ಬೀಜಿಂಗ್ ಗಗನಚುಂಬಿ ಕಟ್ಟಡಕ್ಕೆ ಅಪ್ಪಳಿಸಿದ ಲಘು ವಿಮಾನ: ತುಂಡುಗಳಾಗಿ ಬಿದ್ದ ವಿಮಾನ- ಭೀಕರ ದುರಂತದ ವಿಡಿಯೋ ವೈರಲ್
ಈ ಭೀಕರ ಅಪಘಾತದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ವಿಮಾನವು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಹಠಾತ್ತನೆ ನಿಯಂತ್ರಣ ಕಳೆದುಕೊಂಡು ಬೃಹತ್ ಕಟ್ಟಡದ ಕಡೆಗೆ ನುಗ್ಗುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಇಂಟರ್ನೆಟ್‌ನಲ್ಲಿ ಈ ವಿಡಿಯೋ ಸದ್ಯ ಭಾರೀ ಆತಂಕ ಮೂಡಿಸುತ್ತಿದೆ.

ಬೀಜಿಂಗ್: ಚೀನಾ ರಾಜಧಾನಿಯಲ್ಲಿ ಭೀಕರ ವಿಮಾನ ದುರಂತವೊಂದು ಸಂಭವಿಸಿದೆ. ದೇಶೀಯವಾಗಿ ತಯಾರಿಸಲಾದ ‘ಬಿ 12 ಪಿಪಿ’ (B-12PP) ಮಾದರಿಯ ಸಣ್ಣ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಬೀಜಿಂಗ್‌ನ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡವಾದ ‘ಸಿಟೆಕ್ ಟವರ್’ (CITIC Tower)ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿಮಾನವು ಸಂಪೂರ್ಣವಾಗಿ ಛಿದ್ರಗೊಂಡು ನೆಲಕಚ್ಚಿದೆ.
ಈ ಭೀಕರ ಅಪಘಾತದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ವಿಮಾನವು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಹಠಾತ್ತನೆ ನಿಯಂತ್ರಣ ಕಳೆದುಕೊಂಡು ಬೃಹತ್ ಕಟ್ಟಡದ ಕಡೆಗೆ ನುಗ್ಗುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಇಂಟರ್ನೆಟ್‌ನಲ್ಲಿ ಈ ವಿಡಿಯೋ ಸದ್ಯ ಭಾರೀ ಆತಂಕ ಮೂಡಿಸುತ್ತಿದೆ.
ವಿಮಾನ ಡಿಕ್ಕಿಯಾಗಿರುವ ಸಿಟೆಕ್ ಟವರ್ ಚೀನಾದ ಅತ್ಯಂತ ಪ್ರಸಿದ್ಧ ಮತ್ತು ಹೆಮ್ಮೆಯ ಸಂಕೇತವಾಗಿದೆ. ಇದು 1,700 ಅಡಿ ಎತ್ತರದ ಸುಮಾರು 109 ಮಹಡಿಗಳನ್ನು ಹೊಂದಿರುವ ಬೃಹತ್ ಗಗನಚುಂಬಿ ಕಟ್ಟಡವಾಗಿದ್ದು, ನಿರಂತರವಾಗಿ ಜನದಟ್ಟಣೆಯಿಂದ ಕೂಡಿರುತ್ತದೆ. ಇಂತಹ ದೈತ್ಯ ಕಟ್ಟಡಕ್ಕೆ ಲಘು ವಿಮಾನವು ಅಪ್ಪಳಿಸಿರುವುದು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.
ಇನ್ನು ಕಟ್ಟಡದ ಎರಡು ಕಿಟಕಿಗೆ ಹಾನಿಯಾಗಿದೆ. ಅಲ್ಲದೇ ಪತನಗೊಂಡ ವಿಮಾನದ ತುಂಡುಗಳು ನೆಲಕ್ಕೆ ಬಿದ್ದ ಪರಿಣಾಮ ಕಾರೊಂದರ ಗಾಜು ಒಡೆದಿರುವುದು ಕಂಡುಬಂದಿದೆ. ವಿಮಾನ ಡಿಕ್ಕಿಯಾದ `ಸಿಟಿಕ್ ಟವರ್’ ಚಾವೊಯಾಂಗ್ (Chaoyang) ಜಿಲ್ಲೆಯ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿದೆ. ಶಾಂಘೈ ಟವರ್ ಮತ್ತು ಪಿಂಗ್ ಆನ್ ಫೈನಾನ್ಸ್ ಸೆಂಟರ್ ನಂತರ ಇದು ಚೀನಾದಲ್ಲೇ ಮೂರನೇ ಅತಿ ಎತ್ತರದ ಗೋಪುರವಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ಕಟ್ಟಡದ ಮೇಲ್ಭಾಗಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದೊಡ್ಡ ಮಟ್ಟದ ಶಬ್ದ ಕೇಳಿಬಂದಿದೆ. ಡಿಕ್ಕಿಯ ತೀವ್ರತೆಗೆ ವಿಮಾನದ ಭಾಗಗಳು ಮತ್ತು ಕಟ್ಟಡದ ಗ್ಲಾಸ್ ಸೇರಿದಂತೆ ಇತರೆ ಅವಶೇಷಗಳು ನೆಲಕ್ಕೆ ಉದುರಿಬಿದ್ದಿವೆ. ವಿಮಾನವು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡು ಕಪ್ಪಳಿಸಿರುವ ಕಾರಣ ಭಾರಿ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ದುರಂತ ಸಂಭವಿಸಿದ ತಕ್ಷಣವೇ ಸ್ಥಳೀಯ ಆಡಳಿತ ಮತ್ತು ರಕ್ಷಣಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಅಗ್ನಿಶಾಮಕ ದಳ ಮತ್ತು ಆಂಬುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಟ್ಟಡದ ಒಳಗಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ದುರಂತದಲ್ಲಿ ಆಗಿರುವ ಸಾವು-ನೋವುಗಳ ಬಗ್ಗೆ ಚೀನಾ ಸರ್ಕಾರ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಿಮಾನದಲ್ಲಿದ್ದ ಪೈಲಟ್ ಮತ್ತು ಪ್ರಯಾಣಿಕರ ಸ್ಥಿತಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯ ಈ ಅಪಘಾತಕ್ಕೆ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ.
A Sunward SA 60L Aurora light aircraft (B-12PP) crashed in Beijing. Footage from the scene indicate the aircraft had hit the China Zun CITIC Tower, a 109-story, 528-metre (1,732 ft) building.pic.twitter.com/hOsx8RchyQ
— Aviation Safety Network (ASN) (@AviationSafety) June 26, 2026







