Breaking NewsNEWSನಮ್ಮರಾಜ್ಯಸಿನಿಪಥ

ಪ್ರೇಮಕವಿ ಕೆ.ಕಲ್ಯಾಣ್ ಮನದಾಳ: ನಾನು ಹೆಂಡ್ತಿ ಚೆನ್ನಾಗಿದ್ದೇವೆ, ಮಾಟ ಮಂತ್ರಕ್ಕೆ ಬಲಿಯಾಗಿದ್ದಾಳಷ್ಟೇ ! ‌

 ಚಿತ್ರ ಸಾಹಿತಿ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಟ್ವಿಸ್ಟ್ l ಶಿವಾನಂದನ ಮನೆಯಲ್ಲಿ ಮಾಟ ಮಂತ್ರದ ವಸ್ತುಗಳು ಜಪ್ತಿ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಪ್ರತಿಯೊಬ್ಬರ ಮನೆಯಲ್ಲೂ ಏಳು ಬೀಳು ಸಹಜ, ನಾನು ನನ್ನ ಹೆಂಡ್ತಿ ಚೆನ್ನಾಗಿದ್ದೇವೆ. ಆದರೆ ನಮ್ಮ ಅತ್ತೆಯ ಮಾಟ ಮಂತ್ರಕ್ಕೆ ಬಲಿಯಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾಳೆ ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್‌ ಆರೋಪಿಸಿದ್ದಾರೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತ್ನಿ ನಾನು ಚಿತ್ರ ಹಿಂಸೆ ನೀಡುತ್ತಿದ್ದೇನೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ನಾವು ಅಶ್ವಿನಿಯನ್ನು ಮದುವೆಯಾಗಿ 15 ವರ್ಷವಾಗಿದೆ. ಈಗ ವಿಚ್ಛೇದನ ಕೊಡುತ್ತೇನೆ ಎಂದು ಹೇಳಿದ್ದಾರೆ. ಅದು ಆಕೆಯ ಮನದಾಳದ ಮಾತಲ್ಲ. ಆಕೆ ಯಾರದೋ ಮಾತಿಗೆ ಕಟ್ಟುಬಿದ್ದು ಈರೀತಿ ಹೇಳಿಕೆ ನೀಡಿದ್ದಾಳೆ ಅಷ್ಟೇ ಎಂದು ಕೆ. ಕಲ್ಯಾಣ್‌ ತಿಳಿಸಿದರು.

ಇನ್ನು ನನ್ನ ಹೆಂಡ್ತಿ ಮಾಂಗಲ್ಯ ಕಾಲುಂಗುರ ಹಾಕಿರಲಿಲ್ಲ ಅದನ್ನು ಗಮನಿಸಿ ನಾನು ಪ್ರಶ್ನೆ ಮಾಡಿದೆ ಅದಕ್ಕೆ ಆಕೆ ಅವುಗಳು ಇದ್ದರೆ ಮಾತ್ರ ಗಂಡ ಹೆಡ್ತಿಯಾ ಎಂಧಲು ನಾನು ಸರಿ ಬಿಡು ಎಂದೆ. ಆ ಬಳಿಕ ನಮ್ಮ ಅತ್ತೆ ಆಕೆಯನ್ನು ರೂಮ್‌ಗೆ ಕರೆದುಕೊಂಡು ಹೋಗಿ ಹಣೆತುಂಬ ಕುಂಕುಮ ಹಚ್ಚಿಕೊಂಡು ಮತ್ತೆ ನನ್ನ ಬಳಿಕೆ ಕರೆದುಕೊಂಡು ಬಂದರು ಆಗ ಅಶ್ವಿನಿ ನನಗೂ ನಿನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬ ರೀತಿ ಮಾತನಾಡಿದಳು ಎಂದು ವಿವರಿಸಿದರು.

ಈ ನಡುವೆ ಮಂತ್ರವಾದಿ ಶಿವಾನಂದ ವಾಲಿ ಎಂಬುವರ ಅಕೌಂಟ್‌ಗೆ ಲಕ್ಷಲಕ್ಷ ರೂ. ನನ್ನ ಪತ್ನಿ ಬ್ಯಾಂಗ್‌ ಖಾತೆಯಿಂದ ವರ್ಗಾವಣೆ ಆಗಿರುವುದು ಬೆಳಕಿಗೆ ಬಂತು. ಅದನ್ನು ಗಮನಿಸಿದ ನಾನು ಆತನ ವಿರುದ್ಧ ದೂರು ನೀಡಿದೆ. ಸದ್ಯ ಆತ ಈಗ ಪೊಲೀಸರ ವಶದಲ್ಲಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಹೊಸ ಟ್ವಿಸ್ಟ್
ಈ ನಡುವೆ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಎಂಬಾತನ ಬಾಡಿಗೆ ಮನೆಯಲ್ಲಿ ಮಾಟ ಮಂತ್ರದ ವಸ್ತುಗಳು ಪತ್ತೆಯಾಗಿವೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ ವಿರುದ್ಧ ಮಾಟಮಂತ್ರ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಶಿವಾನಂದ ವಾಲಿ ಆಪ್ತನಾಗಿದ್ದು, ಈತನ ವಿರುದ್ಧ ಕಲ್ಯಾಣ್ ಅಪಹರಣದ ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆತನ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಟ, ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಂಪತ್ಯದಲ್ಲಿ ಉಂಟಾದ ಕಲಹ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಪತ್ನಿ ಅಶ್ವಿನಿ ಹಾಗೂ ಅತ್ತೆ, ಮಾವರನ್ನು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ, ಅತ್ತೆ, ಮಾವನ ಅಕೌಂಟ್‍ನಿಂದ ಶಿವಾನಂದ ವಾಲಿ ತನ್ನ ಅಕೌಂಟ್‍ಗೆ 19.80ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಜತೆಗೆ ಜಾಯಿಂಟ್ ಪ್ರಾಪರ್ಟಿಯನ್ನು ಶಿವಾನಂದ ವಾಲಿ ತನ್ನ ಹೆಸರಿಗೆ ಖರೀದಿ ಮಾಡಿಕೊಂಡಿದ್ದಾನೆ ಎಂದು ಕಲ್ಯಾಣ್ ಸೆಪ್ಟೆಂಬರ್ 30ರಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

ಕೆ.ಕಲ್ಯಾಣ್ ದೂರಿನ ಮೇರೆಗೆ ಆರೋಪಿ ಶಿವಾನಂದ ವಾಲಿಯನ್ನು ಬೀಳಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಬೀಳಗಿ ಪೊಲೀಸರು ಮಾಳಮಾರುತಿ ಠಾಣೆಗೆ ಶಿವಾನಂದನನ್ನು ಹಸ್ತಾಂತರಿಸಿದ್ದಾರೆ. ಸದ್ಯಕ್ಕೆ ಶಿವಾನಂದ ವಾಲಿ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದಾನೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು