CRIMENEWSನಮ್ಮಜಿಲ್ಲೆ

KSRTC ಬಸ್‌ ಕಾರು ನಡುವೆ ಭೀಕರ ಅಪಘಾತ: ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಕಾರು ನಡುವೆ ಸಂಭವುಸುದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಮೃತಪಟ್ಟಿದ್ದು ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಶಿರಾಡಿಘಾಟ್​​ನಲ್ಲಿ ನಡೆದಿದೆ.

ಅಪಘಾತದಲ್ಲಿ ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಹಾಗೂ ಕೊಕ್ಕಡ ನಿವಾಸಿ ಚಂದ್ರಶೇಖರಗೌಡ ಮೃತಪಟ್ಟಿದ್ದಾರೆ.

ಇನ್ನು ಈ ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತೋರ್ವ ಸುರೇಶ್ ಎಂಬುವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಕಲೇಶಪುರದಲ್ಲಿ ಇದ್ದ ಮದುವೆಗೆ ಹೋಗಿ ಬರುತ್ತಿದ್ದ ವೇಳೆ ಈ ಅಪಘಾತ ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಾಗೂ ಕಾರು ನಡುವೆ ಶಿರಾಡಿಘಾಟ್​​​ನ ಗುಂಡ್ಯ ಬಳಿ ನಡೆದಿದೆ.

ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ತೆಗೆದಕೊಂಡಿದ್ದಾರೆ.

Megha
the authorMegha

Leave a Reply

error: Content is protected !!
Latest news
BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ ಬಿಡದಿ ಟೌನ್ ಶಿಪ್‌: ರೈತರ ವಿರೋಧದ ನಡುವೆಯೂ ಎಕರೆಗೆ 2.14 ಕೋಟಿ ರೂ. ದರ ನಿಗದಿ- ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರ... ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ...