NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಬಸ್‌ನಲ್ಲಿ 6 ರೂ. ಟಿಕೆಟ್‌ಗೆ 62,313 ರೂ.ಪಾವತಿಸಿ ಎಡವಟ್ಟು ಮಾಡಿಕೊಂಡ ಪ್ರಯಾಣಿಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂಋು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಆನ್‌ಲೈನ್ ಮೂಲಕ ಟಿಕೆಟ್‌ಗೆ 6 ರೂಪಾಯಿ ಬದಲಿಗೆ 62,313 ರೂಪಾಯಿ ಪಾವತಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ಈ ಹಣ ನೇರವಾಗಿ ನಿಗಮದ ಖಾತೆಗೆ ಜಮೆಯಾಗಿದ್ದು, ಅದನ್ನು ಮರಳಿ ಪಡೆಯಲು ಪ್ರಯಾಣಿಕರು ಸಂಕಷ್ಟ ಎದುರಿಸಿದ್ದಾರೆ. ಇದನ್ನು ಗಮನಿಸಿದರೆ ಆನ್‌ಲೈನ್ ಪೇಮೆಂಟ್ ಎಷ್ಟು ಲಾಭಕಾರಿಯೋ ಅಜಾಗರೂಕರಾಗಿದ್ದರೆ ಅಷ್ಟೇ ಹಾನಿಕಾರಿ ಎಂಬುವುದು ಇದರಿಂದ ತಿಳಿಯಬಹುದಾಗಿದೆ.

ಅದೇ ರೀತಿ ಈಗ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಹಣ ಆರು ರೂಪಾಯಿ ಪಾವತಿ ಮಾಡುವ ಬದಲು ವ್ಯಕ್ತಿಯೊಬ್ಬರು ಎಲ್ಲೋ ನೋಡಿಕೊಂಡು 62,313 ಸಾವಿರ ರೂಪಾಯಿ ಪಾವತಿ ಮಾಡಿ ದೊಡ್ಡ ಅನಾಹಹುತ ಮಾಡಿಕೊಂಡಿದ್ದಾರೆ. ನೋಟು ಕೊಟ್ಟರೆ ಕಂಡಕ್ಟರ್ ಚಿಲ್ಲರೆ ಕೊಡಬಹುದು. ಆದರೆ ಈ ಆನ್‌ಲೈನ್ ಪಾವತಿ ನೇರವಾಗಿ ಕೆಎಸ್‌ಆರ್‌ಟಿಸಿ ನಿಗಮದ ಖಾತೆಗೆ ಹೋಗಿ ಸೇರುತ್ತದೆ. ಹೀಗಿರುವಾಗ ಈ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಈಗ ಆ ಪ್ರಯಾಣಿಕನಿಗೆ ದೊಡ್ಡ ಚಿಂತೆಯಾಗಿದೆ.

ಜನವರಿ 14ರಂದು ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದೆ. ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ನಗದು ಹಣ ನೀಡುವ ಬದಲು 6 ರೂಪಾಯಿ ಟಿಕೆಟ್‌ಗೆ ಆನ್‌ಲೈನ್ ಪೇಮೆಂಟ್ ಮಾಡಿದ್ದಾರೆ. ಆದರೆ ಯಾವುದೋ ಯೋಚನೆಯ ಭರದಲ್ಲಿ ಅವರು ಆರು ರೂಪಾಯಿ ಬದಲು 60 ಸಾವಿರ ರೂಪಾಯಿಯನ್ನೇ ಪಾವತಿ ಮಾಡಿದ್ದಾರೆ.

ಅದು ಕೆಲ ನಿಮಿಷದಲ್ಲಿ ಖಾತೆಯಿಂದ ಹಣ ಬಿಎಂಟಿಸಿ ಬ್ಯಾಂಕ್‌ ಖಾತೆಗೆ ಜಮಿಎ ಆಗಿದೆ. ಕೂಡಲೇ ಆ ಪ್ರಯಾಣಿಕನಿಗೆ ತಾನು ಮಾಡಿದ ಎಡವಟ್ಟಿನ ಅರಿವಾಗಿದೆ. ತಕ್ಷಣ ಅವರು ಕಂಡಕ್ಟರ್‌ಗೆ ಈ ವಿಚಾರ ತಿಳಿಸಿದ್ದು, ಖಾತೆಯಲ್ಲಿ ಪರಿಶೀಲಿಸುವಂತೆ ಹೇಳಿದ್ದಾರೆ. ಆಗ ಆ ಪ್ರಯಾಣಿಕ 62,313 ರೂಪಾಯಿ ಬಿಎಂಟಿಸಿ ನಿಗಮದ ಖಾತೆಗೆ ಹಾಕಿರುವುದು ಬೆಳಕಿಗೆ ಬಂದಿದ್ದು ಕಂಡಕ್ಟರ್ ಕೂಡ ಬೆಚ್ಚಿ ಬಿದ್ದಿದ್ದಾರೆ.

ಮುಂದೇನು ಗತಿ?: ಹೀಗೆ ಪ್ರಯಾಣಿಕ ಕಣ್ತಪ್ಪಿನಿಂದ ಹಾಕಿದ ಹಣವನ್ನು ಕೂಡಲೇ ಮರುಪಾವತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಕಂಡಕ್ಟರ್ ತನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಅದಾದ ನಂತರ ಕಂಡಕ್ಟರ್ ಅವರು ತಮ್ಮ ಮೇಲಧಿಕಾರಿಗಳಿಗೆ ವಿಚಾರ ತಿಳಿಸಿ ಆ ಪ್ರಯಾಣಿಕನಿಗೆ ಅವರ ನಂಬರ್ ಡಿಪೋ ಮ್ಯಾನೇಜರ್‌ನ ನಂಬರ್ ನೀಡಿದ್ದಾರೆ.

ಮೇಲಧಿಕಾರಿಗಳು ಪರಿಶೀಲಿಸಿದ ನಂತರವೇ ಈ ಹಣ ಪ್ರಯಾಣಿಕನ ಪಾಲಿಗೆ ಮರಳಿ ಸಿಗಲಿದೆ. ಅಲ್ಲದೇ ಈ ಹಣ ಪಡೆಯುವುದಕ್ಕೆ ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಕೂಡ ಹಣ ಆ ಪ್ರಯಾಣಿಕನಿಗೆ ಪಾವತಿ ಆಗಿಲ್ಲ. ಇಂದು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್ಲೈನ್ ಹಣ ವರ್ಗಾವಣೆ ವೇಳೆ  ಎಚ್ಚರ: ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಹಚ್ಚೇನು ಗಮನಿಸದೇ ಹಣ ವರ್ಗಾವಣೆ ಮಾಡುತ್ತಾರೆ. ಆನ್‌ಲೈನ್ ಹಣ ಪಾವತಿ ಮಾಡುವಾಗ ಎಚ್ಚರ ಬಹಳ ಅಗತ್ಯ. ಹಾಕುತ್ತಿರುವ ಮೊತ್ತ ಹಾಗೂ ಖಾತೆ ಸಂಖ್ಯೆಯನ್ನು ನೀವು ಎರಡೆರಡು ಬಾರಿ ಗಮನಿಸಿಕೊಳ್ಳಬೇಕು. ಇಲ್ಲದೇ ಹೋದರೆ ಈ ರೀತಿ ದೊಡ್ಡ ಅನಾಹುತವಾಗುವು ಪಕ್ಕಾ.

Megha
the authorMegha

Leave a Reply

error: Content is protected !!