NEWSನಮ್ಮರಾಜ್ಯಸಿನಿಪಥ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾರಿ ಅಂತರದಿಂದ ಗೆದ್ದು ಬೀಗಿದ ಹಿರಿಯ ನಟಿ ಜಯಮಾಲಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ.

ಈ Karnataka Film Chamber Of Commerceಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಟಿ ಜಯಮಾಲಾ ಭಾರಿ ಅಂತರದಿಂದ ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಈ ಹಿಂದೆ 2008 ರಿಂದ 2010ರ ವರೆಗೆ ಜಯಮಾಲಾ ಅವರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷೆ ಆಗಿದ್ದರು. ಇದೀಗ 2ನೇ ಬಾರಿಗೆ ಅಧ್ಯಕ್ಷೆ ಆಗಿದ್ದು ಮಂಡಳಿಯ ಪದಾಧಿಕಾರಿಗಳು ಹೂ ಗುಚ್ಛನೀಡಿ ಸ್ವಾಗತಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆ: ಉಪಾಧ್ಯಕ್ಷ, ಖಜಾಂಚಿ ಮುಂತಾದ ಪದಾಧಿಕಾರಿಗಳ ಸ್ಥಾನಗಳಿಗೂ ಚುನಾವಣೆ ನಡೆದಿತ್ತು. ಅದರಂತೆ ಗೌರವ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಸುಂದರ್ ರಾಜ್‌ ಜಯಭೇರಿ ಬಾರಿಸುವ ಮೂಲಕ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಅವರಂತೆ ಎಕ್ಸಿಬ್ಯೂಟರ್‌ ವಲಯದಿಂದ ಕಿಶೋರ್, ಡಿಸ್ಟ್ರಿಬ್ಯೂಟರ್ ವಲಯದಿಂದ ಕೆ.ಮಂಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರ್ಮಾಪಕರ ವಲಯದಿಂದ ಎ.ಗಣೇಶ್, ಡಿಸ್ಟ್ರಿಬ್ಯೂಟರ್ ವಲಯದಿಂದ ರಮೇಶ್, ಎಕ್ಸಿಬ್ಯೂಟರ್ ವಲಯದಿಂದ ಅಶೋಕ್‌ ಕಾರ್ಯದರ್ಶಿ ಸ್ಥಾನಗಳಿಗೆ ಚುನಾಯಿತರಾಗಿದ್ದಾರೆ. ಇನ್ನು ನಟ ಜಯಸಿಂಹ ಮುಸುರಿ ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ.

ಕಳೆದ 2024 – 25ನೇ ಸಾಲಿನ ಚುನಾವಣೆಯಲ್ಲಿ ಎಂ. ನರಸಿಂಹಲು ಗೆದ್ದು ಅಧ್ಯಕ್ಷರಾಗಿದ್ದರು. ಇದೀಗ ಹಿರಿಯ ನಟಿ ಜಯಮಾಲಾ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಭರ್ಜರಿ ಮತ ಬೇಟೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಜಯಮಾಲಾ ಹಾಗೂ ನಿರ್ಮಾಪಕ ಭಾ.ಮಾ ಹರೀಶ್ ಸ್ಪರ್ಧಿಸಿದ್ದರು. ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಈ ಬಾರಿಯ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಒಟ್ಟು 843 ಮತಗಳ ಚಲಾವಣೆ ಆಗಿತ್ತು. ಈ ಪೈಕಿ 512 ವೋಟ್‌ಗಳು ಜಯಮಾಲಾ ಪರವಾಗಿ ಬಿದ್ದಿವೆ. ಭರ್ಜರಿ ಮತಗಳನ್ನು ಪಡೆದು ಜಯಮಾಲಾ ಜಯಭೇರಿ ಬಾರಿಸಿದ್ದರೆ ನಿರ್ಮಾಪಕ ಭಾಮಾ ಹರೀಶ್ ಸೋಲು ಅನುಭವಿಸಿದ್ದಾರೆ.

Megha
the authorMegha

Leave a Reply

error: Content is protected !!