NEWSಕೃಷಿನಮ್ಮರಾಜ್ಯ

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಮಾಡಿಸಲು ಅನ್ನದಾತರಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಕರೆ

ಆಸಕ್ತ ರೈತರು ಭೂಮಿ ದಾಖಲೆಗಳಾದ ಪಹಣಿ/ ಕಂದಾಯ ರಶೀತಿ/ ಖಾತೆ ಪುಸ್ತಕ/ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆದಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಲು ಅರ್ಜಿ  ಸಲ್ಲಿಸಬಹುದಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೃಷಿ ಇಲಾಖೆ ವತಿಯಿಂದ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಬಿ.ಜಿ ಕಲಾವತಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದರು ಮಾಡಿರುವ ಅವರು, ಬೆಂಗಳೂರು ಜಿಲ್ಲೆಯಲ್ಲಿ ಎಸ್.ಬಿ.ಐ ಜನರಲ್ ಇನ್ಶೂರೆನ್ ಕಂಪನಿ ಲಿಮಿಟೆಡ್ ಇವರ ಸಹಯೋಗದೊಂದಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಆಸಕ್ತ ರೈತರು ಭೂಮಿ ದಾಖಲೆಗಳಾದ ಪಹಣಿ/ ಕಂದಾಯ ರಶೀತಿ/ ಖಾತೆ ಪುಸ್ತಕ/ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆದಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಲು ಅರ್ಜಿ  ಸಲ್ಲಿಸಬಹುದಾಗಿದೆ.

ಯಾವ ಬೆಳೆಗೆ ಎಷ್ಟು ವಿಮೆ ಸಿಗಲಿದೆ ಎಂಬುದನ್ನು ನೋಡುವುದಾದರೆ ರಾಗಿ (ಮಳೆಯಾಶ್ರಿತ) ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 399.2 ರೂ.ಪಾವತಿಸಿದರೆ ವಿಮಾ ಮೊತ್ತ 19,960 ರೂ. ಪಡೆಯಬಹುದು.

ರಾಗಿ (ನೀರಾವರಿ ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 466.4 ರೂ ಪಾವತಿಸಿದರೆ 23,320 ವಿಮಾ ಮೊತ್ತ ಪಡೆಯಬಹುದು. ಭತ್ತ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 868.8 ರೂ ಪಾವತಿಸಿದರೆ 43,440 ರೂ ವಿಮಾ ಮೊತ್ತ ಪಡೆಯಬಹುದು.

ಮುಸುಕಿನ ಜೋಳ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 609.6 ರೂ ಪಾವತಿಸಿದರೆ 30,480 ರೂ ವಿಮಾ ಮೊತ್ತ ಪಡೆಯಬಹುದು. ಮುಸುಕಿನ ಜೋಳ (ಮಳೆ ಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 540 ಪಾವತಿಸಿದರೆ ವಿಮಾ ಮೊತ್ತ 27,000 ಪಡೆಯಬಹುದು.

ಹುರಳಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 188 ರೂ ಪಾವತಿಸಿದರೆ ವಿಮಾ ಮೊತ್ತ 9,400 ಪಡೆಯಬಹುದು. ನೆಲಗಡಲೆ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 523 ಪಾವತಿಸಿದರೆ 26,160 ವಿಮಾ ಮೊತ್ತ ಪಡೆಯಬಹುದು.

ತೊಗರಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 460 ಪಾವತಿಸಿದರೆ 23,040 ವಿಮಾ ಮೊತ್ತ ಪಡೆಯಬಹುದು. ತೊಗರಿ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 482 ಪಾವತಿಸಿದರೆ 24,120 ವಿಮಾ ಮೊತ್ತ ಪಡೆಯಬಹುದು. ಟಮೊಟೊ ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 3396 ಪಾವತಿಸಿದರೆ ವಿಮಾ ಮೊತ್ತ 67,920 ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ಬೆಳೆ ವಿಮಾ ಸಂಸ್ಥೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರ ಇಲಾಖೆ ಹಾಗೂ ಬೆಳೆ ಸಾಲ ನೀಡುವ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ಗಳನ್ನು ಸಂಪರ್ಕಿಸಲು ಬೆಂಗಳೂರು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಬಿ.ಜಿ ಕಲಾವತಿ ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
ಗೃಹಲಕ್ಷ್ಮಿ ಯೋಜನೆಯಲ್ಲಿ  ಯಾವುದೇ ಗೋಲ್‌ಮಾಲ್ ಆಗಿಲ್ಲ:  ಡೇಟಾ ಸಹಿತ ಮಹಿಳಾ ಇಲಾಖೆ  ಸ್ಪಷ್ಟನೆ  ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಅನುಚೇತ್ ಅಧಿಕಾರ ಸ್ವೀಕಾರ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಮಾಡಿಸಲು ಅನ್ನದಾತರಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಕರೆ ಜೂ.27ರಂದು ನಾಡಪ್ರಭು ಕೆಂಪೇಗೌಡರ ಮೂಲಸ್ಥಳ ಆವತಿಯಿಂದ ಜ್ಯೋತಿ ರಥ ಯಾತ್ರೆ ಆರಂಭ KSRTC- BMTC ನೂತನ ಎಂಡಿಗಳ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆಗೆ ಸಭೆ ಕರೆಯಲು ಒತ್ತಾಯ ​NWKRTC ಸಂಸ್ಥೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ದರ್ಜೆ-2ರ ಅಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಕರೆ BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ... KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು ಅರ್ಹ ದಲಿತರು, ಹಿಂದುಳಿದವರಿಗೆ ಯೋಜನೆ ಸೌಲಭ್ಯ ತಲುಪಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಅನುರಾಧ ತಾಕೀತು