NEWSಬೆಂಗಳೂರು

ಪ್ರಾಮಾಣಿಕತೆಗೆ ಅಂಬಾಸೆಡರ್‌ ಈ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ: ರಾಜಾಜಿನಗರ ಶಾಸಕ ಸುರೇಶ್‌ ಕುಮಾರ್‌ ಶ್ಲಾಘನೆ

ಸಿಕ್ಕ ಹಣವಿದ್ದ ಪರ್ಸ್‌ ನನಗೆ ಒಪ್ಪಿಸಿ ವಾರಸುದಾರರಿಗೆ ತಲುಪಿಸಿದ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ. ಆ ಪರ್ಸ್ ಒಳಗೆ ಒಂದಷ್ಟು ಹಣವಿತ್ತು. ಆದರೆ ಇದು ಯಾರಿಗೆ ಸೇರಿದೆಂದು ಗೊತ್ತಾಗಲಿಲ್ಲ. ಆ ವೇಳೆ ಸುಬ್ರಮಣಿ ಅದನ್ನು ವಾರಸುದಾರರಿಗೆ ತಲುಪಿಸಬೇಕೆಂದು ಪ್ರಯತ್ನಿಸಿದರು. ಆಗ ಸುಬ್ರಮಣಿ ಜತೆಯಿದ್ದ ಒಬ್ಬ ವ್ಯಕ್ತಿ ಈ ಹಣವನ್ನು ನಾವಿಬ್ಬರೂ ಪಾಲು ಮಾಡಿಕೊಳ್ಳೋಣವೆಂದು ದುಂಬಾಲು ಬಿದ್ದರು...

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಶಾಸಕರ ಕಚೇರಿಯಲ್ಲಿ ನಡೆದ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ನಮ್ಮ ಸಮಾಜದಲ್ಲಿ ಹಾಗೂ ಸುತ್ತಮುತ್ತಲ್ಲೂ ಪ್ರಾಮಾಣಿಕರು ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಅದೇನೆಂದರೆ 75 ವರ್ಷದ ಮುಸ್ಸಂಜೆಯ ಇಳಿ ವಯಸ್ಸಿನಲ್ಲಿರುವ ಆ ತರುಣನಿಗೆ ಸಿಕ್ಕ ಹಣವಿದ್ದ ಪರ್ಸ್‌ಅನ್ನು ವಾರಸುದಾರರಿಗೆ ಒಪ್ಪಿಸಿ ಎಂದು ನನಗೆ ಒಪ್ಪಿಸಿದರು.

ಇಲ್ಲಿ ನಾನು ಹೇಳ ಹೊರಟಿರುವುದು ಕಥೆಯಲ್ಲ ಸತ್ಯಕತೆ. ಸಿಕ್ಕ ಪರ್ಸ್‌ನಲ್ಲಿರುವ ಹಣವನ್ನು ಇಬ್ಬರು ಹಂಚಿಕೊಳ್ಳೋಣವೆಂದು ಜತೆಗಿದ್ದ ವ್ಯಕ್ತಿಯೊಬ್ಬರು ಎಷ್ಟೇ ದುಂಬಾಲು ಬಿದ್ದರು ಅದನ್ನು ಒಪ್ಪದೆ ಪ್ರಾಮಾಣಿಕವಾಗಿ ಕಳೆದುಕೊಂಡವರಿಗೆ ತಲುಪಿಸಿದ್ದು ಮಾತ್ರ ಅವರನ್ನು ಮುಗಿಲೆತ್ತರದಲ್ಲಿ ನಿಲ್ಲಿಸಿದೆ  ಎಂದು ನಾನಾದರೂ ಭಾವಿಸುತ್ತೇನೆ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಆ ವೃದ್ಧರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅವರು   ನಿನ್ನೆ ಗುರುವಾರ ನಮ್ಮ ಕಚೇರಿಯಲ್ಲಿ ನಡೆದ ಅತ್ಯಂತ ಹೃದಯಸ್ಪರ್ಶಿ ಘಟನೆ. ರಾಜಾಜಿನಗರ ಶಾಸಕರ ಕಚೇರಿ ಇರುವುದು ರಾಜಾಜಿನಗರದ ನಗರ ಪಾಲಿಕೆ ಸಮುಚ್ಚಯದಲ್ಲಿ. ಅದನ್ನು ಆರ್‌ಟಿಒ ಕಾಂಪ್ಲೆಕ್ಸ್ ಎಂದು ಕರೆಯುವುದೂ ಉಂಟು.

ಈ ಕಟ್ಟಡದ ಆವರಣದಲ್ಲಿ ಆರ್‌ಟಿಒ, ಜಿಂದಾಲ್ ಚಾರಿಟೇಬಲ್ ಆಸ್ಪತ್ರೆ, ಬೆಂಗಳೂರು ಒನ್, ಬೆಸ್ಕಾಂ, ನಗರ ಪಾಲಿಕೆಯ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಗುರುವಾರ ನಿನ್ನೆ ಮಧ್ಯಾಹ್ನ ಸುಮಾರು 1.30 ಗಂಟೆ ಹೊತ್ತಿಗೆ, ಲಕ್ಷ್ಮೀ ನಾರಾಯಣಪುರದ ಒಂಬತ್ತನೇ ಅಡ್ಡರಸ್ತೆಯ ನಿವಾಸಿ 75 ವರ್ಷದ ಪತ್ರಿಕಾ ವಿತರಕಾರದ ಕೆ.ಸುಬ್ರಮಣಿ ಎಂಬುವರಿಗೆ ನಗರ ಪಾಲಿಕೆಯ ಈ ಆವರಣದಲ್ಲಿ ಹಳದಿ ಬಣ್ಣದ ಪರ್ಸ್ ಸಿಕ್ಕಿತು.

ಆ ಪರ್ಸ್ ಒಳಗೆ ಒಂದಷ್ಟು ಹಣವಿತ್ತು. ಆದರೆ ಇದು ಯಾರಿಗೆ ಸೇರಿದೆಂದು ಗೊತ್ತಾಗಲಿಲ್ಲ. ಆ ವೇಳೆ ಸುಬ್ರಮಣಿ ಅದನ್ನು ವಾರಸುದಾರರಿಗೆ ತಲುಪಿಸಬೇಕೆಂದು ಪ್ರಯತ್ನಿಸಿದರು. ಆಗ ಸುಬ್ರಮಣಿ ಜತೆಯಿದ್ದ ಒಬ್ಬ ವ್ಯಕ್ತಿ ಈ ಹಣವನ್ನು ನಾವಿಬ್ಬರೂ ಪಾಲು ಮಾಡಿಕೊಳ್ಳೋಣವೆಂದು ದುಂಬಾಲು ಬಿದ್ದರು. ಆದರೆ ಪ್ರಾಮಾಣಿಕತೆ ಎಂಬುದನ್ನು ಮೈಗೂಡಿಸಿಕೊಂಡಿರುವ, ಆರ್ಥಿಕವಾಗಿ ಅಷ್ಟೇನೂ ಸದೃಢನಲ್ಲದ ಸುಬ್ರಮಣಿ ಇದೇ ಕಟ್ಟಡದಲ್ಲಿರುವ ಶಾಸಕರಿಗೆ ಇದನ್ನು ಕೊಟ್ಟು ವಾರಸುದಾರರಿಗೆ ತಲುಪಿಸುವ ಒಂದು ಪ್ರಯತ್ನ ಮಾಡುತ್ತೇನೆ ಎಂದು ನಿರ್ಧರಿಸಿ ನನ್ನ ಕಚೇರಿಗೆ ಬಂದರು.

ಆ ಸಮಯದಲ್ಲಿ ನಾನು ನಮ್ಮ ಕ್ಷೇತ್ರದ ಎಲ್ಲ ಶಾಲೆಗಳ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತೊಡಗಿದ್ದೆ. ನಮ್ಮ ಸಂವಾದ ಕಾರ್ಯಕ್ರಮ ಮುಗಿಯುವವರೆಗೂ ಕಾದು ಕುಳಿತು ಸುಬ್ರಮಣಿ ನನ್ನನ್ನು ಭೇಟಿಯಾದರು. ಸುಬ್ರಮಣಿ ಯವರ ಕಣ್ಣಲ್ಲಿದ್ದ ಆ ಕಳಕಳಿ ನನ್ನ ಮನಸ್ಸನ್ನು ಸೂರೆಗೊಂಡಿತು. ಜತೆಗೆ ನಾನೇನು ದೊಡ್ಡ ಕಾರ್ಯ ಮಾಡುತ್ತೇನೆ ಎಂಬ ಒಂದಂಶವೂ ಇಲ್ಲದ ನಿರ್ಭಾವುಕತೆ ಎದ್ದು ಕಾಣುತ್ತಿತ್ತು.

ತಕ್ಷಣ ಪಕ್ಕದಲ್ಲಿರುವ ರಾಜಾಜಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ನನ್ನ ಕಚೇರಿಗೆ ಕರೆಯಿಸಿ ಸುಬ್ರಹ್ಮಣಿ ಅವರಿಂದ ಪೊಲೀಸ್ ಇನ್ಸ್ಪೆಕ್ಟರ್ ಗೆ ಆ ಪರ್ಸನ್ನು ಹಸ್ತಾಂತರಿಸಿದೆ. ಸುಬ್ರಮಣಿಯವರ ಈ ಪ್ರಾಮಾಣಿಕ ನಡೆಯನ್ನು ಮೆಚ್ಚಿ ಅವರಿಗೆ ಒಂದು ಸಣ್ಣ ಕೊಡುಗೆಯನ್ನು ಕೊಟ್ಟೆ.

ಮಧ್ಯಾಹ್ನದ ನಂತರ ಸ್ಟೇಷಸ್‌ಗೆ ಪಾದರಾಯನ ಪುರದ ವಾಹದ್ ಖಾನ್ ಎಂಬುವರ ಮಗಳು ಶಕೀಲಾ ಎಂಬುವವರು ಮಹಾನಗರ ಪಾಲಿಕೆಯ ಕಟ್ಟಡದ ಆವರಣದಲ್ಲಿ ತನ್ನ ಹಳದಿ ಬಣ್ಣದ ಪರ್ಸ್ ಕಳೆದುಕೊಂಡು ಬಿಟ್ಟಿದ್ದೇನೆ ಎಂದು ಬಂದು ತನ್ನ ಅಳಲು ತೋಡಿಕೊಂಡರು.

ಪೊಲೀಸರು ಆಕೆಗೆ ಕೆಲವು ಪ್ರಶ್ನೆಗಳನ್ನು ಹಾಕಿ, ದೃಢೀಕರಿಸಿಕೊಂಡ ಮೇಲೆ ಆ ಪರ್ಸನ್ ಆಕೆಗೆ ವಾಪಸ್ಸು ಕೊಟ್ಟಾಗ ಆಕೆಗೆ ಬಂದ ನಿರಾಳತೆ ಹೇಳತೀರದು. ಪರ್ಸಿನಲ್ಲಿ ಇದ್ದ ಹಣ ಒಂದು ಚೂರು ವ್ಯತ್ಯಾಸವಿಲ್ಲದೆ Intact ಆಗಿ ಇದ್ದದ್ದು ಆಕೆಗೆ ಇನ್ನಷ್ಟು ನೆಮ್ಮದಿ ತಂದಿತು.

ಸುಬ್ರಮಣಿ ಅಂಥವರು ಸಮಾಜದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ನಿಜಕ್ಕೂ ಇದ್ದಾರೆ. ಆದರೆ ಕೆಟ್ಟವರ ಕಾರ್ಯಗಳು ಮಾತ್ರ ಹೆಚ್ಚಾಗಿ ಗಮನ ಸೆಳೆಯುವಂತೆ ಪ್ರಕಟವಾಗುವುದರಿಂದ ಸುಬ್ರಮಣಿ ಅಂತಹವರ ಪ್ರಾಮಾಣಿಕ ಕಾರ್ಯಗಳು ಎಲೆಮರೆಯ ಕಾಯಿಯಂತೆ ಉಳಿದುಬಿಡುತ್ತದೆ.

ಸಮಾಜಕ್ಕೆ ಭರವಸೆ ಕೊಡುವಂತಹ ಈ ಕಾರ್ಯ ಮಾಡಿದ ಸುಬ್ರಮಣಿ ಅವರಿಗೆ ನಾವೆಲ್ಲ ಮನಸ್ಪೂರ್ವಕ ಅಭಿನಂದನೆ ಸಲ್ಲಿಸೋಣ ಎಂದು ರಾಜಾಜಿನಗರ ಶಾಸಕರೂ ಆದ ಮಾಜಿ ಸಚಿವ ಸುರೇಶ್‌ ಕುಮಾರ್‌ ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಆ 75 ವರ್ಷದ ಪತ್ರಿಕಾ ವಿತರಕಾರದ ಸುಬ್ರಮಣಿ ಅವರನ್ನು ಕೊಂಡಾಡಿದ್ದಾರೆ ಆದರೂ ಇದು ಅತಿಶಯೋಕ್ತಿಯಲ್ಲ ಇದು ಸುಬ್ರಮಣಿ ಅವರಿಗೆ ಸಲ್ಲಬೇಕಾದ ಗೌರವ.

Deva
the authorDeva

Leave a Reply

error: Content is protected !!
Latest news
ಪ್ರಾಮಾಣಿಕತೆಗೆ ಅಂಬಾಸೆಡರ್‌ ಈ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ: ರಾಜಾಜಿನಗರ ಶಾಸಕ ಸುರೇಶ್‌ ಕುಮಾರ್‌ ಶ್ಲಾಘನೆ KSRTC ಬಸ್‌ ಲಾರಿಗೆ ಡಿಕ್ಕಿ: ಸಂಸ್ಥೆಯ ಚಾಲಕ ಸಾವು, ಕಂಡಕ್ಟರ್‌ ಕಾಲು ಮುರಿತ, 10 ಮಂದಿ ಪ್ರಯಾಣಿಕರಿಗೆ ಗಾಯ: 18 ಗಂಟೆ... ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: 'ಪರಮ್ ವಿಹಾರ' ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ ಗೃಹಲಕ್ಷ್ಮಿ ಯೋಜನೆಯಲ್ಲಿ  ಯಾವುದೇ ಗೋಲ್‌ಮಾಲ್ ಆಗಿಲ್ಲ:  ಡೇಟಾ ಸಹಿತ ಮಹಿಳಾ ಇಲಾಖೆ  ಸ್ಪಷ್ಟನೆ  ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಅನುಚೇತ್ ಅಧಿಕಾರ ಸ್ವೀಕಾರ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಮಾಡಿಸಲು ಅನ್ನದಾತರಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಕರೆ ಜೂ.27ರಂದು ನಾಡಪ್ರಭು ಕೆಂಪೇಗೌಡರ ಮೂಲಸ್ಥಳ ಆವತಿಯಿಂದ ಜ್ಯೋತಿ ರಥ ಯಾತ್ರೆ ಆರಂಭ KSRTC- BMTC ನೂತನ ಎಂಡಿಗಳ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆಗೆ ಸಭೆ ಕರೆಯಲು ಒತ್ತಾಯ ​NWKRTC ಸಂಸ್ಥೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ದರ್ಜೆ-2ರ ಅಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಕರೆ BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ...