ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತಿಂಗಳ ಹಿಂಬಾಕಿ ಹಾಕಿದರು
ಹೌದು! ಮೊನ್ನೆ ಮೇ 14ರಂದು ವಿಜಯಪಥ "BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!" ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ವರದಿ ಬಂದ ತಕ್ಷಣ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ಇಂದು 11 ತಿಂಗಳ ವೇತನ ಹಿಂಬಾಕಿ ಪಾವತಿಸಿದ್ದಾರೆ. ಹೀಗಾಗಿ ಇಂದು ಬಿಎಂಟಿಸಿ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ.

ಬೆಂಗಳೂರು: ವಿಜಯಪಥ ವರದಿ ಪರಿಣಾಮ ಮೇ 19ರಂದು 11 ತಿಂಗಳ ವೇತನ ಹಿಂಬಾಕಿ ಆಗುತ್ತದೆ ಎಂದು ಆದೇಶ ಮಾಡಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಇಂದೇ ಅಂದರೆ ಮೇ 16ರಂದೆ, ಇನ್ನೂ ಮೂರು ದಿನಗಳು ಮುಂಚಿತವಾಗಿಯೇ ನೌಕರರ ಬ್ಯಾಂಕ್ ಖಾತೆಗೆ 11 ತಿಂಗಳ ವೇತನ ಹಿಂಬಾಕಿ ಹಾಕಿಸಿದ್ದಾರೆ.

ಹೌದು! ಮೊನ್ನೆ ಮೇ 14ರಂದು ವಿಜಯಪಥ “BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ವರದಿ ಬಂದ ತಕ್ಷಣ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ಇಂದು 11 ತಿಂಗಳ ವೇತನ ಹಿಂಬಾಕಿ ಪಾವತಿಸಿದ್ದಾರೆ. ಹೀಗಾಗಿ ಇಂದು ಬಿಎಂಟಿಸಿ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ.
ಸಾರಿಗೆ ಸಂಸ್ಥೆಗಳ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡುವ ನಿರ್ಧಾರ ಮಾಡಿ ಏ.29ರಂದು ಮೊದಲ ಹಂತವಾಗಿ ನಾಲ್ಕೂ ನಿಗಮಗಳ ನೌಕರರಿಗೆ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈವರೆಗೂ KSRTC, KKRTC ಮತ್ತು NWKRTC ನೌಕರರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಜಮೆ ಆಗಿದೆ.
ಆದರೆ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೌಕರರಿಗೆ 11 ತಿಂಗಳ ಹಿಂಬಾಕಿ ಈವರೆಗೂ ಜಮೆ ಆಗಿಲ್ಲ. ಹೀಗಾಗಿ ನೌಕರರು ನಮಗೆ ಯಾವಾಗ ಹಿಂಬಾಕಿ ಬರಲಿದೆ ಎಂಬ ಅಧಿಕೃತ ಮಾಹಿತಿ ಇಲ್ಲದೆ ಗೊಂದಲದಲ್ಲಿದ್ದರು.
ಹೀಗಾಗಿ ವಿಜಯಪಥ ಸಂಬಂಧಪಟ್ಟ ಸಂಸ್ಥೆಯ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 450 ಕೋಟಿ ರೂ.ಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC): 137.24 ಕೋಟಿ ರೂ. ಬಿಡುಗಡೆಯಾಗಿರುವ ಹಣವನ್ನು ನೌಕರರ ಬ್ಯಾಂಕ್ ಖಾತೆಗೆ ಇದೇ ಮೇ 19ರ ಮಂಗಳವಾರ ಪಾವತಿಸಲಾಗುವುದು ಎಂದು ಹೇಳಿದ್ದರು.
ಅಲ್ಲದೆ ಆ ಬಳಿಕ ಬಿಎಂಟಿಸಿ ಎಂಡಿ ಅವರು ಮೇ 12ರಂದೆ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಾಕಿದ್ದರು. ಹೀಗಾಗಿ ಮೇ 19ರಂದು ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಪಾವತಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಉಳಿದ 15 ತಿಂಗಳ ವೇತನ ಹಿಂಬಾಕಿಯನ್ನು ಎರಡನೇ ಹಂತದಲ್ಲಿ 7 ಅಥವಾ 8 ತಿಂಗಳ ಹಿಂಬಾಕಿ ಪಾವತಿಸಲಾಗುವುದು ಆ ಬಳಿಕ ಮೂರನೇ ಹಂತದಲ್ಲಿ ಉಳಿದ ತಿಂಗಳುಗಳ ಹಿಂಬಾಕಿ ಪಾವತಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ವಿಜಯಪಥದಲ್ಲಿ ವರದಿ ಪ್ರಕಟವಾಗಿತ್ತು.
ಇನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಎಂಡಿಯಾಗಿರುವ ಶಿವಕುಮಾರ್ ಅವರ ಆದೇಶವನ್ನು ನಿಗಮದ ಅಧಿಕಾರಿಗಳು ಪಾಲಿಸುವಲ್ಲಿ ಉದಾಸೀನತೆ ತೋರಿತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕಾರಣ ಇವರು ಸಂಸ್ಥೆಗೆ ಎಂಡಿ ಆಗಿ ಬಂದಾಗಿನಿಂದ ಈವರೆಗೂ ಸಂಸ್ಥೆಯ ನೌಕರರಿಗೆ ಸಂಬಂಧಪಟ್ಟ ಯಾವೊಂದು ಸಮಸ್ಯೆಯನ್ನು ಆಲಿಸುವ ಸೌಜನ್ಯ ತೋರಿಸಿಲ್ಲ ಬದಲಿಗೆ ಕೆಲ ಅಧಿಕಾರಿಗಳು ಒಪ್ಪಿಸುವ ವರದಿಯನ್ನಷ್ಟೇ ಕೇಳಿಕೊಂಡು ದಿನ ದೂಡುತ್ತಿದ್ದಾರೆ ಎಂದು ಕೆಲ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದರ ಬಗ್ಗೆ ಗಮನ ಸೆಳೆಯಲಾಗಿತ್ತು.
ಇನ್ನು ಪ್ರಮುಖವಾಗಿ ಸಾರಿಗೆ ನಿಗಮಗಳ ಮೂರು ಸಂಸ್ಥೆಗಳಲ್ಲೂ ನೌಕರರಿಗೆ ಹಿಂಬಾಕಿಯನ್ನು ಈಗಾಗಲೇ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ಆದರೆ, ಬಿಎಂಟಿಸಿಯಲ್ಲಿ ಆ ಕೆಲಸ ಇನ್ನೂ ಆಗಿಲ್ಲ, ಕಾರಣ ಎಂಡಿ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಇದರಿಂದ ಅಧಿಕಾರಿಗಳು ಇವರ ಹಿಡಿತದಲ್ಲಿ ಇಲ್ಲದಿರುವುದರಿಂದ ಈ ರೀತಿ ವಿಳಂವಾಗುತ್ತಿದೆ. ಇಂಥ ಎಂಡಿ ಸಂಸ್ಥೆಗೆ ಬೇಕ ಎಂದು ಪ್ರಶ್ನಿಸುತ್ತಿರುವ ಬಗ್ಗೆಯೂ ವಿವರಿಸಲಾಗಿತ್ತು.
ಕಳೆದ 2025ರ ಅಕ್ಟೋಬರ್ನಲ್ಲಿ ಸಂಸ್ಥೆಯ ಎಂಡಿಯಾಗಿ ಅಧಿಕಾರ ವಹಿಸಿಕೊಂಡಿರುವ ಇವರು ಈವರೆಗೂ ನೌಕರರಿಗೆ ಅನುಕೂಲಕರವಾಗುವ ಅಥವಾ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಜತೆಗೆ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪವಿದೆ ಎಂದು ವರದಿ ಪ್ರಕಟವಾಗಿತ್ತು.
ಪ್ರಸ್ತುತ ತಾಜಾ ನಿದರ್ಶನ ಎಂಬಂತೆ ಹಿಂಬಾಕಿ ಹಣವನ್ನು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ಬೇಕಾದ ಮಾಹಿತಿಯನ್ನು ಸಂಬಂಧಪಟ್ಟ ಸಿಬ್ಬಂದಿ/ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಂಗ್ರಹಿಸಿ ಕೊಡದೆ ಉದಾಸೀನತೆಯಿಂದ ನಡೆದುಕೊಂಡಿರುವುದಕ್ಕೇ ಈ ರೀತಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನಾದರು ತಾವು ಒಬ್ಬ ಉನ್ನತ ಸ್ಥಾನದಲ್ಲಿರುವ ಭಾಆಸೆ ಅಧಿಕಾರಿಯಾಗಿರುವುದರಿಂದ ನಿಮ್ಮ ವ್ಯಾಪ್ತಿ ತುಂಬ ವಿಸ್ತರಿಸಿರುವುದರಿಂದ ಕೆಲ ಹಂತದ ಅಧಿಕಾರಿಗಳ ಕೈ ಗೊಂಬೆಯಾಗಬೇಡಿ ಎಂಬುವುದು ವಿಜಯಪಥದ ಕಳಕಳಿಯಾಗಿದೆ ಎಂದು ಮನವಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಆದೇಶ ಹೊರಡಿಸಿದ ದಿನಾಂಕಕ್ಕೂ ಮೂರು ದಿನ ಮುಂಚಿತವಾಗಿಯೇ ನೌಕರರ ಬ್ಯಾಂಕ್ ಖಾತೆ ಹಣ ಜಮೆ ಮಾಡಿದ್ದಾರೆ. ಇದರಿಂದ ನೌಕರರು ಖುಷಿ ವ್ಯಕ್ತಪಡಿಸಿದ್ದು ವಿಜಯಪಥಕ್ಕೆ ಅಭಿನಂದನೆ ತಿಳಿಸಿದ್ದಾರೆ. ಮೇ 12ರಂದು ಬಿಎಂಟಿಸಿ ಎಂಡಿ ಆದೇಶ ಮಾಡಿದ ಪಿಡಿಎಫ್ ಪ್ರತಿ: BMTC FIXATION ARREARS20260513_15405470
Related









