NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ !

ಇನ್ನು 1.4.2025ರಿಂದ ಅನ್ವಯವಾಗುಂತೆ ಈ ವೇತನ ಪರಿಷ್ಕರಣೆ ಮಾಡಿದ್ದು, ಈ ಪರಿಷ್ಕಣೆಯಿಂದ ನೌಕರರು 15 ತಿಂಗಳುಗಳ ವೇತನ ಹೆಚ್ಚಳವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನೌಕರರಿಗೆ ಭಾರಿ ಅನ್ಯಾಯವಾಗುತ್ತಿದೆ.

ವಿಜಯಪಥ ಸಮಗ್ರ ಸುದ್ದಿ
  • ಇಂದು ಸರ್ಕಾರ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದ್ದು, ಕಳೆದ ವೇತನ ಪರಿಷ್ಕರಣೆಗಿಂತ ಶೇ.2.5ರಷ್ಟು ಕಡಿಮೆ ಮಾಡಿದೆ. ಇನ್ನು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ ಇದ್ದು ಅದುಕೂಡ ಒಂದೆರಡು ಗಂಟೆಯಲ್ಲೇ ಹೊರಬೀಳಲಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆಯಾಗಿದ್ದು, ಶೇ.12.5 ಹೆಚ್ಚಳವಾಗಿದೆ. ಈ ಅಧಿಕೃತ ಆದೇಶ 1-2 ಗಂಟೆಯಲ್ಲೇ ಹೊರಬೀಳಲಿದೆ.

ನಾಲ್ಕೂ ನಿಗಮಗಳ ನೌಕರರ ವೇತನ ನಿಯಮಿತವಾಗಿ ಪರಿಷ್ಕರಣೆಯಾಗುತ್ತಿತ್ತು. ಆದರೆ, 2020ರಲ್ಲಿ ಬಂದ ಕೊರೊನಾದಿಂದಾಗಿ ಅಂದಿನ ಬಿಜೆಪಿ ಸರ್ಕಾರ 2020ರ ಜನವರಿ 1 ಮಾಡಬೇಕಿದ್ದ ನೌಕರರ ವೇತನ ಪರಿಷ್ಕರಣೆಗೆಯನ್ನು 2023ರ ಮಾರ್ಚ್‌ ವೇತನಕ್ಕೆ ಶೇ.15ರಷ್ಟು ವೇತನ ಸೇರಿಸಿ ಕೊಟ್ಟಿತ್ತು.

ಆದರ, ಇಂದು ಸರ್ಕಾರ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದ್ದು, ಕಳೆದ ವೇತನ ಪರಿಷ್ಕರಣೆಗಿಂತ ಶೇ.2.5ರಷ್ಟು ಕಡಿಮೆ ಮಾಡಿದೆ. ಇನ್ನು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ ಇದ್ದು ಅದುಕೂಡ ಒಂದೆರಡು ಗಂಟೆಯಲ್ಲೇ ಹೊರಬೀಳಲಿದೆ.

ಇನ್ನು 1.4.2025ರಿಂದ ಅನ್ವಯವಾಗುಂತೆ ಈ ವೇತನ ಪರಿಷ್ಕರಣೆ ಮಾಡಿದ್ದು, ಈ ಪರಿಷ್ಕಣೆಯಿಂದ ನೌಕರರು 15 ತಿಂಗಳುಗಳ ವೇತನ ಹೆಚ್ಚಳವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನೌಕರರಿಗೆ ಭಾರಿ ಅನ್ಯಾಯವಾಗುತ್ತಿದೆ.

ನೌಕರರ ಬೇಡಿಕೆ ಏನಿತ್ತು?: ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ಹೆಚ್ಚಳ, ಕನಿಷ್ಠ ವೇತನದ ಪರಿಷ್ಕರಣೆ ಮತ್ತು ಬಾಕಿ ವೇತನ (Arrears) ಪಾವತಿಗೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ ನೌಕರರು 7ನೇ ವೇತನ ಆಯೋಗದ ಮಾದರಿಯಲ್ಲಿ ಕನಿಷ್ಠ ವೇತನ ರೂ. 36,000ಕ್ಕೆ ಏರಿಕೆ ಮಾಡಲು ಒತ್ತಾಯಿಸುತ್ತಿದ್ದಾರೆ. ಇನ್ನು ಜಂಟಿ ಕ್ರಿಯಾ ಸಮಿತಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸುತ್ತಿತ್ತು.

ಆದರೆ, ಇದೆಲ್ಲವನ್ನು ಬಿಟ್ಟು ಇಂದು ಸರ್ಕಾರ ಏಕಪಕ್ಷೀಯವಾಗಿ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿದ್ದು, ಅಧಿಕೃತ ಆದೇಶವಷ್ಟೇ ಹೊರಬೀಳಬೇಕಿದೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ