ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ಕೋಟ್ಯಂತರ ಭಕ್ತರು ಕೈ ಮುಗಿಯುತ್ತಿರುವ ರಾಮಲಲ್ಲಾ ಮೂರ್ತಿ ಹಿಂದೆ ಕಣ್ಣೀರ ಕಥೆಯೊಂದು ಬೆಳಕಿಗೆ ಬಂದಿದೆ. ಅಯೋಧ್ಯೆಗೆ ರಾಮಲಲ್ಲಾ ಶಿಲೆ ನೀಡಿದ ವ್ಯಕ್ತಿ ಈಗ ಕಣ್ಣೀರು ಹಾಕುತ್ತಿರುವುದು ಪ್ರಧಾನಿ ಅವರ ಬಂದಿಲ್ಲವೇ ಎಂಬುವುದು ಯಕ್ಷಪತ್ರಶ್ನೆಯಾಗಿದೆ.
ಹೌದು! ನೋಡಿ ರಾಮಲಲ್ಲಾ ಶಿಲೆ ನೀಡಿದ ವ್ಯಕ್ತಿಗೆ 80 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಆತನ ವಿರುದ್ಧ ಗಣಿಗಾರಿಕೆ ಮಾಡಿರುವ ಆರೋಪವನ್ನು ಹೊರಿಸಲಾಗಿದೆ. ರಾಮನ ಮೂರ್ತಿಗಾಗಿ ಶಿಲೆ ಕೊಟ್ಟ ಗುತ್ತಿಗೆದಾರ ಶ್ರೀನಿವಾಸ್‌ಗೆ 80 ಸಾವಿರ ದಂಡ ವಿಧಿಸಲಾಗಿದೆ.
ಶ್ರೀನಿವಾಸ್ ಮೈಸೂರಿನ ಹಾರೋಹಳ್ಳಿ- ಗುಜ್ಜೇಗೌಡನಪುರ ಗ್ರಾಮದ ನಿವಾಸಿಯಾಗಿದ್ದು, ತನ್ನ ಹೆಂಡತಿಯ ಚಿನ್ನಾಭರಣಗಳನ್ನು ಅಡವಿಟ್ಟು ದಂಡ ಕಟ್ಟಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಗಣಿಗಾರಿಕೆ ಮಾಡಿದ್ದಕ್ಕೆ ದಂಡ: ಇತ್ತ ಭೂ ಮಾಲೀಕ ರಾಮದಾಸ್ ಅವರು ಭೂಮಿ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್‌ಗೆ ಗುತ್ತಿಗೆ ನೀಡಿದ್ದರು. ಅದರಂತೆಯೇ ಆ ಕಲ್ಲನ್ನು ಹೊರಕ್ಕೆ ತೆಗೆದು ಜಮೀನಿನ ಪಕ್ಕದಲ್ಲಿ ಇಟ್ಟಿದ್ದೆ. ಆ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಗಣಿಗಾರಿಕೆ ಅಂತ ಆರೋಪ ಮಾಡಿ 80 ಸಾವಿರ ರೂಪಾಯಿ ದಂಡವನ್ನು ನನ್ನಿಂದ ಕಟ್ಟಿಸಿಕೊಂಡಿದ್ದಾರೆ ಎಂದು ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.
ಹೆಂಡತಿ ಚಿನ್ನ ಗಿರಿವಿಯಿಟ್ಟು ದಂಡ ಕಟ್ಟಿದೆ: ವರಮಹಾಲಕ್ಷ್ಮಿ ಹಬ್ಬದ ದಿನವೇ ಹೆಂಡತಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದೇನೆ. ಚಿನ್ನ ಗಿರವಿಗೆ ಇಟ್ಟು ಇಲಾಖೆಗೆ ದಂಡ ಕಟ್ಟಿದ್ದೇನೆ. ರಾಮಲಲ್ಲಾ ಮೂರ್ತಿ ಆಗಿ ಅದು ಈಗ ರೂಪುಗೊಂಡಿದೆ. ನನಗೆ ಈವರಗೆ ಯಾರೂ ಸಹಾಯ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಶ್ರೀನಿವಾಸ್.
ರಾಮಲಲ್ಲಾ ವಿಗ್ರಹದ ಶಿಲೆಯನ್ನು ತೆಗೆದುಕೊಟ್ಟ ನನ್ನ ಕಷ್ಟ ಇನ್ನೂ ತೀರಿಲ್ಲ. ನನಗೂ ಯಾರಾದರೂ ಸಹಾಯ ಮಾಡುತ್ತಾರೆಯೇ ಎಂದು ಎದುರು ನೋಡುತ್ತಿದ್ದೇನೆ ಎಂದು ಗುತ್ತಿಗೆದಾರ ಶ್ರೀನಿವಾಸ್ ತನ್ನ ನೋವನ್ನು ತೋಡಿಕೊಂಡಿದ್ದಾರೆ.