ಮಾಹಿತಿಯೊಂದನ್ನು ನೀಡಿದ್ದಾರೆ‌. ಕೊರೊನಾ ವೈರಸ್ ಸೋಕದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳುವ ಸಲುವಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಧರಿಸದೇ ಓಡಾಡುವುದು ಅಕ್ಷಮ್ಯ ಅಪರಾಧ. ಆದ್ದರಿಂದ ಎಲ್ಲರೂ ವೈದ್ಯರ ಸಲಹೆ ಪಾಲಿಸಿ ಎಂದು ಮನವಿ ಮಾಡಿದ್ದಾರೆ.

ತನ್ನಮಾಸ್ಕ್‌ ತಾನೇ ಹೊಲಿದು ಕೊಂಡ ಅಮೃತಾ

ಅಷ್ಟೇಅಲ್ಲ ಶೂಟಿಂಗ್ ಇಲ್ಲದೇ ಮನೆಯಲ್ಲಿ ಪತಿ ರಘು ಅವರೊಡನೆ ಕಾಲ ಕಳೆಯುತ್ತಿರುವ ಅಮ್ಮು  ತಮ್ಮ ಮಾಸ್ಕ್ ಅನ್ನು ತಾವೇ ಹೊಲಿದುಕೊಂಡಿದ್ದಾರೆ. ಮಾತ್ರವಲ್ಲ ನಿಮಗೆ ಬೇಸಿಕ್ ಹೊಲಿಗೆ ತಿಳಿದಿದ್ದರೆ ಮಾಸ್ಕ್ ಅನ್ನು ಮನೆಯಲ್ಲಿ ಹೊಲಿಯಬಹುದು. ಸುಲಭದಲ್ಲಿ ಆಗುತ್ತದೆ. ಅಷ್ಟೇಅಲ್ಲ ನಾವೇ ಹೊಲಿದು ನಾವೇ ಧರಿಸುವುದರಿಂದ  ಏನೂ ತೊಂದರೆ ಇಲ್ಲ ಎಂದು ಒದಷ್ಟು ಉಪಯುಕ್ತ ಮಾಹಿತಿ ನೀಡಿದ್ದಾರೆ.

ಇನ್ನು ಸ್ವಲ್ಪ ಮುಂದುವರಿದು ಮಾಸ್ಕ್ ಹಾಗಬೇಕೆಂದು ಕಾಟಾಚಾರಕ್ಕೆ ಹೊರಗೆ ಹೋಗಿ ಮಾಸ್ಕ್ ತೆಗೆದರೆ ಅದರಿಂದ ರಿಸ್ಕ್ ಕೂಡಾ ಇದೆ. ಆದುದರಿಂದ ಮನೆಯಲ್ಲಿ ತಯಾರು ಮಾಡಿದರೆ ಭಯವಿಲ್ಲ. ನಾನು ಮನೆಯಲ್ಲೇ ಮಾಸ್ಕ್ ತಯಾರು ಮಾಡಿದ್ದೇನೆ. ಹಲವು ಲೇಯರ್ ಗಳ್ಳುಳ್ಳ ಮಾಸ್ಕ್ ತಯಾರಿಸಿದ್ದೇನೆ ನೋಡಿ ಎಂದು ತಾನೇ ತಯಾರಿಸಿರುವ ಮಾಸ್ಕ್‌ ಆಕಿಕೊಂಡು  ಅಮೃತಾ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...