ನ್ಯೂಡೆಲ್ಲಿ: 2014ಕ್ಕೂ ಮೊದಲೇ ಕೊರೊನಾ ಸೋಂಕು ಬಂದಿದ್ದರೆ, ನಮ್ಮ ದೇಶ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ನಮ್ಮ ಜನಸಂಖ್ಯೆಯ ಶೇಕಡಾ 60ಕ್ಕಿಂತ ಹೆಚ್ಚು ಜನ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದ ಕಾಲವದು. ಅಂಥ ಸಮಯದಲ್ಲಿ ಲಾಕ್ಡೌನ್ ಜಾರಿಗೊಳಿಸುವುದು ಸಾಧ್ಯವಿತ್ತೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಗುರುವಾರ ನ್ಯೂಡೆಲ್ಲಿಯ ರಾಜ್‌ಘಾಟ್‌ನಲ್ಲಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಿದ ನಂತರ ಮೋದಿ ಅವರು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎಲ್ಲ ರಾಜ್ಯ, ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಅವರು, ‘ಸ್ವಚ್ಛಾಗ್ರಹ‘ ಯೋಜನೆಯು, ನಮ್ಮನ್ನು ಕೋವಿಡ್ ವಿರುದ್ಧ ಹೋರಾಡುವಷ್ಟು ಸಶಕ್ತರನ್ನಾಗಿ ಮಾಡಿದೆ ಎಂದು ಹೇಳಿದರು.
“60 ತಿಂಗಳ ಸಮಯದಲ್ಲಿ 60 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದರಿಂದಲೇ ಕೊರೊನಾವನ್ನು ತಡೆಗಟ್ಟುವುದು ಸ್ವಚ್ಛಭಾರತ ಅಭಿಯಾನ ಸಾಧ್ಯವಾಗಿಸಿದೆ. ಗಾಂಧೀಜಿಯವರನ್ನು ಆದರ್ಶವಾಗಿಟ್ಟುಕೊಂಡಿರುವ ಲಕ್ಷಾಂತರ ಜನ ಕೆಲವು ವರ್ಷಗಳಿಂದ ಸ್ವಚ್ಛ ಭಾರತ ಅಭಿಯಾನವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಾವು 60 ತಿಂಗಳಲ್ಲಿ 60 ಕೋಟಿ ಜನಕ್ಕೆ ಶೌಚಾಲಯಗಳನ್ನು ಕಟ್ಟಿಕೊಡಲು ಸಾಧ್ಯವಾಗಿದೆ ಎಂದು ಮೋದಿ ಮಕ್ಕಳಿಗೆ ಹೇಳಿದರು.
ನಾವೆಲ್ಲ ಗಂದಗಿ ಭಾರತ್ ಛೋಡೊ ಅಭಿಯಾನದ ಭಾಗವಾಗಿದ್ದೇವೆ. ಇಲ್ಲಿ ನೆರೆದಿರುವ ಮಕ್ಕಳೂ ಸೇರಿದಂತೆ ಉಳದವರೆಲ್ಲ, ಕೋವಿಡ್-19 ನಿಯಂತ್ರಿಸಲು ಮಾಸ್ಕ್ ಧರಿಸಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು ನನಗೆ ಸಂತೋಷವನ್ನುಂಟು ಮಾಡಿದೆ ಎಂದು ಮಕ್ಕಳನ್ನು ಕೊಂಡಾಡಿದರು.
ಇನ್ನು ಇಂದು ಇಡೀ ಜಗತ್ತು ಗಾಂಧೀಜಿಯವರ ಮೌಲ್ಯ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಕಳೆದ ವರ್ಷ ನಾವು ಆಚರಿಸಿದ ಗಾಂಧೀಜಿಯವರ 150ನೇ ವಾರ್ಷಿಕೋತ್ಸವ ಅಭೂತಪೂರ್ವವಾಗಿತ್ತು. ಅವರ ‘ವೈಷ್ಣವ ಜನ ತೊ‘ ಹಾಡನ್ನು ಬೇರೆ ಬೇರೆ ದೇಶದ ಹಾಡುಗಾರರು ಕಲಿತಿದ್ದೂ ಅಲ್ಲದೆ ಹಾಡಿಯೂ ತೋರಿಸಿದರು ಎಂದು ಮೋದಿ ಹೇಳಿದರು.
Ayyo agidre bandidre annodanna bidi munde agodara bagge mathadi