ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನಿವಾರಿಸಿದ ಡಿಸಿ
01-01-2021 ರಿಂದ 30-11-2021ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅರ್ಹ ಸಿಬ್ಬಂದಿಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತದ ಬಿಲ್ಲನ್ನು ತಯಾರಿಸಲಾಗಿತ್ತು. ಅದರಂತೆ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ನೀಡಲಾಗಿದ್ದು ನೌಕರರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಡಿಸಿ ತಿಳಿಸಿದ್ದಾರೆ

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗ ನೌಕರರ 11 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ನೀಡಲಾಗಿದೆ ಎಂದು ವಿಭಾಗದ ಡಿಸಿ ಸ್ಪಷ್ಟ್ರೀಕರಣ ನೀಡಿದ್ದಾರೆ.

ನಿಗಮದ ಹಾಲಿ ಸೇವೆಯಲ್ಲಿರುವ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಮೇ 11ರಂದು ಪಾವತಿಸಲು ಹಾಗೂ ನಿವೃತ್ತ ನೌಕರರಿಗೆ ಮೇ 15ರಂದು ಪಾವತಿಸಲು ನಿಗಮದ ಮುಖ್ಯಲೆಕ್ಕಾಧಿಕಾರಿ ಅಧಿಕೃತವಾಗಿ ಆದೇಶ ಹೊರಡಿಸಿ ಅದರಂತೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ.
ಆದರೆ, ನೌಕರರಿಗೆ 11 ತಿಂಗಳ ಹಿಂಬಾಕಿ ಪಾವತಿಯಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಈಗ ಏಪ್ರಿಲ್ 2021ರಿಂದ ನವೆಂಬರ್ 2021ರ ವರೆಗಿನ ಹಿಂಬಾಕಿ ಕೊಡಲಾಗಿದೆ ಎಂದು ಬ್ಯಾಂಕ್ ಖಾತೆಗೆ ಜಮೆ ಆಗಿರುವ ಬಗ್ಗೆ ಪಾಸ್ ಬುಕ್‌ನಲ್ಲಿ ನಮೂದಾಗಿದೆ. ಇದರಿಂದ ನೌಕರರು ಗೊಂದಲಕ್ಕೆ ಒಳಗಾಗಿ ನಮಗೆ ಎಷ್ಟು ತಿಂಗಳ ಹಿಂಬಾಕಿ ಹಾಕಿದ್ದೀರಾ ಎಂದು ಕೇಳುತ್ತಿದ್ದರು. ಇದನ್ನೂ ಓದಿ: NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ!
ಈ ಸಂಬಂಧ ಇಂದು (ಮೇ13) ಬೆಳಗ್ಗೆ ವಿಜಯ ಪಥ ಪತ್ರಿಕೆಯಲ್ಲಿ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಹೀಗಾಗಿ ಇದಕ್ಕೆ ಸ್ಪಷ್ಟನೆ ನೀಡಿದರು ಡಿಸಿ ಅವರು ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೆ 01-01-2021 ರಿಂದ 30-11-2021ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅರ್ಹ ಸಿಬ್ಬಂದಿಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತದ ಬಿಲ್ಲನ್ನು ತಯಾರಿಸಲಾಗಿತ್ತು. ಅದರಂತೆ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು 12-05-2026 ರಂದು ಎಲ್ಲ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಈ 11 ತಿಂಗಳ ಹಣ ಜಮಾ ಮಾಡಲಾಗಿದ್ದು, ಅದರಂತೆ ಧಾರವಾಡ ಗ್ರಾಮಾಂತರ ವಿಭಾಗದ ರಾಮದುರ್ಗ ಘಟಕದ ಎಲ್ಲ ಅರ್ಹ ಸಿಬ್ಬಂದಿಗಳಿಗೂ 12-05-2026 ರಂದೇ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಘಟಕದ ವಿಷಯ ನಿರ್ವಾಹಕರು ಕೆನರಾ ಬ್ಯಾಂಕಿಗೆ ಈ ಹಿಂಬಾಕಿ ಮೊತ್ತದ ಪಾವತಿಗೆ ಪಟ್ಟಿ ಸಲ್ಲಿಸುವಾಗ ಪತ್ರದ ಮೇಲ್ಬಾಗದಲ್ಲಿ “DWD RMD DEPOT AGREEMENT ARREARS DT APR-2021 TO NOV-2021 11 MONTHS” ಎಂದು ಬರೆದು ಸಲ್ಲಿಸಿರುತ್ತಾರೆ. ಆದರೆ ಎಲ್ಲ ಸಿಬ್ಬಂದಿಗಳ ಹಿಂಬಾಕಿ ವೇತನವನ್ನು 01-01-2021 ರಿಂದ 30-11-2021 ರವರಗೆ ಒಟ್ಟು 11 ತಿಂಗಳವರೆಗೆ ಪಾವತಿಸಲಾಗಿದೆ.
ಆದ್ದರಿಂದ ರಾಮದುರ್ಗ ಘಟಕದ ಎಲ್ಲ ಸಿಬ್ಬಂದಿಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತವನ್ನು 11 ತಿಂಗಳ ಹಿಂಬಾಕಿ ಮೊತ್ತವನ್ನೇ ಪಾವತಿ ಮಾಡಲಾಗಿದೆ ಎಂಬುದರ ಬಗ್ಗೆ ಈ ಮೂಲಕ ದೃಢೀಕರಿಸಿ ಸ್ಪಷ್ಟ್ರೀಕರಣ ನೀಡುತ್ತಿದ್ದು ಯಾವುದೇ ನೌಕರರು ಗೊಂದಲಕ್ಕೆ ಒಳಗಾಗಬಾರದು ಎಂದು ಡಿಸಿ ತಿಳಿಸಿದ್ದಾರೆ. ಡಿಸಿ ಸ್ಪಷ್ಟನೆ ನೀಡಿದ ಪಿಡಿಎಫ್ ಕಾಪಿ: NWKRTC DWD DIV FIXATION ARREARS20260513_15405470
Related









