NEWSದೇಶ-ವಿದೇಶನಮ್ಮರಾಜ್ಯ

“ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು” ಅವಕಾಶ ಇಲ್ಲ: ಭಾರತ ಸಂವಿಧಾನ

"ಸಂಸ್ಥೆಯ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಕನಿಷ್ಠ ವೇತನ, ಸಮಾನ ವೇತನ ನಿರಾಕರಿಸುವಂತಿಲ್ಲ. ಆರ್ಥಿಕ ಅಸಮರ್ಥತೆ ನೆಪ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನದ ಆಶಯಕ್ಕೆ ಅದು ವಿರುದ್ಧ."

ವಿಜಯಪಥ ಸಮಗ್ರ ಸುದ್ದಿ

1. ಮೂಲಭೂತ ಹಕ್ಕುಗಳು – ಭಾಗ III
ಅನುಚ್ಛೇದ 14 – ಕಾನೂನಿನ ಮುಂದೆ ಸಮಾನತೆ

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಕೊಟ್ಟು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರನಿಗೆ ಮಾತ್ರ “ನಷ್ಟ” ಅಂತ ವೇತನ ಹೆಚ್ಚಳ ಮಾಡದೇ ಇರುವುದು ತಾರತಮ್ಯ. ಇದು ಭಾರತ ಸಂವಿಧಾನದ 14ನೇ ವಿಧಿ ಉಲ್ಲಂಘನೆ.

ಸುಪ್ರೀಂ ಕೋರ್ಟ್: Randhir Singh v/s Union of India (1982) – “ಸಮಾನ ಕೆಲಸಕ್ಕೆ ಸಮಾನ ವೇತನ ಸಾಂವಿಧಾನಿಕ ಹಕ್ಕು.”

ಅನುಚ್ಛೇದ 21 – ಜೀವಿಸುವ ಹಕ್ಕು
ಸುಪ್ರೀಂ ಕೋರ್ಟ್: Olga Tellis v/s BMC (1985) – “ಜೀವಿಸುವ ಹಕ್ಕು ಅಂದ್ರೆ ಕೇವಲ ಪ್ರಾಣ ಉಳಿಸಿಕೊಳ್ಳೋದು ಅಲ್ಲ. ಗೌರವಯುತವಾಗಿ ಬದುಕುವ ಹಕ್ಕು.”

ಅನುಚ್ಛೇದ 23 – ಬಲವಂತದ ದುಡಿಮೆ ನಿಷೇಧ: “ಅಗತ್ಯ ಸೇವೆ” ಅಂತ ಮುಷ್ಕರ ಹಕ್ಕು ಕಿತ್ತುಕೊಂಡು, ಅದೇ ಸಮಯಕ್ಕೆ ನ್ಯಾಯಯುತ ವೇತನ ಕೊಡದಿದ್ದರೆ ಅದು ಬಲವಂತದ ದುಡಿಮೆ. 23ನೇ ವಿಧಿ ಇದನ್ನು ನಿಷೇಧಿಸುತ್ತೆ.

2. ರಾಜ್ಯ ನೀತಿ ನಿರ್ದೇಶಕ ತತ್ವಗಳು – ಭಾಗ IV: ಇವು ನೇರವಾಗಿ ಕೋರ್ಟ್‌ನಲ್ಲಿ ಜಾರಿ ಮಾಡಿಸೋಕೆ ಆಗಲ್ಲ. ಆದ್ರೆ ಸರ್ಕಾರ ಕಾನೂನು ಮಾಡುವಾಗ ಪಾಲಿಸಲೇಬೇಕು ಅಂತ ಸಂವಿಧಾನವೇ ಹೇಳುತ್ತೆ.

ಅನುಚ್ಛೇದ 38(1): ಜನರ ಕಲ್ಯಾಣ ಉತ್ತೇಜಿಸುವ ಸಾಮಾಜಿಕ ವ್ಯವಸ್ಥೆ ರೂಪಿಸಬೇಕು.
ಅನುಚ್ಛೇದ 39(d): ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ.
ಅನುಚ್ಛೇದ 41: ಕೆಲಸ ಮಾಡುವ ಹಕ್ಕು, ನ್ಯಾಯಯುತ ಕೆಲಸದ ಪರಿಸ್ಥಿತಿ.
ಅನುಚ್ಛೇದ 43: ಎಲ್ಲ ಕಾರ್ಮಿಕರಿಗೆ ಜೀವನ ವೇತನ, ಯೋಗ್ಯ ಜೀವನಮಟ್ಟ.

* ಸಾರಿಗೆ ನಿಗಮ “ನಷ್ಟದಲ್ಲಿದೆ” ಅಂತ ಹೇಳಿ 43ನೇ ವಿಧಿಯನ್ನು ಗಾಳಿಗೆ ತೂರುವಂತಿಲ್ಲ. ನಷ್ಟ ಸರಿದೂಗಿಸುವುದು ಸರ್ಕಾರದ ಜವಾಬ್ದಾರಿ, ನೌಕರನದ್ದಲ್ಲ.

3. ಸಂವಿಧಾನ “ನಷ್ಟ” ಅಂತ ಎಲ್ಲಾದರೂ ಹೇಳಿದೆಯಾ?: ಇಲ್ಲ. ಸಂವಿಧಾನದ ಯಾವ ಮೂಲೆಯಲ್ಲೂ “ಸಾರ್ವಜನಿಕ ಸೇವಾ ಇಲಾಖೆ ನಷ್ಟದಲ್ಲಿದ್ದರೆ ನೌಕರರಿಗೆ ಸಂಬಳ ಕೊಡಬೇಕಿಲ್ಲ” ಅಂತ ಬರೆದಿಲ್ಲ.

ಬದಲಾಗಿ ಅನುಚ್ಛೇದ 282 ಹೇಳುತ್ತೆ: “ರಾಜ್ಯ ಸರ್ಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಹಣ ಮಂಜೂರು ಮಾಡಬಹುದು.” KSRTC ನಷ್ಟ ಭರಿಸುವುದು “ಸಾರ್ವಜನಿಕ ಉದ್ದೇಶ”. ಏಕೆಂದರೆ ಅದು 1 ಕೋಟಿ ಜನರಿಗೆ ದಿನನಿತ್ಯ ಸೇವೆ ಕೊಡುತ್ತೆ.

ಸುಪ್ರೀಂ ಕೋರ್ಟ್ ತೀರ್ಪು: State of Punjab v/s Jagjit Singh (2016): “ಸಂಸ್ಥೆಯ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಕನಿಷ್ಠ ವೇತನ, ಸಮಾನ ವೇತನ ನಿರಾಕರಿಸುವಂತಿಲ್ಲ. ಆರ್ಥಿಕ ಅಸಮರ್ಥತೆ ನೆಪ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನದ ಆಶಯಕ್ಕೆ ಅದು ವಿರುದ್ಧ.”

ಕರ್ನಾಟಕ ಹೈಕೋರ್ಟ್: KSRTC Employees Federation v/s State (2018): “KSRTC ನೌಕರರಿಗೆ ವೇತನ ಪರಿಷ್ಕರಣೆ ವಿಳಂಬ ಮಾಡುವುದು ಅನುಚ್ಛೇದ 21 ರ ಉಲ್ಲಂಘನೆ ಎಂದು ಹೇಳಿದೆ. ಈ ಬಗ್ಗೆ ಎಲ್ಲ ನೌಕರರ ಸಂಘಟನೆಗಳು ಅರಿತು ನಡೆದರೆ ನ್ಯಾಯ ಸಿಗಲಿದೆ. ಇಲ್ಲದಿದ್ದರೆ…!?

ವಿಶೇಷ ಸೂಚನೆ: ಇದು ಕೇವಲ ಕಾನೂನಿನ ಮಾಹಿತಿಗಾಗಿ.

Megha
the authorMegha

Leave a Reply

error: Content is protected !!
Latest news
ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ ಮಿಲನ ಕಳನಾಯಕ ಖ್ಯಾತಿಯ, ಹಿಟ್ಲರ್ ಕಲ್ಯಾಣ’ ಧಾರವಾಹಿಯ ಹೀರೋ ದಿಲೀಪ್ ರಾಜ್ ಇನ್ನಿಲ್ಲ KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..? KSRTC: ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ನುಂಗಲಾರದ ತುತ್ತಾಯಿತೆ!? KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ ! KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ... KSRTC: ಬ್ರೇಕ್ ಫೇಲಾಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್‌- ತಪ್ಪಿದ ಭಾರಿ ಅನಾಹುತ