NEWSನಮ್ಮಜಿಲ್ಲೆನಮ್ಮರಾಜ್ಯ

BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ್‌ ಪಾಷ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇತ್ತೀಚಿಗಷ್ಟೇ ಭಾರತೀಯ ಮಜ್ದೂರ್‌ ಸಂಘಟನೆ ವತಿಯಿಂದ ಬೀದರ್ ಜಿಲ್ಲಾಧಿಕಾರಿಗಳ ಮುಖಾಂತರ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಆರೋಗ್ಯ ಸಚಿವರು ಮತ್ತು ಕಾರ್ಮಿಕ ಸಚಿವರಿಗೆ ಸಲ್ಲಿಸಿದ ಮನವಿ ಪರಿಣಾಮವಾಗಿ, ಈಗ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರು ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಸುರಕ್ಷತೆಗಾಗಿ ಅಧಿಕೃತ ಸಲಹೆ ಮತ್ತು ಎಚ್ಚರಿಕೆ ಸೂಚನೆಗಳನ್ನು ನೀಡಿದ್ದಾರೆ.

ಈ ಬೆಳವಣಿಗೆ ನಮ್ಮ ಸಂಘಟನೆಯ ಪ್ರಾಮಾಣಿಕ ಹೋರಾಟಕ್ಕೆ ಸಿಕ್ಕ ಸಣ್ಣ ಜಯ ಎಂದು ಭಾರತೀಯ ಮಜ್ದೂರ್‌ ಸಂಘಟನೆ ಪದಾಧಿಕಾರಿಗಳು ಹೇಳಿದ್ದಾರೆ.

ನೌಕರರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂಬ ಸ್ಪಷ್ಟ ಸಂಕೇತ ಇದಾಗಿದೆ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಅತಿ ಹೆಚ್ಚು ಬಿಸಿಲಿನ ಹಿನ್ನೆಲೆಗಾಗಿ ತೆಗೆದುಕೊಂಡ ಸೂಕ್ತ ಕ್ರಮ ಎಂದು ಹೇಳಿದ್ದಾರೆ.

ನೌಕರರ ಪರವಾಗಿ ಧ್ವನಿ ಎತ್ತಿದ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ, ಸಿಬ್ಬಂದಿಗಳ ಹಿತದೃಷ್ಟಿಯಿಂದ ತಕ್ಷಣ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಎಂಡಿ ಅಕ್ರಮ್‌ ಪಾಷ ನೀಡಿದ ಸೂಚನೆ ಏನು?: ಆತ್ಮೀಯ ಚಾಲಕ/ನಿರ್ವಾಹಕರೇ, ನಮ್ಮ ಸಾರಿಗೆ ನಿಗಮದಲ್ಲಿ ಚಾಲನಾ ಸಿಬ್ಬಂದಿಗಳ ಕೆಲಸವು ಅತ್ಯಂತ ಶ್ರಮದಾಯಕವಾಗಿದ್ದು, ಬೇಸಿಗೆಯಲ್ಲಿನ ತೀವ್ರ ಶಾಖ ಅಲೆಯ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣವಾಗುವ ನಿಟ್ಟಿನಲ್ಲಿ ತಾವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಮ್ಮ ಮಾಹಿತಿಗಾಗಿ ನೀಡಿದೆ.

ಈ ಬಾರಿಯ ಬೇಸಿಗೆಯ ತಾಪಮಾನ ಅತಿಯಾಗಿದ್ದು, ಬಿಸಿಲಿನ ಬೇಗೆಗೆ ದೇಹ ಆಯಾಸದಿಂದ ಬಳಲಿದ್ದು, ಎಷ್ಟೇ ನೀರು ಕುಡಿದರೂ ಬಾಯಾರಿಕೆ, ದಣಿವು, ಆಯಾಸ ಕಡಿಮೆಯಾಗುವುದಿಲ್ಲ. ಅತೀ ಹೆಚ್ಚು ಬಿಸಿಲಿನ ತಾಪಮಾನದಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸಹ ಎದುರಾಗುತ್ತಿವೆ.

ಬಿಸಿಲಿನ ತಾಪಮಾನ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳು ಅನಿರ್ವಾಯ ಮತ್ತು ಅವಶ್ಯಕ.

ಮಾಡಬೇಕಾದವು: ಕರ್ತವ್ಯದ ಅವರಿಗೆ ಸಾಕಾಗುವಷ್ಟು ಕುಡಿಯುವ ಶುದ್ಧ ನೀರನ್ನು ಜೊತೆಯಲ್ಲಿ ಕೊಂದೊಯ್ದಿರಿ. ಬೇಸಿಗೆ ಕಾಲದಲ್ಲಿ ದೇಹದ ತೇವಾಂಕವನ್ನು ಸಮ ಪ್ರಮಾಣದಲ್ಲಿರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ನೀರನ್ನು ಶುದ್ದ ಅಹಾರವನ್ನು ಸೇವಿಸಿ.

ಆಹಾರದಲ್ಲಿ ತೇವಾಂಶ ಅಧಿಕವಿರುವ ಹಣ್ಣುಗಳ ಸೇವನೆ ಮತ್ತು ತರಕಾರಿ, ಸೊಪ್ಪುಗಳ ಜೊತೆಯಲ್ಲಿ ಮೊಳಕೆಕಾಳುಗಳನ್ನು ಸೇವಿಸಿ. ದಿನವೊಂದಕ್ಕೆ 4-5 ಬಾರಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಔಷಧಿ/ ಮಾತ್ರೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.

ಪ್ರತಿ ದಿನದ ಆಹಾರ ಸೇವನೆಯಲ್ಲಿ ಎಳನೀರು, ಮಜ್ಜಿಗೆ, ಕಲ್ಲಂಗಡಿ, ಕರಬೂಜ, ಕ್ಯಾರೆಟ್, ಸೌತೆಕಾಯಿ, ಬೆಂಡೆಕಾಯಿ, ಪುದೀನ ಇರಲಿ. ದೇಹವನ್ನು ನಿರ್ಜಲೀಕರಣಗೊಳಿಸುವ ತಂಬಾಕು, ಧೂಮಪಾನ, ಮದ್ಯಪಾನ ಬಿಟ್ಟುಬಿಡಿ. ಬಿಸಿಲಿನಲ್ಲಿ ನಿಂತಿರುವ ವಾಹನದಲ್ಲಿ ಹೆಚ್ಚು ಹೊತ್ತು ಕೂರಬೇಡಿ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಆಹಾರ ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ ಎಂಬ ಸಲಹೆ ಸೂಚನೆಗಳನ್ನು ನಿಡಿದ್ದಾರೆ ಎಂಡಿ ಸಾಹೇಬರು.

ಆದರೆ, ನೌಕರರಿಗೆ ಬಸ್‌ ನಿಲ್ದಾಣಗಳಲ್ಲಿ ಸೂಕ್ತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೊಖ ತೊಳೆದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆ ಅಲ್ಲದೆ ಬಸ್‌ ನಲ್ದಾಣಗಳಲ್ಲಿ ಉತ್ತಮ ಆಹಾರ ಸಿಗುವ ವ್ಯವಸ್ಥೆಗಳನ್ನು ಮಾದರೆ ಈರೀತಿ ಬಿಟ್ಟಿ ಸಲಹೆಗಳನ್ನು ನೀಡುವ ಎಂಡಿ ಅವರು ದಿನದ 24 ಗಂಟೆ ಅಂದರೆ ದೂರದ ಡ್ಯೂಟಿ ಮಾಡುವ ನೌಕರರು ಎಲ್ಲಿ ಇವೆಲ್ಲವನ್ನು ತೆಗೆದುಕೊಳ್ಳಬೇಕು.

ಈ ರೀತಿ ಬೇಕಾಬಿಟ್ಟಿಯಾಗಿ ನೌಕರರಿಗೆ ಉಚಿತ ಸಲಹೆ ಕೊಟ್ಟರೆ ಏನು ಪ್ರಯೋಜನ ಇದರ ಬದಲಿಗೆ ಫಾರಂ-4ಅನ್ನು ಬದಲಿಸಿ ಈ ಸಮಯದಲ್ಲಿ ಬಸ್‌ ನಿಲ್ದಾಣಗಳಲ್ಲಿ ಸಂಸ್ಥೆ ವತಿಯಿಂದ ನೌಕರರಿ ಇವರು ನೀಡುವ ಸಲಹೆ ಸೂಚನೆಗಳಿಗೆ ಅನುಗುಣವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕಲ್ಲವೆ. ಇದನ್ನು ಬಿಟ್ಟು ಈ ರೀತಿ ಸಲಹೆ ನೀಡಿದರೆ ಯಾರಿಗೆ ಪ್ರಯೋಜನವಾಗುತ್ತದೆ ಹೇಳಿ ಸಾಹೇಬರೆ?.

Megha
the authorMegha

Leave a Reply

error: Content is protected !!
Latest news
BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ... NWKRTC: ಬ್ಯಾಡಗಿ ಬಸ್‌ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಧ್ಯೆ ಸಿಲುಕಿದ ಕಾಲೇಜು ವಿದ್ಯಾರ್ಥಿ- ಚಿಂತಾಜನಕ ಸ್ಥಿತಿ ಸಾರಿಗೆ ನೌಕರರ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ನರಸಂಪೇಟೆ ಡಿಪೋ ಚಾಲಕ ಶಂಕರ್ ಗೌಡ್ ಚಿಕಿತ್ಸೆ ಫಲಿಸದೆ ಮೃತ ಬೇಡಿಕೆ ಈಡೇರಿಸದ ಸರ್ಕಾರ: ಸಾರಿಗೆ ನೌಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ- ಸಾವು ಬದುಕಿನ ನಡುವೆ ಹೋರಾಟ KSRTC ನೌಕರರ ಏಪ್ರಿಲ್‌ ತಿಂಗಳ ವೇತನ ಏ.30ರಂದೆ ಪಾವತಿಸಲು ಎಂಡಿ ಆದೇಶ ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾದರೂ ಹಾಜರಾಗಿಲ್ಲ ಅಂತ ಅಂಧ ವಿದ್ಯಾರ್ಥಿನಿಯ ಫೇಲ್ ಮಾಡಿದ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ - ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ SSLC ಪರೀಕ್ಷಾ ಫಲಿತಾಂಶ ಅಧಿಕೃತ ಪ್ರಕಟ: ಶೇ.94.1 ತೇರ್ಗಡೆ ಹುಡುಗಿಯರೇ ಈ ಬಾರಿಯೂ ಮೇಲುಗೈ KSRTC: ನೌಕರರ ವೇತನ ಹೆಚ್ಚಳ ಸಂಬಂಧದ ಹೋರಾಟ ನಿಲ್ಲುವುದಿಲ್ಲ ಹೈ ಕೋರ್ಟ್‌ ನಿರ್ದೇಶನದಂತೆ ಮುಂದುವರಿಯಲಿದೆ- ಚಂದ್ರಶೇಖರ... ಏ.29ರಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ 2024ರ ಜ.1ರಿಂದ ನೌಕರರ ವೇತನ ಹೆಚ್ಚಳ, ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ...