NEWSನಮ್ಮಜಿಲ್ಲೆ

KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ

ಬಡಿಗೇರ್ ಅವರ ಮುಂದಿನ ದಿನಗಳ ಖರ್ಚು ವೆಚ್ಚಗಳಿಗಾಗಿ ಘಟಕದ ನೌಕರರಿಂದ ಸಂಗ್ರಹಿಸಿದ್ದ ದೇಣಿಗೆಯ ಉಳಿಕೆ ಮೊತ್ತ 50000 ರೂ.ಗಳನ್ನು ಚಾಲಕ ಬಡಿಗೇರ್ ಅವರ ಖಾತೆಗೆ ಜಮಾಗೊಳಿಸಿದ್ದು ಅದನ್ನು ಅವಶ್ಯವಿದ್ದಾಗ ಉಪಯೋಗಿಸಿಕೊಳ್ಳುವಂತೆ ಡಿಎಂ ಸಲಹೆ ನೀಡಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಡ್ರಿಂಕ್ಸ್ ಕಂಟಿನ್ಯೂಟಿ ಪರೀಕ್ಷಿಸಲು ಅಧಿಕಾರಿಗಳು ಬಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿ ಮೊದಲ ಮಹಡಿಯಲ್ಲಿದ್ದ ವಿಶ್ರಾಂತಿ ಕೋಣೆಯಿಂದ ಓಡಿಹೋಗುವ ಭರದಲ್ಲಿ ಮೆಟ್ಟಿಲುಗಳಿಂದ ಬಿದ್ದು ಎರಡು ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ನೌಕರನ ನೆರವಿಗೆ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾವಿಸಿದ್ದಾರೆ.

ಘಟಕದ ಚಾಲಕ ಈರಣ್ಣ ಬಡಿಗೇರ್ ಎಂಬುವರು ಜೂನ್‌ 16ರ ರಾತ್ರಿ ಬಿದ್ದು ಎರಡು ಕಾಲುಗಳನ್ನು ಮುರಿದುಕೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಘಟಕ ವ್ಯವಸ್ಥಾಪಕ ಪಿ.ಇಸ್ಮಾಯಿಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಡಿಗೇರ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ ಘಟಕದ ಸಹೋದ್ಯೋಗಿಗಳ ಸಹಕಾರದಿಂದ ಅಗತ್ಯ ಸಲಕರಣೆ ಗಳನ್ನು ನೀಡಿ ಶೀಘ್ರ ಗುಣಮುಖರಾಗಿ ಬನ್ನಿ ಎಂದು ಧೈರ್ಯ ತುಂಬಿದ್ದಾರೆ.

ಇನ್ನು ಇದೇ ವೇಳೆ ಇನ್ಸೂರೆನ್ಸ್ ಕ್ಲೈಮ್ ಹೊರತುಪಡಿಸಿ ಆಸ್ಪತ್ರೆಗೆ ಕಟ್ಟಬೇಕಿದ್ದ ಉಳಿಕೆ ಮೊತ್ತ ಒಟ್ಟು 21000 ರೂಪಾಯಿಯನ್ನು ಎಲ್ಲ ಸಿಬ್ಬಂದಿಗಳ ದೇಣಿಗೆಯೊಂದಿಗೆ ಆಸ್ಪತ್ರೆಗೆ ಪಾವತಿಸಿದ್ದು, ಚಾಲಕರು ಹಾಗೂ ಇತರೇ ಸಿಬ್ಬಂದಿಗಳ ಸಮ್ಮುಖದಲ್ಲಿ ಬಡಿಗೇರ್ ಅವರಿಗೆ ಸಾಂತ್ವನ ಮಾತುಗಳನ್ನು ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಬಡಿಗೇರ್ ಅವರ ಮುಂದಿನ ದಿನಗಳ ಖರ್ಚು ವೆಚ್ಚಗಳಿಗಾಗಿ ಘಟಕದ ನೌಕರರಿಂದ ಸಂಗ್ರಹಿಸಿದ್ದ ದೇಣಿಗೆಯ ಉಳಿಕೆ ಮೊತ್ತ 50000 ರೂ.ಗಳನ್ನು ಚಾಲಕ ಬಡಿಗೇರ್ ಅವರ ಖಾತೆಗೆ ಜಮಾಗೊಳಿಸಿದ್ದು ಅದನ್ನು ಅವಶ್ಯವಿದ್ದಾಗ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಆಸ್ಪತ್ರೆಗೆ ಸಂಸ್ಥೆಯ ಸಹಾಯಕ ಸಂಚಾರ ಅಧೀಕ್ಷಕ ಗಣೇಶ್ ಪೈ, ಸಹಾಯಕ ಕಾರ್ಯಧೀಕ್ಷಕ ವಿನಯಾ ಜಿ. ರೈ, ಲೆಕ್ಕ ಪತ್ರ ಮೇಲ್ವಿಚಾರಕ ದೇವಿಪ್ರಸಾದ್ ಶೆಟ್ಟಿ, ಚಾಲಕ ಬೋಧಕರು ಯತೀಶ್ ಪೂಜಾರಿ ಮತ್ತು ಚಾಲನಾ ಸಿಬ್ಬಂದಿಗಳು ಭೇಟಿ ನೀಡಿದ್ದರು.

ಭಯಬಿಟ್ಟು ಡ್ಯೂಟಿ ಮಾಡಿ: ಇನ್ನು ನೌಕರರು ಡ್ರಿಂಕ್ಸ್ ಕಂಟಿನ್ಯೂಟಿ ಪರೀಕ್ಷಿಸಲು ಅಧಿಕಾರಿಗಳು ಬಂದಿದ್ದಾರೆ ಎಂದು ಭಯಗೊಂಡು ಓಡಿಹೋಗುವ ಭರದಲ್ಲಿ ಈ ರೀತಿ ಅವಘಡಕ್ಕೆ ತುತ್ತಾಗಬೇಡಿ. ಅಧಿಕಾರಿಗಳು ಅವರ ಕೆಲಸ ಅವರು ಮಾಡುತ್ತಾರೆ. ಅದಕ್ಕೆ ಸಹಕರಿಸಿ ಮತ್ತು ನೌಕರರು ಕೂಡ ಡ್ಯೂಟಿ ಮೇಲೆ ಹೋಗುವಾಗ ಮದ್ಯಪಾನ ಮಾಡುವುದು ಕಾನೂನು ಬಾಹಿರವಾಗುತ್ತದೆ.

ಒಂದೇಕಡೆ ಬೇರುಬಿಟ್ಟಿರುವ ಅಧಿಕಾರಿಗಳು: ಇನ್ನು ಇದೇ ಬಿ.ಸಿ.ರೋಡ್ ಘಟಕದಲ್ಲಿ ಹಾಗೂ ಪುತ್ತೂರು ವಿಭಾಗದಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳು ಒಂದೇಕಡೆ ಇದ್ದು ಅವರನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವರ್ಗಾವಣೆ ಮಾಡುವ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಒಂದೇಕಡೆ ಹಲವು ವರ್ಷಗಳಿಂದ ಇದ್ದರೆ ಅಲ್ಲಿ ನೌಕರರಿಗೆ ಕಿರುಕುಳ ನೀಡುವುದು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಮೇಲಧಿಕಾರಿಗಳು ಹಾಗೂ ಸಾರಿಗೆ ಸಚಿವರು ಜರೂರಾಗಿ ಗಮನಹರಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ... KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು ಅರ್ಹ ದಲಿತರು, ಹಿಂದುಳಿದವರಿಗೆ ಯೋಜನೆ ಸೌಲಭ್ಯ ತಲುಪಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಅನುರಾಧ ತಾಕೀತು ಮಾವು ಬೆಳೆ ಹೆಕ್ಟೇರಿಗೆ 80 ಸಾವಿರ ರೂ. ಸಿಗಲಿದ್ದು ರೈತರು ಬೆಳೆ ವಿಮೆಗೆ ಅರ್ಜಿ ಹಾಕಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್... ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ