KSRTC: ನಾಲ್ಕು ವರ್ಷಕ್ಕೊಮ್ಮೆಯ ವೇತನ ಪರಿಷ್ಕರಣೆಗೆ ನಮ್ಮ ಒಪ್ಪಿಗೆ ಇಲ್ಲ- ಕೂಟ ಒಕ್ಕೂಟದ ಪದಾಧಿಕಾರಿಗಳ ನಿಲುವು ಅಚಲ

- KSRTC ಎಂಡಿ ಅಧ್ಯಕ್ಷತೆಯಲ್ಲಿ ಮಾ.2ರಂದು ನಡೆದ ಸಭೇಲಿ ಚರ್ಚಿತವಾದ ಪ್ರಮುಖ ವಿಷಯಗಳ ನಡೆವಳಿಯನ್ನು ಮಾ.9ರಂದು ನೀಡಿದ ಎಂಡಿ
ಬೆಂಗಳೂರು: ಇದೇ ಮಾ.2 ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟ, ಕರ್ನಾಟಕ ರಸ್ತೆ ಸಾರಿಗೆ ಮಜ್ದೂ ಸಂಘ ಒಕ್ಕೂಟ ಹಾಗೂ ಕೆ.ಎಸ್.ಆರ್.ಟಿ.ಸಿ & ಬಿ.ಎಂ.ಟಿ.ಸಿ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ನಡಾವಳಿಯನ್ನು ಎಂಡಿ ಬಿಡುಗಡೆ ಮಾಡಿದ್ದಾರೆ.

ಮಾ.9ರಂದು ನಡೆವಳಿ ಬಿಡುಗಡೆ ಮಾಡಿರುವ ಎಂಡಿ ಅವರು ಸಂಘಟನೆಗಳ ಪದಾಧಿಕಾರಿಗಳು ಚರ್ಚಿಸಿದ ವಿಷಯಗಳನ್ನು ಸಂಪೂರ್ಣವಾಗಿ ಹಾಕಿದ್ದಾರೆ. ಇದರಲ್ಲಿ ಮೊದಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಬಿ.ಎಸ್ ಸುರೇಶ್ ಅವರು ಮಾತನಾಡಿದ್ದು, ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವು 18.02.2026 ರಂದು ಆದೇಶವನ್ನು ಹೊರಡಿಸಿದೆ. ಇದಕ್ಕಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಪ್ರಯತ್ನವನ್ನು ಈ ಸಂದರ್ಭದಲ್ಲಿ ಶ್ಲಾಘಿಸುವುದಾಗಿ ತಿಳಿಸಿದ್ದಾರೆ.
ಇನ್ನು ಒಕ್ಕೂಟದ ಬೇಡಿಕೆಗಳು ಬೇರೆ ಸಂಘಟನೆಗಳ ಬೇಡಿಕೆಗಳಿಗೆ ಭಿನ್ನವಾಗಿದ್ದು, ನಾಲ್ಕು ವರ್ಷಕ್ಕೊಮ್ಮೆ ಮಾಡುತ್ತಿರುವ ವೇತನ ಪರಿಷ್ಕರಣೆಗೆ ನಮ್ಮ ಒಪ್ಪಿಗೆ ಇಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ನಮ್ಮ ಬೇಡಿಕೆಗಳ ಬಗ್ಗೆ, ನಾಲ್ಕು ಬಾರಿ ಸಭೆ ನಡೆದಿದ್ದರೂ ಸಹ, ಅಂತಿಮವಾಗಿ ಯಾವುದೇ ತೀರ್ಮಾನಗಳು ಆಗುತ್ತಿಲ್ಲ. ಕಾರ್ಮಿಕರು ಹೋರಾಟಕ್ಕೆ ಕರೆ ನೀಡಿದಾಗ ಮಾತ್ರ ಮಾತುಕತೆಗೆ ಕರೆಯುವುದು ಸರಿ ಇಲ್ಲ, ಆದಕಾರಣ, ಆಡಳಿತ ವರ್ಗ ಶೀಘ್ರವಾಗಿ ತೀರ್ಮಾನಗಳನ್ನು ಮಾಡಬೇಕು ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ಈ ಹಿಂದೆ 1992ರಲ್ಲಿ, ಚುನಾವಣೆ ನಡೆಸಲಾಗಿದೆ. ನಂತರ ಇದುವರೆವಿಗೂ ಚುನಾವಣೆಗಳನ್ನು ನಡೆಸಿಲ್ಲ. ಆದುದರಿಂದ ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ತುರ್ತಾಗಿ ಚುನಾವಣೆಗಳನ್ನು ನಡೆಸಿ, ಮಾನ್ಯತೆ ಪಡೆದ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸರಿಯಾದ ಕ್ರಮ ಎಂದು ತಿಳಿಸಿದರು.
ಅಲ್ಲದೆ ಎಲ್ಲ ಸಾರಿಗೆ ನೌಕರರಿಗೂ ಸರ್ಕಾರದ ಮಾದರಿಯಲ್ಲಿ ಸಮಾನಾಂತರ ವೇತನ ನೀಡಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದ್ದು, ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲವೆಂದು ಆದಾಗ್ಯೂ ನೌಕರರ ಹಿತದೃಷ್ಟಿಯಿಂದ ಸರ್ಕಾರ ಯಾವುದೇ ಅನುದಾನ ನೀಡಿದರು ಸ್ವಾಗತಿಸುವುದಾಗಿ ತಿಳಿಸಿದರು.
ಮದ್ಯಂತರ ಪರಿಹಾರ ಘೋಷಣೆಗೆ ಪಟ್ಟು: ನೌಕರರ ಕೂಟ ಅಧ್ಯಕ್ಷ ಆರ್. ಚಂದ್ರಶೇಖರ್ ಮಾತನಾಡಿ, ಸಾರಿಗೆ ನಿಗಮಗಳ ನೌಕರರ ವೇತನಕ್ಕೂ ಹಾಗೂ ಸರ್ಕಾರಿ ನೌಕರರ ವೇತನಕ್ಕೂ, ಸುಮಾರು 45% ವ್ಯತ್ಯಾಸವಿದ್ದು, ಇದರಿಂದಾಗಿ ನೌಕರರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ತಿಳಿಸಿದರು.
ಇನ್ನು ನಾಲ್ಕು ವರ್ಷಕ್ಕೊಮ್ಮೆ ಮಾಡುವ ವೇತನ ಪರಿಷ್ಕರಣೆ ಪದ್ಧತಿಯನ್ನು ಕೈಬಿಟ್ಟು ಸರ್ಕಾರದ ಮಾದರಿಯಲ್ಲಿ ವೇತನ ಆಯೋಗದ ಶಿಫಾರಸುಗಳನ್ನು ನಿಗಮದಲ್ಲಿಯೂ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಂದುವರಿದು ಮಾತನಾಡಿ, ನೌಕರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸದ್ಯ ಮದ್ಯಂತರ ಪರಿಹಾರವನ್ನು ಘೋಷಣೆ ಮಾಡಿ ಸಮಾನಾಂತರ ವೇತನ ನೀಡುವ ಬಗ್ಗೆ, ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನವನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಕರಾರಸಾನಿ/ ಬಿಎಂಟಿಸಿ/ ಎನ್‌ಡಬ್ಲ್ಯೂ.ಕೆಆರ್ ಟಿಸಿ/ ಎನ್‌ಈಕೆಆರ್‌ಟಿಸಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜು ಮಾತನಾಡಿ, ನೌಕರರ ಹಿತದೃಷ್ಟಿಯಿಂದ ತಾವು ಏನೇ ನೀಡಿದರು ನಮ್ಮ ಅಭ್ಯಂತರವಿಲ್ಲ ಆದರೇ ಸರಿಸಮಾನ ವೇತನ ನೀಡಬೇಕು ಎಂಬ ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲವೆಂದು ತಿಳಿಸಿದರು. ಅಲ್ಲದೇ ಏನೇ ತೀರ್ಮಾನ ಕೈಗೊಂಡರೂ ಶೀಘ್ರವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಅವರು, ಮೊದಲು ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ಚುನಾವಣೆಗಳನ್ನು ನಡೆಸುವಂತೆಯೂ ಒತ್ತಾಯಿಸಿದರು.
ಕ.ರಾ.ರ.ಸಾ ಸಂಸ್ಥೆ. ಪ.ಜಾ/ ಪ.ಪಂ ಗಳ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ ಪದಾಧಿಕಾರಿ ಬಿ.ಆರ್. ಕೃಷ್ಣಯ್ಯ ಮಾತನಾಡಿ, ಪದಾರ್ಥಗಳ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಜೀವನ ನಿರ್ವಹಣಾ ವೆಚ್ಚ ಮತ್ತು ನೌಕರರ ವೇತನಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಆದುದರಿಂದ ಜೀವನ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡುವಂತೆ ಕೋರಿದರು.
ಕೆಎಸ್‌ಆರ್‌ಟಿಸಿ & ಬಿಎಂಟಿಸಿ ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್‌ನ ವಿಜಯಕುಮಾರ್ ಮಾತನಾಡಿ, ಈ ಹಿಂದಿನ ವೇತನ ಪರಿಷ್ಕರಣೆಗಳು ಒಂದು ಅಥವಾ ಎರಡು ಸಭೆಗಳಲ್ಲಿ ತೀರ್ಮಾನವಾಗುತ್ತಿತ್ತು. ಆದರೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಹಲವಾರು ಬಾರಿ ಸಭೆ ನಡೆದು ಚರ್ಚೆ ಆಗಿದ್ದರೂ ಸಹ ಸೂಕ್ತ ತೀರ್ಮಾನವಾಗಿಲ್ಲ. ಆದುದರಿಂದ ನಿಗಮಗಳ ಹಂತದಲ್ಲಿಯೇ ಸೂಕ್ತ ತೀರ್ಮಾನವನ್ನು. ಶೀಘ್ರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ: ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಡಿಗೇರ ಮಾತನಾಡಿ, ಸಂಪ್ರದಾಯದ ಪ್ರಕಾರ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಿದೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಈ ಎಲ್ಲ ಗೊಂದಲಗಳು ಉಂಟಾಗಿವೆ. ಆದರೆ, ಕೋವಿಡ್ ಅವಧಿಯಲ್ಲಿಯೂ ಸಾರಿಗೆ ನೌಕರರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಜಾರಿಯಾದ ನಂತರ 4 ಸಾರಿಗೆ ನಿಗಮಗಳ ಆದಾಯ ವೃದ್ಧಿಯಾಗಿದ್ದು, 01.01.2020 ರಿಂದ 28.02.2023 ಅವಧಿಯ 38 ತಿಂಗಳ ವೇತನ ಹಿಂಬಾಕಿ ಪಾವತಿಯ ಚೌಕಾಸಿಗೆ ಸಿದ್ಧವಿದ್ದು, ಆದರೆ, ಹೊಸ ವೇತನ ಪರಿಷ್ಕರಣೆಯು 01.01.2024ರಿಂದಲೇ ಜಾರಿ ಆಗಬೇಕು, ಈ ಅವಧಿಯನ್ನು ಮುಂದೆ ಹಾಕಲು ಯಾವುದೇ ಕಾರಣಕ್ಕೂ ನಮ್ಮ ಸಂಘ ಒಪ್ಪುವುದಿಲ್ಲ ಎಂಬ ನಿಲುವನ್ನು ಸಭೆಗೆ ತಿಳಿಸಿದರು.
ಅಂತಿಮವಾಗಿ KSRTC ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಸರ್ಕಾರದ ನಿರ್ದೇಶನದನ್ವಯ ಇದು ಮೊದಲ ಸಭೆಯಾಗಿದ್ದು ಆದಷ್ಟು ಕೂಡಲೇ ಮುಂದಿನ ಸಭೆಯನ್ನು ನಿಗdiಪಡಿಸಲಾಗುವುದು. ಈ ಸಭೆಯಲ್ಲಿ ವೇತನ ಪರಿಷ್ಕರಣೆ ಪ್ರಮಾಣದ ತಮ್ಮ ಬೇಡಿಕೆಗೆ ಪೂರಕವಾಗಿ ಅಂಕಿಅಂಶಗಳ ಸಮೇತ ಆಡಳಿತ ವರ್ಗದ ಮುಂದೆ ಮಂಡಿಸಲು ತಿಳಿಸಿದರು.
ಅದೇರೀತಿ ಈ ಸಭೆಯಲ್ಲಿ ನಾಲ್ಕೂ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ, ಅನುದಾನಗಳ ಮೂಲಕ ಸರ್ಕಾರದ ಬೆಂಬಲ, ಶಕ್ತಿ ಯೋಜನೆಯ ಸಾಧಕ/ ಬಾಧಕಗಳು, ವೇತನ ಪರಿಷ್ಕರಣೆ ಸಂಬಂಧ ನಿಗಮಗಳ ನೀಡುವ ಸಾಮರ್ಥ್ಯ (Paying capacity of the corporation) ಹಾಗೂ ನಿಗಮಗಳ ಹೊಣೆಗಾರಿಕೆ ಈ ಎಲ್ಲ ಮಾಹಿತಿಗಳನ್ನು ತಮ್ಮ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
0104.2026 ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಹಾಗೂ ಏಕಸದಸ್ಯ ಸಮಿತಿಯ ಶಿಫಾರಸಿನಂತೆ 14 ತಿಂಗಳಿಗೆ ರೂ.718 ಕೋಟಿಗಳ ಹಿಂಬಾಕಿ ವೇತನ ಪಾವತಿ ಮಾಡುವುದಾಗಿ ತಿಳಿಸಿರುತ್ತಾರೆ. ಈ ಮಧ್ಯೆ ನಿಮ್ಮಲ್ಲ. ಒತ್ತಾಯ ಹಾಗೂ ಸಾರಿಗೆ ಸಚಿವರ ಪ್ರಯತ್ನ ಮತ್ತು ಕಾಳಜಿಯಿಂದಾಗಿ 18.02.2026 ರಲ್ಲಿ ಹೊರಡಿಸಿರುವ ಸರ್ಕಾರಿ 01.04.2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಲು ಹಾಗೂ ಹಾಗೂ ಏಕ ಸದಸ್ಯ ಸಮಿತಿಯ ಶಿಫಾರಸಿನ 14 ತಿಂಗಳ ವೇತನ ಹಿಂಬಾಕಿ ರೂ.718 ಕೋಟಿಗಳ ಪಾವತಿಯ ಜತೆಗೆ ಹೆಚ್ಚುವರಿಯಾಗಿ 12 ತಿಂಗಳ ಹಿಂಬಾಕಿ ವೇತನ ರೂ.553 ಕೋಟಿಗಳ ಪಾವತಿಗೆ ಅಂದರೆ 01.01.2021 ರಿಂದ 28.02.2023 ರ ಅವಧಿಗೆ ಒಟ್ಟು 26 ತಿಂಗಳ ಹಿಂಬಾಕಿ ವೇತನ ಒಟ್ಟು ರೂ.1271 ಕೋಟಿಗಳ ಪಾವತಿಗೆ ಆದೇಶಿಸಿರುತ್ತಾರೆ.
ಮುಂದುವರೆದು, 26 ತಿಂಗಳ ಹಿಂಬಾಕಿ ಪಾವತಿಗಾಗಿ ಸರ್ಕಾರ ರೂ.1271 ಕೋಟಿಗಳನ್ನು ಇದೇ ತಿಂಗಳ ನಡೆಯುವ ಬಜೆಟ್ ಅಧಿವೇಶನದಲ್ಲಿ ಪೂರಕ ಆಯವ್ಯಯವನ್ನು (Supplementary Budget) ಮಂಡಿಸಿ, ಒಪ್ಪಿಗೆ ಪಡೆದ ನಂತರ ಬಿಡುಗಡೆ ಮಾಡುವುದಾಗಿ ತಿಳಿಸಿರುತ್ತಾರೆ. ಆದುದರಿಂದ, ಸರ್ಕಾರಿ ಆದೇಶದ ನಿರ್ದೇಶನದನ್ವಯ 01.04.2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆಯನ್ನು ಶೇಕಡವಾರು ಎಷ್ಟು ಪ್ರಮಾಣದಲ್ಲಿ ಪರಿಷ್ಕರಿಸಬೇಕು ಎಂಬ ವಿಷಯದ ಕುರಿತಂತೆ ಮಾತ್ರ ಚರ್ಚಿಸಲು ಮಾ.2ರಂದು ಸಭೆಯನ್ನು ಆಯೋಜಿಸಲಾಗಿರತ್ತು, ತಾವೂ ಈ ವಿಷಯಕ್ಕೆ ಮಾತ್ರ ಸೀಮಿತವಾಗಿ ತಮ್ಮ ಅಭಿಪ್ರಾಯವನ್ನು ಪೂರಕ ಅಂಕಿಅಂಶಗಳೊಂದಿಗೆ ಮಂಡಿಸುವಂತೆ ಹಾಗೂ ತಾವು ಸಲ್ಲಿಸುವ ಅಭಿಪ್ರಾಯದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದರು.
ಈ ಎಲ್ಲವೂ ಚರ್ಚೆಯಾಗಿದ್ದು ಮುಂದಿನ ಸಭೆಯಲ್ಲಿ ಸರ್ಕಾರ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಾಗೂ ಸಂಘಟನೆಗಳು ಏನು ತೀರ್ಮಾನ ತೆಗೆದುಕೊಳ್ಳುತ್ತವೇ ಎಂಬುದನ್ನು ಕಾದು ನೋಡಬೇಕಿದೆ.
Related








