NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಎಲ್ಲ ನೌಕರರ ಖಾತೆಗೆ ಜಮೆಯಾದ 8 ತಿಂಗಳ ತುಟ್ಟಿ ಭತ್ಯೆ ಹಿಂಬಾಕಿ- ನೌಕರರು ಖುಷ್‌

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ/ನೌಕರರ ಮೂಲ ತುಟ್ಟಿಭತ್ಯೆ, ಪರಿಷ್ಕೃತ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಹಿಂಬಾಕಿ ಹಾಗೂ 01.07.2024, 01.01.2025 ಹಾಗೂ 01.07.2025ರಲ್ಲಿ ಪರಿಷ್ಕರಿಸಲಾದ ತುಟ್ಟಿಭತ್ಯೆ ದರಗಳ ಹಿಂಬಾಕಿ ಮೊತ್ತ ಪಾವತಿಸಲು ಆದೇಶ ಹೊರಡಿಸಲಾಗಿದೆ.

ಸಂಸ್ಥೆಯ ಎಲ್ಲ ಅಧಿಕಾರಿ/ ನೌಕರರಿಗೆ 13.03.2026 ರಂದು RTGS ಮುಖಾಂತರ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದರು ಅದರಂತೆ ನಿನ್ನೆ ಮಾ.13ರಂದು ಎಲ್ಲ ನೌಕರರ ಬ್ಯಾಂಕ್‌ ಖಾತೆಗೆಗೂ ಹಣ ಜಮೆಯಾಗಿದೆ.

ಇನ್ನು ಈ ವಿಷಯ ಸಂಬಂಧಿಸಿದಂತೆ, ಆಗಸ್ಟ್-2024 ರಿಂದ ಜೂನ್-2025ರ ವರೆಗಿನ 11 ತಿಂಗಳುಗಳ ಅವಧಿಯ ಸೇವಾ ನಿರತ ಮತ್ತು ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ ನೌಕರರಿಗೆ ಮೂಲ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಗಳ ಮತ್ತು ತುಟ್ಟಿ ಭತ್ಯೆ ಹಿಂಬಾಕಿ ಬಿಲ್ ತಯಾರಿಸಿ ಸೂಕ್ತಾಧಿಕಾರಿಗಳ
ನಿರ್ದೇಶನದಂತೆ ಈಗಾಗಲೇ ಆಗಸ್ಟ್‌-2024 ರಿಂದ ಜನವರಿ-2025ರವರೆಗೂ ಅಂಧರೆ 6 ತಿಂಗಳ ಹಿಂಬಾಕಿಯನ್ನು ಈಗಾಗಲೇ ಪಾವತಿಸಲಾಗಿತ್ತು.

ಉಳಿದಂತೆ ಫೆಬ್ರವರಿ-2025 ರಿಂದ ಜೂನ್-2025ರ ವರೆಗಿನ ಸೇವಾನಿರತ ಅಧಿಕಾರಿ/ ನೌಕರರ 5 ತಿಂಗಳ ಹಿಂಬಾಕಿಯನ್ನು ಪಾವತಿಸುವುದು ಬಾಕಿ ಇದೆ. ಅಂತೇಯೇ ಜುಲೈ-2025 ರಿಂದ ಸೆಪ್ಟೆಂಬರ್-2025ರ ವರೆಗಿನ 3 ತಿಂಗಳ ಸೇವಾ ನಿರತ ಅಧಿಕಾರಿ/ ನೌಕರರ ತುಟ್ಟಿ ಭತ್ಯೆ (ಶೇ.2) ಹಿಂಬಾಕಿಯನ್ನು ಪಾವತಿಸುವುದು ಸಹ ಬಾಕಿ ಇತ್ತು. ಆದ್ದರಿಂದ, ಈ ಹಿಂಬಾಕಿಗಳನ್ನು ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದರು.

ಎಂಡಿ ಆದೇಶ ಮಾಡಿದ್ದರು?: 1. ಪ್ರಸ್ತುತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳ ಫೇಬ್ರವರಿ-2025 ರಿಂದ ಜೂನ್-2025ರ ವರೆಗಿನ 5 ತಿಂಗಳ ಈ ಮೇಲಿನ ಹಿಂಬಾಕಿ (ಬಿಡಿಎ ಅರಿಯರ್) ಮೊತ್ತವನ್ನು ಹಾಗೂ ಜುಲೈ-2025 ರಿಂದ ಸೆಪ್ಟೆಂಬರ್-2025ರ ವರೆಗಿನ 3 ತಿಂಗಳ ತುಟ್ಟಿ ಭತ್ಯೆ ಹಿಂಬಾಕಿಗಳ ಪ್ರತ್ಯೇಕ ಬಿಲ್ಲುಗಳನ್ನು ತಯಾರಿಸಿ 13.03.2026ರಂದು RTGS ಮುಖಾಂತರ ನೌಕರರ ಖಾತೆಗೆ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು.

2. ವರ್ಗಾವಣೆಗೊಂಡ ಸಿಬ್ಬಂದಿಗಳ ಜುಲೈ-2025 ರಿಂದ ಸೆಪ್ಟೆಂಬರ್-2025ರ ವರೆಗಿನ 3 ತಿಂಗಳ ತುಟ್ಟಿ ಭತ್ಯೆ ಹಿಂಬಾಕಿ ಬಿಲ್ಲನ್ನು, ಈ ಹಿಂದೆ ಕಾರ್ಯ ನಿರ್ವಹಿಸಿದ ವಿಭಾಗದಿಂದ ಹಾಜರಾತಿ ಪಡೆದು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವಿಭಾಗದಲ್ಲಿ ಬಿಲ್ಲನ್ನು ತಯಾರಿಸಿ ಪಾವತಿಸಲು ಕ್ರಮ ಕೈಗೊಳ್ಳಬೇಕು.

3. ಈ ಮೇಲೆ ತಿಳಿಸಿದ ಹಿಂಬಾಕಿ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ಸಂಸ್ಥೆಯ ವಸತಿ ಗೃಹದಲ್ಲಿ ವಾಸವಿದ್ದಂತಹ ಸಿಬ್ಬಂದಿಗಳ ವಸತಿ ಗೃಹದ ಬಾಡಿಗೆ ಹಾಗೂ ಶಾಸನಬದ್ಧ ಕಡಿತಗಳಾದ ಭವಿಷ್ಯ ನಿಧಿ, ಆದಾಯ ತೆರಿಗೆ ಹಾಗೂ ಇತರ ಕಡಿತಗಳು ಇದ್ದಲ್ಲಿ ತಪ್ಪದೇ ಕಡಿತಗೊಳಿಸಬೇಕು.

4. ಅಂತ‌ರ್‌ ನಿಗಮಗಳಿಗೆ ವರ್ಗಾವಣೆಯಾದ ಅಧಿಕಾರಿ/ ಸಿಬ್ಬಂದಿಗಳ ಆಗಸ್ಟ್‌-2024 ರಿಂದ ಜೂನ್-2025ರ ಅವಧಿಯ ಬಿಡಿಎ ಹಿಂಬಾಕಿ ಹಾಗೂ ಜುಲೈ-2025 ರಿಂದ ಸೆಪ್ಟೆಂಬರ್-2025ರ ವರೆಗಿನ ತುಟ್ಟಿ ಭತ್ಯೆ ಹಿಂಬಾಕಿಗಳನ್ನು 13.03.2026 ರಂದು ವರ್ಗಾವಣೆಗೊಂಡ ನಿಗಮ/ ವಿಭಾಗಗಳಿಗೆ ಒಟ್ಟು ಮೊತ್ತಕ್ಕೆ ಧನಾದೇಶ ನೀಡುವ ಮೂಲಕ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು.

5. ಈ ಮೇಲಿನ ಹಿಂಬಾಕಿ ಪಾವತಿಗಾಗಿ ನಿಧಿ ವರ್ಗಾವಣೆಗೆ ಬೇಡಿಕೆಯನ್ನು ಕೇಂದ್ರ ಕಚೆರಿಗೆ 11.03.2026 ರಂದು ಮಾಹಿತಿ ನೀಡುವುದು. ಈ ಸಂಬಂಧ 12.03.2026 ರಂದು ನಿಧಿ ವರ್ಗಾವಣೆ ಮಾಡಲಾಗುವುದು, ಈ ನಿಧಿಯನ್ನು ಬಳಸಿಕೊಂಡು ಎಲ್ಲ ಅಧಿಕಾರಿ/ನೌಕರರಿಗೆ 13.03.2026 ರಂದು
RTGS ಮುಖಾಂತರ ನೌಕರರ ಖಾತೆಗೆ ನೇರವಾಗಿ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದರು. ಅದರಂತೆ ಸಂಸ್ಥೆ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ ಎಲ್ಲ ನೌಕರರ ಖಾತೆಗೂ ಹಣ ಜಮೆ ಆಗಿದೆ.

Megha
the authorMegha

Leave a Reply

error: Content is protected !!