ಹನೂರು: ಪಟ್ಟಣದ ಹೊರವಲಯದ ಎಲ್ಲೆಮಾಳ ಮುಖ್ಯರಸ್ತೆಯ ಜಮೀನೋಂದರಲ್ಲಿ ಬೆಳೆದಿದ್ದ ಕಬ್ಬಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ನಾಶವಾಗಿರುವ ಘಟನೆ ನಡೆದಿದೆ.
ಭಾನುವಾರ ಪಟ್ಟಣದ ನಿವಾಸಿ ಆನಂದ್ ಎಂಬುವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾಗಿದೆ.
5 ಎಕರೆಯಲ್ಲಿ ಕಬ್ಬು ಬೆಳೆಯಲಾಗಿತ್ತು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಬಿದ್ದು ಕಬ್ಬಿನ ಗದ್ದೆ ಸುಟ್ಟುಭಸ್ಮವಾಗಿದ್ದು, ಈ ವೇಳೆ ಬೆಂಕಿ ನಂದಿಸಲು ರೈತರು ಹರಸಾಹಸ ಪಟ್ಟರು ಸಾಧ್ಯವಾಗಿಲ್ಲ.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.