NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಿಸಿ ಸರ್ಕಾರದ ಆದೇಶ

ಸಾರಿಗೆ ನೌಕರರಿಗೆ ಕೊಟ್ಟ ಭರವಸೆಯನ್ನೂ ಈಡೇರಿಸಲಿಲ್ಲ, ಕನಿಷ್ಠಪಕ್ಷ ಹಿಂದೆ ಆಗಿದ್ದ ಶೇ.15ರಷ್ಟು ವೇತನ ಹೆಚ್ಚಳಗಿಂತ ಒಂದೆರಡು ಪರ್ಸೆಂಟ್‌ ಹೆಚ್ಚಿಗೇನೂ ಮಾಡದೆ ಶೇ.2.5ರಷ್ಟು ಕಡಿಮೆ ವೇತನ ನೀಡಿರುವ ಸಾರಿಗೆ ನೌಕರರ ಪರ ಎನ್ನುವ ಸರ್ಕಾರ. ಈ ಬೆಲೆ ಏರಿಕೆ ನಡುವೆ ನೌಕರರ ಜೀವನ ದುಸ್ತರ ಮಾಡಿದ ನುಡಿದಂತೆ ನಡೆಯುತ್ತೇವೆ ಎಂದು ಕೊಚ್ಚಿಕೊಳ್ಳುವ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಗೆ ಎನ್ನಲೇ ಬೇಕು ಶಹಭಾಸ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 1.4.2025ರಿಂದ ಜಾರಿಗೆ ಬರುವಂತೆ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದಿನಿಂದಲೂ ನಾಲ್ಕೂ ನಿಗಮಗಳ ನೌಕರರ ವೇತನ ನಿಯಮಿತವಾಗಿ ಪರಿಷ್ಕರಣೆಯಾಗುತ್ತಿತ್ತು. ಆದರೆ, 2020ರಲ್ಲಿ ಬಂದ ಕೊರೊನಾದಿಂದಾಗಿ ಅಂದಿನ ಬಿಜೆಪಿ ಸರ್ಕಾರ 2020ರ ಜನವರಿ 1ರಿಂದ ಮಾಡಬೇಕಿದ್ದ ನೌಕರರ ವೇತನ ಪರಿಷ್ಕರಣೆಗೆಯನ್ನು 2023ರ ಮಾರ್ಚ್‌ನಲ್ಲಿ ಅದೂ ಕೂಡ 2019ರ ಡಿಸೆಂಬರ್‌ 31ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ.15ರಷ್ಟು ಹೆಚ್ಚಿಸಿ 2023ರ ಮಾರ್ಚ್‌ ವೇತನದಿಂದ ಕೊಟ್ಟಿತ್ತು.

ಬಳಿಕ ಅದರ ಹಿಂಬಾಕಿಯನ್ನು ಯಾವ ರೀತಿ ಕೊಡಬೇಕು ಎಂಬ ಬಗ್ಗೆ ಏಕಸದಸ್ಯ ಸಮಿತಿ ಜತೆ ಸಂಘಟನೆಗಳು ಚರ್ಚಿಸಿ ತೀರ್ಮಾನಿಸಿದಂತೆ ಹಿಂಬಾಕಿ ಬಿಡುಗೆಡೆ ಮಾಡುವುದಾಗಿ ಹೇಳಿತ್ತು. ಆದರೆ, ಅಷ್ಟರಲ್ಲಿ ಚುನಾವಣೆ ನಡೆದು ಸರ್ಕಾರ ಬದಲಾದ ಪರಿಣಾಮ ಈವರೆಗೂ ಪ್ರಸ್ತುತ ಇರುವ ಸರ್ಕಾರ  ಎಳೆದುಕೊಂಡು ಬಂದು ಏಪ್ರಿಲ್‌ 2026ರಲ್ಲಿ 26 ತಿಂಗಳ ವೇತನ ಹಿಂಬಾಕಿ ಕೊಡುವುದಾಗಿ ಘೋಷಣೆ ಮಾಡಿ ಮೊದಲ ಹಂತವಾಗಿ 450 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತ್ತು.

ಆ ಬಿಡುಗಡೆ ಮಾಡಿದ 450 ಕೋಟಿ ರೂಪಾಯಿಯಲ್ಲಿ ಕೆಎಸ್‌ಆರ್‌ಟಿಸಿ ಈಗಾಗಲೇ ಅಂದರೆ ನಿನ್ನೆ ಮೇ 11ರಂದು 11 ತಿಂಗಳ ಹಿಂಬಾಕಿಯನ್ನು ನೌಕರರ ಬ್ಯಾಂಕ್‌ ಖಾತೆಗೆ ಜಮಾ ಮಾಡಿದೆ. ಅದರಂತೆ ಇನ್ನು ಉಳಿದ ಮೂರು ಸಾರಿಗೆ ನಿಗಮಗಳು ನೌಕರರ ಬ್ಯಾಂಕ್‌ ಖಾತೆಗೆ ಹಿಂಬಾಕಿ ಹಣ ಜಮಾ ಮಾಡುತ್ತಿದ್ದು ಮುಂದಿನ ಶುಕ್ರವಾರದೊಳಗೆ ಎಲ್ಲ ನೌಕರರಿಗೆ ಮೊದಲ ಹಂತದ ಹಿಂಬಾಕಿ ಕೈ ಸೇರಲಿದೆ.

ಈ ನಡುವೆ ಇಂದು ಸರ್ಕಾರ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದ್ದು, ಅದು 2024ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕಿತ್ತು. ಆದರೆ, ಆ ರೀತಿ ಮಾಡದೆ, 1.4.2025ರಿಂದ ಜಾರಿಗೆ ಬರುವಂತೆ ಮಾಡಿರುವುದರ ಜತೆಗೆ ಕಳೆದ ವೇತನ ಪರಿಷ್ಕರಣೆಗಿಂತ ಶೇ.2.5ರಷ್ಟು ಕಡಿಮೆ ಮಾಡಿದೆ. ಇದರಿಂದ ನೌಕರರು 15 ತಿಂಗಳ ಹಿಂಬಾಕಿಯನ್ನು ಕಳೆದುಕೊಳ್ಳುವುದರ ಜತೆಗೆ ಅಲ್ಪ ಹೆಚ್ಚಳದಿಂದ ಅಸಮಾಧಾನಗೊಂಡಿದ್ದಾರೆ.

ಇನ್ನು 1.4.2025ರಿಂದ ಅನ್ವಯವಾಗುಂತೆ ಈ ವೇತನ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ 2020ರ ಜನವರಿಯಿಂದ ಡಿಸೆಂಬರ್‌ 2020ರ ವರೆಗಿನ ಈ  12 ತಿಂಗಳ ಹಿಂಬಾಕಿಯನ್ನು ಕೊಡದೆ ಸರ್ಕಾರ ನೌಕರರಿಗೆ ಅನ್ಯಾಯಮಾಡಿದೆ. ಈ ಎಲ್ಲವನ್ನು ಸೇರಿಸಿದರೆ ಒಟ್ಟಾರೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರು ಆರ್ಥಿಕವಾಗಿ ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ನೌಕರರಿಗೆ ಅನ್ಯಾಯ?: ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸರಿ ಸಮಾನ ವೇತನ ಕೊಡುವುದಾಗಿ ಭರವಸೆ ನೀಡಿದೆ. ಆ ಬಳಿಕ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಇನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು ಪ್ರಣಾಳಿಕೆ ಭರವಸೆ ಈಡೇರುತ್ತದೆ ಎಂದು ಸಾರಿಗೆ ನೌಕರರು ಅಂದು ಸಂಭ್ರಮಿಸಿದ್ದರು. ಆದರೆ‌, ಈವರೆಗೂ ಕೊಟ್ಟ ಭರವಸೆ ಈಡೇರಿಸದೆ, ವೇತನ ಒಪ್ಪಂದವನ್ನು ಮಾಡದೆ ಏಕಪಕ್ಷೀಯವಾಗಿ ಇಂದು ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದೆ.

ಇದು ಸಾರಿಗೆ ನೌಕರರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.  ಇನ್ನು ಆಡಳಿತ  ಪಕ್ಷವನ್ನು ಎದುರಾಕಿಕೊಳ್ಳಲು ಆಗದೆ ಇತ್ತ ಹಿಂದಿನ ಸರ್ಕಾರ ಕೊಟ್ಟಿದ್ದ ಶೇ.15ಕ್ಕಿಂತಲೂ ಕಡಿಮೆ ಮಾಡಿರುವುದು ಭಾರಿ ನೋವು ತಂದಿದೆ ಎಂದು ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ಸಿದ್ದರಾಮಯ್ಯ ಸಿಎಂ ಆಗಿರುವ ಅವಧಿಯಲ್ಲಿ ಈ ಅರ್ಧ ಪರ್ಸೆಂಟ್‌ (12.5) ವೇತನ, ಕಾಲ್‌ ಪರ್ಸೆಂಟ್‌ , ಮುಕ್ಕಾಲು ಪರ್ಸೆಂಟ್‌  ತುಟ್ಟಿಭತ್ಯೆ ಹೆಚ್ಚಳ ಮಾಡಿಕೊಂಡು ಬರುತ್ತಿದ್ದು, ಈವರೆಗೂ ಬಿಜೆಪಿ ಸರ್ಕಾರದಂತೆ ಪೂರ್ತ ಅಂದರೆ ಶೇ.15, ಶೇ.4 ಹೀಗೆ ಕೊಟ್ಟಿರುವ ಇತಿಹಾಸವೇ ಇಲ್ಲ ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಸರ್ಕಾರ ನೌಕರರಿಗೆ ವೇತನ ಹೆಚ್ಚಳ ಹಾಗೂ ತುಟ್ಟಿ ಭತ್ಯೆ ಕೊಡುವಲ್ಲಿ ಪಕ್ವವಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಬೇಕಾದ ಸರ್ಕಾರ ಸಾರಿಗೆ ನೌಕರರು ಭಯದಿಂದ ಇದ್ದಾರೆ ಅಧಿಕಾರಿಗಳು ಹೋರಾಟಕ್ಕೆ ಇಳಿಯುವುದಿಲ್ಲ ಎಂದು ತಮಗಿಷ್ಟ ಬಂದಂತೆ ನೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವದಡಿ ನ್ಯಾಯ ಸಮ್ಮತವಲ್ಲ ಎನ್ನುವುಸು ಸ್ವತಃ ಸಿಎಂಗೂ ಗೊತ್ತಿದೆ. ಆದರೂ ಈ ರೀತಿ ತಾರತಮ್ಯ ಮಾಡುತ್ತಿರುವುದು ಒಂದು ರೀತಿ ಹಿಟ್ಲರ್‌ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇನ್ನಾದರೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಳ್ಳಬೇಕಿದೆ.

ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಿರುವ ಪಿಡಿಎಫ್‌ ಫೈಲ್‌: KSRTC Salary Agriment 05-12-2026 17.23

Megha
the authorMegha

Leave a Reply

error: Content is protected !!
Latest news
KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..? KSRTC: ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಿಸಿ ಸರ್ಕಾರದ ಆದೇಶ KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ ! KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ... KSRTC: ಬ್ರೇಕ್ ಫೇಲಾಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್‌- ತಪ್ಪಿದ ಭಾರಿ ಅನಾಹುತ ನಾಗಮಲೆ ಬಳಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ₹20 ಲಕ್ಷ ಪರಿಹಾರ KKRTC ದ್ವಂದ್ವ ನಿಲುವಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ- 25 ಸಾವಿರ ರೂ. ದಂಡ, ಅಧಿಕಾರಿಗಳಿಂದಲೇ ವಸೂಲಿಗೆ ಆದೇಶ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ ನಾಯಕ ದಳಪತಿ ವಿಜಯ್ ಅತೀ ಶೀಘ್ರದಲ್ಲೇ KSRTC ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ !