ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್
ನಿನ್ನೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಚಿವರ ಪಟ್ಟಿ ಸಲ್ಲಿಸಿದ ನಂತರ, ರಾಜ್ಯಪಾಲರು ಸರ್ಕಾರ ರಚನೆಗೆ ಅನುಮೋದನೆ ನೀಡಿದರು.

ತಿರುವನಂತಪುರಂ: ಕೇರಳ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಪಕ್ಷದಿಂದ ಆಯ್ಕೆಯಾದ ಕಾಂಗ್ರೆಸ್ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ.ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು.

ಇವರ ಜತೆಗೆ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ.ಪಿ.ಅನಿಲ್ ಕುಮಾರ್, ಪಿ.ಸಿ.ವಿಷ್ಣುನಾಧ್, ಬಿಂಧು ಕೃಷ್ಣ, ಎಂ ಲಿಜ್ಜು, ಟಿ ಸಿದ್ದಿಕ್, ರೋಜಿ ಎಂ. ಜಾನ್, ಕೆ.ಎ ತುಳಸಿ ಮತ್ತು ಒ.ಜೆ.ಜನೀಶ್ ಕಾಂಗ್ರೆಸ್ ಸಚಿವರಾಗಿದ್ದಾರೆ. ಜೊತೆಗೆ ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ಎನ್. ಶಂಸುದ್ದೀನ್, ಪಿ.ಕೆ. ಬಶೀರ್ ಮತ್ತು ವಿ.ಇ.ಅಬ್ದುಲ್ ಗಫೂರ್, ಮಾನ್ಸ್ ಜೋಸೆಫ್ (ಕೆಸಿ-ಜೋಸೆಫ್), ಅನೂಪ್ ಜೇಕಬ್ (ಕೆಸಿ-ಜೇಕಬ್), ಶಿಬು ಬೇಬಿ ಜಾನ್ (ಆರ್ಎಸ್ಪಿ) ಮತ್ತು ಸಿಪಿ ಜಾನ್ (ಸಿಎಂಪಿ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಿನ್ನೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಚಿವರ ಪಟ್ಟಿ ಸಲ್ಲಿಸಿದ ನಂತರ, ರಾಜ್ಯಪಾಲರು ಸರ್ಕಾರ ರಚನೆಗೆ ಅನುಮೋದನೆ ನೀಡಿದರು. ಇಡೀ ಯುಡಿಎಫ್ ಸಚಿವಾಲಯ ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಲಿದೆ. ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಯುಡಿಎಫ್ ಸಂಪುಟ ಏಕಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಇದಾಗಿದೆ.
Related









