KSRTC ನೌಕರರ ವಿರುದ್ಧ ನಿಯಮ 23 ರಡಿಯಲ್ಲಿ ದಾಖಲಾದ ಪ್ರಕರಣಗಳ ನಿಯಮ-22ಕ್ಕೆ ಮಾರ್ಪಡಿಸಿ: ಎಂಡಿ ಆದೇಶ
Megha07.04.2026

- ಕಳೆದ 2025ರ ಆ.5ರ ಮುಷ್ಕರದಲ್ಲಿ ಭಾಗಿಯಾದ ನೌಕರರ ವಿರುದ್ಧದ ಪ್ರಕರಣ
ಬೆಂಗಳೂರು: ಕಳೆದ 5.08.2025ರ ಮುಷ್ಕರದ ದಿನಂದಂದು ಕರ್ತವ್ಯಕ್ಕೆ ಗೈರುಹಾಜರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಿರುದ್ಧ ನಿಯಮ-23 ರಡಿಯಲ್ಲಿ ದಾಖಲಾದ ಪ್ರಕರಣಗಳನ್ನು ನಿಯಮ-22 ಕ್ಕೆ ಮಾರ್ಪಡಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಆದೇಶ ಹೊರಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಆದೇಶ ಹೊರಡಿಸಿರುವ ಅವರು, 05.08.2025 ರ ಮುಷ್ಕರದ ದಿನದಂದು ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ನಿಯಮ-23 ರಡಿಯಲ್ಲಿ ಹೊರಡಿಸಲಾದ ಆಪಾದನಾ ಪತ್ರಗಳನ್ನು ನಿಯಮ-22 ಕ್ಕೆ ಮಾರ್ಪಡಿಸಬೇಕು.
ಈ ಬಗ್ಗೆ ಕೂಡಲೇ ಸೂಕ್ತ ತಿದ್ದುಪಡಿ ಆದೇಶ/ Corrigendum ಗಳನ್ನು ಹೊರಡಿಸಿ, ತೆಗೆದುಕೊಡ ಕ್ರಮದ ಬಗ್ಗೆ ಕೇಂದ್ರ ಕಚೇರಿಗೆ ಅನುಪಾಲನಾ ವರದಿಯನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Related


Megha







