NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌!

ವಿಜಯಪಥ ಸಮಗ್ರ ಸುದ್ದಿ
  • ಪಾದಯಾತ್ರೆಯಲ್ಲಿ ಭಾಗವಹಿಸಿರುವ ನೌಕರರಿಗೆ ಸಾರ್ವಜನಿಕರಿಂದ ಬಾಳೆಹಣ್ಣು ನೀರು, ಮಜ್ಜಿಗೆ ಪಾನಕ ವಿತರಣೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಸೇರಿದಂತೆ ನಮ್ಮೆಲ್ಲ ನೌಕರರಿಗೂ ನ್ಯಾಯಯುತವಾಗಿ ಸಿಗಬೇಕಿರುವ ವೇತನ ಸೇರಿದಂತೆ ಇತರ ಸೌಲಭ್ಯಗಳನ್ನು ಕೊಡಿಸಬೇಕು ಅಂತ ಚಿತ್ರದುರ್ಗದಿಂದ ಈ ಬೇಸಿಗೆ ಬಿಸಿಲಿನ ತಾಪದ ನಡುವೆ ಬಿಸಿಲಿನ ಝಳವನ್ನು ಲೆಕ್ಕಿಸದೆ ಪಾದಯಾತ್ರೆ ಮಾಡುತ್ತಿರುವ ಸಂಘಟನೆಗಳು ಹಾಗೂ ನೌಕರರ ಬಗ್ಗೆ ಕೀಳಾಗಿ ಮಾತನಾಡುವ ಕೀಳು ಮನೋಭಾವ ಬಿಟ್ಟು ನೌಕರರ ಪರವಾಗಿರಿ ಎಂದು ಸಂಘಟನೆಯೊಂದ ಸದಸ್ಯರೊಬ್ಬರು ಕರೆ ನೀಡಿದ್ದಾರೆ.

ಅಲ್ಲದೆ, ಈ ಪಾದಯಾತ್ರೆ ಬೆಂಗಳೂರಿನ ಆನಂದ ರಾವ್‌ ವೃತ್ತಕ್ಕೆ ಬರುತ್ತಿದ್ದಂತೆ ನಾನು ಹಾಗೂ ನನ್ನ ಜತೆಗೆ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ ಆದರೂ ನಾವೆಲ್ಲ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಗಮನಿಸಿದರೆ ಸಾರಿಗೆ ನೌಕರರ ಬಗ್ಗೆ ಕಾಳಜಿ ಇರುವ ಸಂಘನೆಗಳು ಒಂದು ಸಂಘಟನೆ ಮಾಡುತ್ತಿರುವ ಹೋರಾಟವನ್ನು ಬೆಂಬಲಿಸದಿದ್ದರೂ ತಟಸ್ಥವಾಗಿಯಾದರೂ ಇರಬೇಕು. ಆದರೆ, ಕೆಲವರು ಸಂಟನೆಗಳಲ್ಲಿ ಯಾವುದೇ ಅಧಿಕಾರ ಪಡೆಯದಿದ್ದರು ಬಾಲಂಗೋಚಿತರ ಮತ್ತೊಂದು ಸಂಘಟನೆಗಳು ಮಾಡುವ ಹೋರಾಟವನ್ನು ಕೀಳಾಗಿ ಕಾಣುವುದು ಶೋಭೆ ತರುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಮ್ಮ ಸಂಘಟನೆಗಳ ಕೆಲವರು ಸಾಮಾಜಿ ಜಾಲತಾಣಲ್ಲಿ ಹರಿಯ ಬಿಡುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಿಮಗೆ ತಾಕತ್ತು ಇದ್ದರೆ ಈ ರೀತಿ ಒಂದು ಹೋರಾಟ ಮಾಡಿ ತೋರಿಸಿ ಇಲ್ಲ ಹೋರಾಟಕ್ಕೆ ಇಳಿದಿರುವ ನೌಕರರು ಸಂಘಟನೆಗಳನ್ನು ಬೆಂಬಲಿ ಅದು ಆಗುವುದಿಲ್ಲ ಎಂದರೆ ಸುಮ್ಮನಿರಿ ಅವರು ಸರ್ಕಾರದಿಂದ ಏನು ಪಡೆಯಬೇಕು ಅದನ್ನು ಪಡೆಯುವುದಕ್ಕೆ ನಿರಂತರವಾಗಿ ಇಂಥ ಹೋರಾಟಗಳನ್ನು ಮಾಡುತ್ತೇವೆ. ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಮತ್ತೊಬ್ಬರ ಕಾಲು ಎಳೆಯುವುದಕ್ಕೆ ಏಕೆ ಹೋಗುತ್ತೀರಿ ಎಂದು ತರಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ ಈ ಪಾದಯಾತ್ರೆ   ನ್ಯಾಯಯುತವಾಗಿದೆ. ಬಳ್ಳಾರಿಯಿಂದ ಈ ಹಿಂದೆ ಕೇವಲ ಇಬ್ಬರು ಮಾತ್ರ ಪಾದಯಾತ್ರೆ ಆರಂಭಿಸಿದರು ಅವರು ಬೆಂಗಳೂರಿಗೆ ಬರುವಷ್ಟರಲ್ಲಿ ಪರ್ವತದಂತೆ ನೌಕರರ ಸಂಖೆ ಬೆಳೆದು ನಿಂತಿತ್ತು.  ಈಗಲೂ ಅದೇ ಆಗುತ್ತದೆ ಎಂದು ಹೇಳಿದ್ದಾರೆ.

ಇನ್ನು ನೀವು ಈ ಪಾದಯಾತ್ರೆ ಬಗ್ಗೆ ಕೀಳಾಗಿ ಮಾತನಾಡಿದರೆ ಅದು ನಿಮ್ಮ ನಡೆಯನ್ನು ತೋರಿಸುತ್ತದೆ. ನಮ್ಮ ನೌಕರರ ಬಗ್ಗೆ ನಿಮಗಿರುವ ತಾರತಮ್ಯತೆಯನ್ನು ತೋರಿಸುತ್ತದೆ. ಇನ್ನಾದರೂ ಮೌನವರಾಗಿರಿ ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿರುವ ನೌಕರರು ಕೂಡ ಹೇಳಿದ್ದು,  ಅದಕ್ಕೆ ಈ ಪಾದಯಾತ್ರೆ ಯಶಸ್ವಿಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಈ ಪಾದಯಾತ್ರೆ ಯಶಸ್ವಿಯಾಗಿ ಬೆಂಗಳೂರು ಪ್ರವೇಶಿಸಿದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಸ್ವೀಕರಿಸಿರುವ ಪಾದಯಾತ್ರಿಗಳು ಈ ಹೇಳಿಕೆಯಂತೆ ಹೋರಾಟ ಮಾಡೇ ತೀರುತ್ತೇವೆ ಎಂಬುದನ್ನು ತೋರಿಸಲಿದ್ದಾರೆ.

ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸಿರುವ ನೌಕರರಿಗೆ ಸಾರ್ವಜನಿಕರು ಬಾಳೆಹಣ್ಣು ನೀರು, ಮಜ್ಜಿಗೆ ಪಾನಕ ನೀಡುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ ಫೆಬ್ರವರಿ 2025- ಮಾರ್ಚ್‌ 2025ರ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಗೆ ನಿರ್ದೇಶನ ನೀಡಲು ಹೈ ಕೋರ್ಟ್‌ ಮೆಟ್ಟಿಲೇರಿ... BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲ...