ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು ಇಂದು ದಾಖಲೆಯ 9,886 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 100 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚು ಅಂದರೆ 3,925 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 2,45,700ಕ್ಕೆ ಏರಿಕೆಯಾಗಿದೆ.
ಇಂದು 8,989 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 5,08,495ಕ್ಕೆ ಏರಿಕೆಯಾಗಿದೆ. 1,12,783 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 3,925 ಸೋಂಕು ಪತ್ತೆಯಾಗಿದ್ದು, ಮೈಸೂರು 1514, ಶಿವಮೊಗ್ಗ 337, ತುಮಕೂರು 302, ಬೀದರ್ 14, ಚಾಮರಾಜನಗರ 179, ಚಿಕ್ಕಬಳ್ಳಾಪುರ 234, ಚಿಕ್ಕಮಗಳೂರು 175, ಚಿತ್ರದುರ್ಗ 76, ದಕ್ಷಿಣ ಕನ್ನಡ 255, ದಾವಣಗೆರೆ 129, ಧಾರವಾಡ 98, ಗದಗ 32, ಹಾಸನ 460, ಹಾವೇರಿ 71, ಕಲಬುರಗಿ 107, ಕೊಡಗು 37, ಕೋಲಾರ 20, ಕೊಪ್ಪಳ 98, ಮಂಡ್ಯ 206, ರಾಯಚೂರು 199, ರಾಮನಗರ 58, ಉಡುಪಿ 158, ಉತ್ತರ ಕನ್ನಡ 92, ವಿಜಯಪುರ 97 ಹಾಗೂ ಯಾದಗಿರಿ 128 ಸೋಂಕು ಪತ್ತೆಯಾಗಿವೆ.
ಇಂದಿನ 03/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/SCQevrZEnB pic.twitter.com/avjoDZeP28
— K'taka Health Dept (@DHFWKA) October 3, 2020