NEWSಬೆಂಗಳೂರು

BMTC: ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಾಹಕರು ಡ್ಯೂಟಿಗೆ ಹಾಜರಾದರೂ ರಜೆ ಪಡೆಯುವುದ ತಪ್ಪಿಸಿ- ಎಂಡಿಗೆ ಮನವಿ ಮಾಡಿದ ಶ್ರೀನಿವಾಸ್‌

ವಾಹನದ ಕೊರತೆ, ಚಾಲಕರ ಕೊರತೆ, ಅನುಸೂಚಿಗಳ ರದ್ದತಿಯಾದಲ್ಲಿ ನಿರ್ವಾಹಕರಿಗೆ ಹಾಜರಾತಿ ನೀಡುವಂತೆಯೂ ಹಾಗೂ ಸಾಮಾನ್ಯ ಪಾಳಿಯಲ್ಲಿ ಮಾರ್ಗ ಮಧ್ಯೆ ವಾಹನ ಕೆಟ್ಟು ನಿಂತಾಗ, ತಡವಾಗಿ ಆಚರಣೆಯಾದಾಗ, ಚಾಲಕರ ಬದಲಾವಣೆ, ನಿರ್ವಾಹಕರ ಬದಲಾವಣೆ, ಇತ್ಯಾದಿಗಳಿಂದ ಅನುಸೂಚಿ ಪೂರ್ಣಗೊಳಿಸದ ನಿರ್ವಾಹಕರುಗಳಿಗೆ ಅನುಸೂಚಿಗೆ ಅನಿಗದಿಪಡಿಸಿರುವ ಪೂರ್ಣ ಹೆಚ್ಚುವರಿ ಭತ್ಯಯನ್ನು ನೀಡಬೇಕು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿಋುವ ಖಾಸಗಿ ವಿದ್ಯುತ್‌ ಚಾಲಿತ ವಾಹನಗಳ ಆಚರಣೆಯ ಘಟಕಗಳಲ್ಲಿ ಸಂಸ್ಥೆಯ ನಿರ್ವಾಹಕರಿಗೆ ಘಟಕದಲ್ಲಿ ದಿನ ನಿತ್ಯ ವಾಹನಗಳು ತಡವಾಗಿ ಆಚರಣೆಯಾದಲ್ಲಿ, ವಾಹನದ ಕೊರತೆ, ಚಾಲಕರ ಕೊರತೆ ಮಾರ್ಗ ಮಧ್ಯೆ ವಾಹನ ಕೆಟ್ಟು ನಿಂತಲ್ಲಿ ನಿರ್ವಾಹಕರಿಗೆ ಹೆಚ್ಚುವರಿ ಭತ್ಯೆ (ಒಟಿ) ನೀಡದಿರುವುದು ಹಾಗೂ ವಾಹನದ ಕೊರತೆ/ ಚಾಲಕರ ಕೊರತೆಯಿಂದ ಅನುಸೂಚಿಗಳು ರದ್ದಾದಲ್ಲಿ ನಿರ್ವಾಹಕರಿಂದ ರಜೆ ಅರ್ಜಿ ಬರೆಸಿಕೊಳ್ಳುತ್ತಿರುವುದು ಏಕೆ?

ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಘುನಂದನ್‌ ಮೂರ್ತಿ ಅವರು ಆದೇಶ ಹೊರಡಿಸಿದ ಸಂಸ್ಥೆಯ ನೌಕರರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸಬೇಕು ಎಂದು ನೌಕರರ ಪರವಾಗಿ ಎನ್‌.ಶ್ರೀನಿವಾಸ ಎಂಡಿ ಅವರಿಗೆ ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ, ಸಂಸ್ಥೆಯು ತನ್ನ ಕಾರ್ಯಾಚರಣೆಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಖಾಸಗಿ ವಿದ್ಯುತ್‌ ಚಾಲಿತ ವಾಹನಗಳ ಆಚರಣೆಗೊಳಿಸುತ್ತಿವೆ. ಆದರೆ, ವಿದ್ಯುತ್‌ ಚಾಲಿತ ವಾಹನಗಳ ಕಾರ್ಯಾಚರಣೆಯ ವ್ಯಾಪ್ತಿಯ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರುಗಳಿಗೆ ಅನ್ಯಾಯ ಮಾಡಲಾಗುತ್ತಿದೆ.

ನಿರ್ವಾಹಕರು ಘಟಕಕ್ಕೆ ಕರ್ತವ್ಯಕ್ಕೆ  ಹಾಜರಾದರೂ ವೇತನ ಕೊಡಲ್ಲ: ಘಟಕಗಳಲ್ಲಿ ಖಾಸಗಿ ವಿದ್ಯುತ್‌ ಚಾಲಿತ ವಾಹನಗಳ ಕೊರತೆ, ಚಾಲಕರ ಕೊರತೆ ಆದಲ್ಲಿ ನಿರ್ವಾಹಕರು ಘಟಕಕ್ಕೆ ಕರ್ತವ್ಯಕ್ಕೆ ಹಾಜರಾಗಿ, ಘಟಕದಲ್ಲಿ 7-8 ಗಂಟೆ ಉಪಸ್ಥಿತರಿದ್ದರೂ ಸಹ ನಿರ್ವಾಹಕರಿಂದ ರಜೆ ಅರ್ಜಿ ಪಡೆದುಕೊಳ್ಳಲಾಗುತ್ತಿದೆ. ಅವರು ಡ್ಯೂಟಿಗೆ ಬಂದಮೇಲೆ ಹಾಜರಿ ಹಾಕಿ ವೇತನ ಕೊಡಬೇಕು. ಇನ್ನು ದಂಡ ವಿಧಿಸಿದ ಹಣ ಎಲ್ಲಿ ಹೋಗುತ್ತಿದೆ?

ಒಟಿ ವಂಚನೆ: ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರು ತಮ್ಮ ಅನುಸೂಚಿಗಳ ಆಚರಣೆಯ ಸಮಯಕ್ಕೆ ಘಟಕಕ್ಕೆ ಹಾಜರಾಗಿದ್ದರೂ ಸಹ, ಚಾಲಕರ ಕೊರತೆ, ವಾಹನಗಳ ಕೊರತೆ, ವಾಹನಗಳ ರಿಪೇರಿ, ಮಾರ್ಗ ಮಧ್ಯೆ ವಾಹನ ಕೆಟ್ಟು ನಿಲ್ಲುವುದು, ಅಪಘಾತ, ಅವಘಡ ಸಂಭವಿಸಿದಲ್ಲಿ ನಿರ್ವಾಹಕರಿಗೆ ಅನುಸೂಚಿಗೆ ನಿಗದಿಪಡಿಸಿರುವ ಹೆಚ್ಚುವರಿ ಗಂಟೆಗಳ ಭತ್ಯೆ ನೀಡದೆ ವಂಚಿಸಲಾಗುತ್ತಿದೆ.

ಒಟಿ ನೀಡಬಾರದು ಎಂದು ನಿಯಮವಿಲ್ಲ: ಈ ಬಗ್ಗೆ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಚಾಲಕರ ಕೊರತೆ, ನಿರ್ವಾಹಕರ ಕೊರತೆ, ವಾಹನ ರಿಪೇರಿ, ಇತ್ಯಾದಿಗಳಿಂದ ಅನುಸೂಚಿಗಳು ರದ್ದಾದಲ್ಲಿ ನಿರ್ವಾಹಕರಿಗೆ ಹೆಚ್ಚುವರಿ ಭತ್ಯೆ ಕೊಡಬಾರದೆಂದು ಸುತ್ತೋಲೆ, ನಿಯಮಗಳು ಅವರ ಕಚೇರಿಯಲ್ಲಿ ಲಭ್ಯವಿಲ್ಲವೆಂದು ತಿಳಿಸಿದ್ದಾರೆ.

ಆದುದರಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ತಾವು ಮಧ್ಯೆ ಪ್ರವೇಶಿಸಿ ಖಾಸಗಿ ಇ.ವಿ. ವಾಹನಗಳ ಆಚರಣೆಯ ಘಟಕಗಳಲ್ಲಿ ನಿರ್ವಾಹಕರಿಗೆ ನಿರಂತರವಾಗಿ ಅನ್ಯಾಯ/ ಶೋಷಣೆಗೆ ಒಳಗಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

ಇನ್ನು ವಾಹನದ ಕೊರತೆ, ಚಾಲಕರ ಕೊರತೆ, ಅನುಸೂಚಿಗಳ ರದ್ದತಿಯಾದಲ್ಲಿ ನಿರ್ವಾಹಕರಿಗೆ ಹಾಜರಾತಿ ನೀಡುವಂತೆಯೂ ಹಾಗೂ ಸಾಮಾನ್ಯ ಪಾಳಿಯಲ್ಲಿ ಮಾರ್ಗ ಮಧ್ಯೆ ವಾಹನ ಕೆಟ್ಟು ನಿಂತಾಗ, ತಡವಾಗಿ ಆಚರಣೆಯಾದಾಗ, ಚಾಲಕರ ಬದಲಾವಣೆ, ನಿರ್ವಾಹಕರ ಬದಲಾವಣೆ, ಇತ್ಯಾದಿಗಳಿಂದ ಅನುಸೂಚಿ ಪೂರ್ಣಗೊಳಿಸದ ನಿರ್ವಾಹಕರುಗಳಿಗೆ ಅನುಸೂಚಿಗೆ ಅನಿಗದಿಪಡಿಸಿರುವ ಪೂರ್ಣ ಹೆಚ್ಚುವರಿ ಭತ್ಯಯನ್ನು ನೀಡುವಂತೆ ಶ್ರೀನಿವಾಸ್‌ ಮನವಿ ಮಾಡಿದ್ದಾರೆ.

ಇ.ವಿ. ವಾಹನಗಳ ಕೊರತೆ, ಚಾಲಕರ ಕೊರತೆ, ವಾಹಾನಗಳು ಮಾರ್ಗ ಮಧ್ಯೆ ಕೆಟ್ಟು ನಿಂತಾಗ ಅನುಸೂಚಿಗಳು ರದ್ದಾದಾಗ ಸಂಬಂಧಪಟ್ಟ ಇ.ವಿ. ಕಾರ್ಯಾಚರಣೆ ಹೊಣೆ ಹೊತ್ತಿರುವ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತಿದೆ. ದಂಡ ವಿಧಿಸಿಯೂ ನಿರ್ವಾಹಕರಿಗೆ ಅನ್ಯಾಯ ಮಾಡುತ್ತಿರುವುದು ಶೋಷಣೆಯ ಪರಮಾವಧಿ. ಹೀಗಾಗಿ ತಾವು ದಯಮಾಡಿ, ಈ ಬಗ್ಗೆ ಕೂಲಂಕುಶ ತನಿಖೆಗೆ ಒಳಪಡಿಸಿ ಶೋಷಣೆಗೆ ಒಳಗಾಗಿರುವ ಇ.ವಿ. ಘಟಕಗಳ ನಿರ್ವಾಹಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮನ್ನು ವಿನಮ್ರತೆಯಿಂದ ಕೋರುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.

 

Deva
the authorDeva

Leave a Reply

error: Content is protected !!
Latest news
BMTC: ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಾಹಕರು ಡ್ಯೂಟಿಗೆ ಹಾಜರಾದರೂ ರಜೆ ಪಡೆಯುವುದ ತಪ್ಪಿಸಿ- ಎಂಡಿಗೆ ಮನವಿ ಮಾಡಿದ ಶ್ರೀನ... ನಮ್ಮ ಪತ್ರಿಕೋದ್ಯಮದ ಮೂಲ ತತ್ವವೇ 'ಮೂಲಗಳ ಗೌಪ್ಯತೆ ಕಾಯ್ದುಕೊಳ್ಳುವುದು' ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಸರತ್ತು: 48 ಗಂಟೆಯೊಳಗೆ ಪ್ರಧಾನಿ ಮೋದಿ ಪಡೆಯಲ್ಲಿ ಆಗುತ್ತಾ ಭಾರಿ ಬದಲಾವಣೆ? ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿ- 6 ತಿಂಗಳ ಡೆಡ್‌ಲೈನ್ ಇಟ್ಟ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ವಿವಾದ: ಡಿಕೆಶಿ-ಎಚ್‌ಡಿಕೆ ನಡುವೆ ಮುಂದುವರಿದ ಸಮರ ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 588ಕ್ಕೆ ಏರಿಕೆ, 126 ವರ್ಷಗಳಲ್ಲೇ ಅತ್ಯಂತ ಭೀಕರ ಸಾವು ನೋವು ​ಮೆಟ್ರೋ ಪಿಲ್ಲರ್‌ಗೆ ಬೆಳಕಿನ ವ್ಯವಸ್ಥೆ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಗುತ್ತಿಗೆ ಕಾರ್ಮಿಕ ಮೃತ ಬೀಜಿಂಗ್ ಗಗನಚುಂಬಿ ಕಟ್ಟಡಕ್ಕೆ ಅಪ್ಪಳಿಸಿದ ಲಘು ವಿಮಾನ: ತುಂಡುಗಳಾಗಿ ಬಿದ್ದ ವಿಮಾನ- ಭೀಕರ ದುರಂತದ ವಿಡಿಯೋ ವೈರಲ್ ಪ್ರಾಮಾಣಿಕತೆಗೆ ಅಂಬಾಸೆಡರ್‌ ಈ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ: ರಾಜಾಜಿನಗರ ಶಾಸಕ ಸುರೇಶ್‌ ಕುಮಾರ್‌ ಶ್ಲಾಘನೆ KSRTC ಬಸ್‌ ಲಾರಿಗೆ ಡಿಕ್ಕಿ: ಸಂಸ್ಥೆಯ ಚಾಲಕ ಸಾವು, ಕಂಡಕ್ಟರ್‌ ಕಾಲು ಮುರಿತ, 10 ಮಂದಿ ಪ್ರಯಾಣಿಕರಿಗೆ ಗಾಯ: 18 ಗಂಟೆ...