NEWSಕೃಷಿನಮ್ಮರಾಜ್ಯ

ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಅರ್ಹ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೃಷಿ ಇಲಾಖೆ ವತಿಯಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು/ಸೇವಾದಾರ ಸಂಸ್ಥೆಗಳು/ವೈಯಕ್ತಿಕ ಫಲಾನುಭವಿಗಳು (Individual) ಹಾಗೂ ನೊಂದಾಯಿತ ಸಂಘ-ಸಂಸ್ಥೆಗಳಿಂದ (FPO) ಅರ್ಜಿ ಆಹ್ವಾನಿಸಲಾಗಿದೆ.

ಸ್ಥಳೀಯವಾಗಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳ/ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ (farm machinery Bank FMB) ಗಳ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು. ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ ಪ.ಜಾ/ ಪ.ಪಂ ವರ್ಗದ ರೈತರಿಗೆ ಗರಿಷ್ಠ ಶೇ.70 ರಂತೆ ಹಾಗೂ ಸಂಘ-ಸಂಸ್ಥೆಗಳಿಗೆ (ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆ/ FPO ಗಳನ್ನೊಳಗೊಂಡಂತೆ) ಗರಿಷ್ಠ ಶೇ.70 ರಂತೆ ಸಹಾಯಧನವನ್ನು ನೀಡಲಾಗುವುದು.

ವಿವಿಧ ಹಾರ್ವೆಸ್ಟರ್ ಹಬ್‌ಗಳಿಗೆ ನಿಗದಿಪಡಿಸಿದ ಗರಿಷ್ಠ ಸಹಾಯಧನದ ಮೊತ್ತಕ್ಕೆ ಸೀಮಿತಗೊಳಿಸಿ ಸ್ಥಳೀಯವಾಗಿ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನೀಕರಿಸಲು ಪ್ರತಿ ಒಂದು ಹೈಟೆಕ್ ಹಾರ್ವೆಸ್ಟರ್ ಹಬ್ ಘಟಕಕ್ಕೆ ಗರಿಷ್ಠ ಮೊತ್ತ ರೂ.100 ಲಕ್ಷಗಳು ಮೀರದಂತೆ (ರೂ.5 ಲಕ್ಷಗಳ ಆಡಳಿತಾತ್ಮಕ ವೆಚ್ಚ ಒಳಗೊಂಡಂತೆ) ಸಹಾಯಧನವನ್ನು ಒದಗಿಸಲಾಗುವುದು.

ಆಡಳಿತಾತ್ಮಕ ವೆಚ್ಚವನ್ನು ಒಂದು ಬಾರಿ ಮಾತ್ರ ನೀಡಲಾಗುವುದು. (ವೈಯಕ್ತಿಕ ಫಲಾನುಭವಿಗಳನ್ನು ಹೊರತುಪಡಿಸಿ) ಕೃಷಿ ಯಂತ್ರೋಪಕರಣಗಳ ನೈಜ ಬೆಲೆ ಆಧರಿಸಿ ಫಲಾನುಭವಿ ವರ್ಗವಾರು/ಸಂಘ-ಸಂಸ್ಥೆವಾರು(FPO ಗಳನ್ನೊಳಗೊಂಡಂತೆ) ನಿಗದಿಪಡಿಸಿದ ಗರಿಷ್ಠ ಸಹಾಯಧನವನ್ನು ಒದಗಿಸಲಾಗುವುದು. ಸಹಾಯಧನವನ್ನು “Credit linked Back Ended Subsidy” ಮುಖಾಂತರವೇ ನೀಡಲಾಗುವುದು.

ವಿವಿಧ ರೀತಿಯ ಹಾರ್ವೆಸ್ಟರ್ ಹಬ್‌ಗಳಿಗೆ ನಿಗದಿಪಡಿಸಿದ ಗರಿಷ್ಠ ಸಹಾಯಧನದ ಮೊತ್ತಕ್ಕೆ ಮಿತಿಗೊಳಿಸಿ ಸ್ಥಳೀಯವಾಗಿ ಬೆಳೆಗಳ ವಿಸ್ತೀರ್ಣದ ಆಧಾರದ ಮೇಲೆ ಅಗತ್ಯವಿರುವ ಯಂತ್ರೋಪಕರಣಗಳನ್ನು ದಾಸ್ತಾನೀಕರಿಸಬೇಕಾಗಿರುತ್ತದೆ. ಕಂಬೈನ್ಡ್ ಹಾರ್ವೆಸ್ಟರ್ ಹಬ್‌ನಲ್ಲಿ ಕಂಬೈನ್ಡ್ ಹಾರ್ವೆಸ್ಟರ್ ರೊಂದಿಗೆ Baler ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ.

ಆಯ್ಕೆಯಾದ ಫಲಾನುಭವಿಗಳು/ ಸಂಘ-ಸಂಸ್ಥೆಗಳು ಕೃಷಿ ಮೂಲಭೂತ ಸೌಕರ್ಯ ನಿಧಿ(AIF-Agricultural Infrastructure Fund) ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ. ಹೈಟೆಕ್ ಹಾರ್ವೆಸ್ಟರ್ ಹಬ್‌ಗಳಲ್ಲಿ ದಾಸ್ತಾನೀಕರಿಸುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ Corridor ನಲ್ಲಿ ಬರುವ ರೈತರಿಗೆ ಒದಗಿಸಲಾಗುವುದು.

ಆಸಕ್ತ ರೈತರು, ಕೃಷಿ ಯಂತ್ರಧಾರೆ ಕೇಂದ್ರಗಳು/ಸೇವಾದಾರ ಸಂಸ್ಥೆಗಳು ಹಾಗೂ ನೋಂದಾಯಿತ ಸಂಘ-ಸಂಸ್ಥೆಗಳು (FPO ಗಳನ್ನೊಳಗೊಂಡಂತೆ) ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಬೆಂಗಳೂರು ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬೆಂಗಳೂರು ಜಿಲ್ಲೆ ಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ