NEWSನಮ್ಮರಾಜ್ಯ

KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು

ವಾಹನವು ಘಟಕದಿಂದ ಹೋಗುವ ಮತ್ತು ಒಳ ಬರುವವರೆಗೆ ಒಟ್ಟು ಎಷ್ಟು ಸಮಯ ಆಗಿದೆ ಎಂಬುದರ ದೃಢೀಕೃತ ದಾಖಲೆ ಕೊಡಿ ಎಂದು ಅರಸೀಕೆರೆ ಘಟಕದ ಚಾಲನಾ ಸಿಬ್ಬಂದಿಗಳು ಕೇಳಿದ್ದಾರೆ. ಆದರೆ, ಚಿಕ್ಕಮಂಗಳೂರು ವಿಭಾಗದ ಸಂಚಲನ ಶಾಖೆಯವರು ಈ ದೃಢೀಕೃತ ದಾಖಲೆ ನೀಡಲು ನಿರಾಕರಿಸಿದ್ದಾರೆ. ಈ ಸಂಬಂಧ ನೌಕರರು ದೂರು ನೀಡಿದ್ದಕ್ಕೆ ಎಂಡಿಗೆ ಕಾರಣ ಕೇಳಿ ಕಾರ್ಮಿಕ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹುತೇಕ ಎಲ್ಲ ಡಿಪೋಗಳಲ್ಲೂ ಪ್ರತಿ ಫಾರಂ ಫೋರ್‌ನಲ್ಲಿ 30 ಗಂಟೆಯಿಂದ 36 ಗಂಟೆಯವರೆಗೆ ಎರಡು ದಿನಗಳಿಗೆ ದುಡಿಸಿಕೊಳ್ಳುತ್ತಿದ್ದು ಕೇವಲ 2 ರಿಂದ 3 ಗಂಟೆಗಳಷ್ಟೇ ಒಟಿ ನೀಡಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ಕಾರ್ಮಿಕ ಇಲಾಖೆಯ ಗಮನ ಸೆಳೆದು ನಮಗೆ ಆಗುತ್ತಿರುವ ಅನ್ಯಾಯತಪ್ಪಿಸಿ ನ್ಯಾಯಕೊಡಿಸಿ ಎಂದು ಅರಸೀಕೆರೆ ಘಟಕದ ಚಾಲನಾ ಸಿಬ್ಬಂದಿ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದಾರೆ.

ಸಂಸ್ಥೆಯ ಸಂಚಾರ ಶಾಖೆಯಲ್ಲಿ ಪದೇಪದೇ ಫಾರಂ- 4 ಬದಲಾಯಿಸುವುದು ಆ ಬಳಿಕ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಳ್ಳುವುದು ಆದರೆ, ನಮಗೆ ಒಟಿ ಮಾತ್ರ 2-3ಗಂಟೆ ಕೊಟ್ಟು ಸುಮ್ಮನಾಗುವುದು ಇದರಿಂದ ನಮಗೆ ಡ್ಯೂಟಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಘಟಕದ ಚಾಲನಾ ಸಿಬ್ಬಂದಿಗಳೆಲ್ಲ ಒಗ್ಗಟ್ಟಾಗಿ ಹೋಗಿ ದೂರ ಸಲ್ಲಿಸಿದ್ದು, ವಿಚಾರಣೆ ಪ್ರಕ್ರಿಯೆ ಆರಂಭವಾಗಿದೆ.

ಹೌದು! ವಾಹನವು ಘಟಕದಿಂದ ಹೋಗುವ ಮತ್ತು ಒಳ ಬರುವವರೆಗೆ ಒಟ್ಟು ಎಷ್ಟು ಸಮಯ ಆಗಿದೆ ಎಂಬುದರ ದೃಢೀಕೃತ ದಾಖಲೆ ಕೊಡಿ ಎಂದು ಅರಸೀಕೆರೆ ಘಟಕದ ಚಾಲನಾ ಸಿಬ್ಬಂದಿಗಳು ಕೇಳಿದ್ದಾರೆ. ಆದರೆ, ಚಿಕ್ಕಮಂಗಳೂರು ವಿಭಾಗದ ಸಂಚಲನ ಶಾಖೆಯವರು ಈ ದೃಢೀಕೃತ ದಾಖಲೆ ನೀಡಲು ನಿರಾಕರಿಸಿದ್ದಾರೆ.

ಇದಕ್ಕೆ ಮುಖ್ಯ ಕಾರಣವೂ ಇದೆ. ಅದೇನೆಂದರೆ ಪ್ರತಿ ಫಾರಂ ಫೋರ್‌ನಲ್ಲಿ 30 ಗಂಟೆಯಿಂದ 36 ಗಂಟೆಯವರೆಗೆ ಎರಡು ದಿನಗಳಿಗೆ ದುಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೇವಲ 2- ಗಂಟೆಗಳ ಒಟಿ ನೀಡಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಆ ಬಗ್ಗೆ ಕಾರ್ಮಿಕ ಇಲಾಖೆಯ ಗಮನ ಸೆಳೆದಿದ್ದು ನೌಕರರು ನ್ಯಾಯಕೇಳುತ್ತಿದ್ದಾರೆ.

ಇನ್ನು ಕಾರ್ಮಿಕ ಇಲಾಖೆಯ ಚಿಕ್ಕಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಶಾಖೆಯ ಸಂಚಲನಾಧಿಕಾರಿಗಳಿಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದ್ದು ಅದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ನೇರವಾಗಿ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ.

ಇದರ ಪರಿಣಾಮ ಏನಾದರೂ ಆಗಲಿ. ಆದರೆ, ಅರಸೀಕೆರೆ ಘಟಕದ ಚಾಲನಾ ಸಿಬ್ಬಂದಿಗಳ ಧೈರ್ಯ ಒಗ್ಗಟ್ಟು ಹಾಗೂ ಛಲವನ್ನು ಕೆಎಸ್ಆರ್ಟಿಸಿಯ ಎಲ್ಲ ಸಿಬ್ಬಂದಿಗಳು ಮೆಚ್ಚಲೇಬೇಕು. ಕೆಲವು ಘಟಕಗಳಲ್ಲಿ ನಾವು ಗಮನಿಸಿರುವಂತೆ ಘಟಕ ವ್ಯವಸ್ಥಾಪಕರು ಅಥವಾ ಸಂಸ್ಥೆಯ ವಿರುದ್ಧ ಯಾವುದೇ ರೀತಿಯ ಪತ್ರ ಬರೆದರೆ ಸಹಿ ಹಾಕಲು ಹೆದರಿಕೊಳ್ಳುವಂತಹ ಚಾಲನಾ ಸಿಬ್ಬಂದಿಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರನ್ನು ಬದಲಾಯಿಸಲು ನಾವು ಬಹಳ ಶ್ರಮಪಡುತ್ತಿದ್ದೇವೆ.

ಅದರ ಪ್ರತಿಫಲ ಹೀಗೆ ಒಂದೊಂದಾಗೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಚಾಲನಾ ಸಿಬ್ಬಂದಿಗಳಿಗೆ ಇಡೀ ಸಾರಿಗೆಯ ನಾಲ್ಕೂ ನಿಗಮಗಳಿಂದ ಆಗುತ್ತಿರುವ ಅನ್ಯಾಯಕ್ಕೆ ಎಲ್ಲ ಸಿಬ್ಬಂದಿಗಳು ಒಗ್ಗಟ್ಟಾಗಿ ನಿಂತುಕೊಳ್ಳುವ ಕಾಲ ದೂರವಿಲ್ಲ ಎಂದೇ ಹೇಳಬಹುದು.

ಇನ್ನು ಇತ್ತೀಚಿಗೆ ಕೆಎಸ್ಆರ್ಟಿಸಿ ಎಲ್ಲ ಘಟಕಗಳಲ್ಲಿ ಅಧಿಕಾರಿಗಳ ಹಿಂದೆ ಮುಂದೆ ಓಡಾಡಿಕೊಂಡು ತಮ್ಮ ವೈಯಕ್ತಿಕ ರಜೆ ಅಥವಾ ಇತರ ಕೆಲಸಗಳನ್ನು ಮಾಡಿಸಿಕೊಂಡು ಬೇರೆ ಸಿಬ್ಬಂದಿಗಳ ವಿರುದ್ಧ ಇಲ್ಲಸಲ್ಲಸ ಆರೋಪ ಮಾಡುವ ಸಿಬ್ಬಂದಿಗಳೇನು ಕಡಿಮೆ ಇಲ್ಲ. ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಅವರ ಚಮಚಗಳು ಅಥವಾ ಬಕೆಟ್‌ಗಳು ಎಂದು ಹೇಳಬಹುದು.

ಅರಸೀಕೆರೆ ಘಟಕದಲ್ಲಿ ಈ ರೀತಿ ಹೋರಾಟ ಮಾಡಿದ ಫಲವಾಗಿ ಈಗ ಯಾವುದೇ ಫಾರಂ-4ಗಳು ಪದೇಪದೇ ಬದಲಾಗುತ್ತಿಲ್ಲ. ಅಲ್ಲದೆ ಈ ಸಮಸ್ಯೆ ಬಗೆಹರಿಸುವವರೆಗೆ ಸುಮಾರು ಒಂದೂವರೆ ವರ್ಷಗಳಿಂದ ಡ್ಯೂಟಿರೋಟಾ ಕೌನ್ಸಿಲಿಂಗ್ ಕೂಡ ನಡೆದಿಲ್ಲ.

ಇನ್ನು ಈ ಪ್ರಕರಣದಿಂದ ಚಿಕ್ಕಮಂಗಳೂರು ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಯಾವುದೇ ಒಬ್ಬ ಒಬ್ಬರು ಚಾಲಕರು ಅಥವಾ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಹಲವಾರು ವಾಮ ಮಾರ್ಗಗಳನ್ನು ಅನುಸರಿಸಿ ಕೆಲವು ಚಾಲಕ -ನಿರ್ವಾಹಕರ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡಿದರು ಆದರೂ ಅವರ ಒಗ್ಗಟ್ಟನ್ನು ಒಡೆಯಲು ಸಾಧ್ಯವಾಗಿಲ್ಲ.

ಅರಸಿಕೆರೆ ಘಟಕದ ಚಾಲನಾ ಸಿಬ್ಬಂದಿಗಳಿಗೆ ನಮ್ಮ ನಿಮ್ಮೆಲ್ಲರ ಒಂದು ಮೆಚ್ಚುಗೆ ಇರಲಿ. ಅದೇ ರೀತಿ ಪ್ರತಿ ಘಟಕದಲ್ಲೂ ಕಾರ್ಮಿಕ ಇಲಾಖೆಗೆ ದೂರು ನೀಡುವ ಸಿಬ್ಬಂದಿಗಳು ಹೆಚ್ಚಾಗಿ ಮುಂದೆ ಬರಲಿ, ಅವರಿಗೆ ಒಬ್ಬರಿಗೊಬ್ಬ ವೈಯಕ್ತಿಕವಾಗಿ ಹಾಗೂ ಕೆಲವು ಕಾರ್ಮಿಕ ಸಂಘಟನೆಗಳ ಬೆಂಬಲ ದೊರೆಯುವಂತೆ ನಾವು ಮಾಡುತ್ತೇವೆ.

Deva
the authorDeva

Leave a Reply

error: Content is protected !!
Latest news
BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ... KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು ಅರ್ಹ ದಲಿತರು, ಹಿಂದುಳಿದವರಿಗೆ ಯೋಜನೆ ಸೌಲಭ್ಯ ತಲುಪಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಅನುರಾಧ ತಾಕೀತು ಮಾವು ಬೆಳೆ ಹೆಕ್ಟೇರಿಗೆ 80 ಸಾವಿರ ರೂ. ಸಿಗಲಿದ್ದು ರೈತರು ಬೆಳೆ ವಿಮೆಗೆ ಅರ್ಜಿ ಹಾಕಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್... ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ