KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..?
ವೇತನ ಪರಿಷ್ಕರಣೆ 2025ರ ಮಾರ್ಚ್ 31ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ.12.5ರಷ್ಟು ಸೇರಿಸಿ ಮೂಲವೇತನವನ್ನು ಪರಿಷ್ಕರಿಸಿ ಆದೇಶಿಸಲಾಗಿದ್ದು, ಈ ವೇತನ ಪರಿಷ್ಕರಣೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ., ನೌಕರರಿಗೆ 2026ರ ಜುಲೈ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಲು ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಮತ್ತು ಪೂರ್ವ ಕಿಂಕೋ ನೌಕರರ ಅಧಿಕಾರಿಗಳ ವೇತನವನ್ನು ಶೇ.12.5ರಷ್ಟು ಪರಿಷ್ಕರಣೆಗೆ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇನ್ನು ವೇತನ ಪರಿಷ್ಕರಣೆ 2025ರ ಮಾರ್ಚ್ 31ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ.12.5ರಷ್ಟು ಸೇರಿಸಿ ಮೂಲವೇತನವನ್ನು ಪರಿಷ್ಕರಿಸಿ ಆದೇಶಿಸಲಾಗಿದ್ದು, ಈ ವೇತನ ಪರಿಷ್ಕರಣೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ., ನೌಕರರಿಗೆ 2026ರ ಜುಲೈ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಸಲು ಆದೇಶ ಹೊರಡಿಸಲಾಗಿದೆ.
ಅಲ್ಲದೆ 01.04.2025 ರಿಂದ 30.06.2026ರ ಅವಧಿಯ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಬೇಖು ಹಾಗೂ ಈ ವೇತನ ಪರಿಷ್ಕರಣೆಯು 01.04.2025 ರಿಂದ 31.03.2029ರವರೆಗೆ ಅಂದರೆ, ನಾಲ್ಕು ವರ್ಷದ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಇನ್ನು KSRTC ವ್ಯವಸ್ಥಾಪಕ ನಿರ್ದೇಶಕರು ಕೋರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950ರ ಸೆಕ್ಷನ್ 34(1)ರನ್ವಯಈ ನಾಲ್ಕೂ ನಿಗಮಗಳ ಮತ್ತು ಪೂರ್ವ ಕಿಂಕೋ ನೌಕರರ /ಅಧಿಕಾರಿಗಳು 31.03.2025 ರಂದು ಪಡೆಯುತ್ತಿದ್ದ ಮೂಲವೇತನವನ್ನು ಪರಿಷ್ಕರಿಸಿ ನಿರ್ಧರಿಸಲು, ಅದರಂತೆ, ನಿರ್ಧರಿಸಿದ ಶೇಕಡವಾರು ಹೆಚ್ಚಳದೊಂದಿಗೆ ಉನ್ನತ ವೇತನ ಶ್ರೇಣಿ, ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳು ಸೇರಿದಂತೆ ನಿಗಮದಲ್ಲಿ ಪ್ರಸ್ತುತ ಇರುವ ಎಲ್ಲ ವೇತನ ಶ್ರೇಣಿಗಳನ್ನು ಅದಕ್ಕನುಗುಣವಾಗಿ ಪರಿಷ್ಕರಿಸಲು, ಈ ಪರಿಷ್ಕರಣೆಯನ್ನು01.04.2025 ರಿಂದ ಜಾರಿಗೊಳಿಸಲು ಹಾಗೂ 01.07.2026ರ ಮಾಹೆಯ ವೇತನದಲ್ಲಿ ಅನುಷ್ಠಾನಗೊಳಿಸಿ ಎಲ್ಲ ಅರ್ಹ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಲು ಆದೇಶಿಸಲಾಗಿದೆ.
ಇನ್ನು ಸಾರಿಗೆ ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದ್ದು, ಪ್ರಸ್ತುತ 7130.80 ಕೋಟಿ ರೂ. ಹೊಣೆಗಾರಿಕೆ ಪಾವತಿಸುವುದು ಬಾಕಿ ಉಳಿದಿರುವುದರಿಂದ 01.04.2025 ರಿಂದ 30.06.2026ರ ಅವಧಿಯ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲು ಹಾಗೂ ಈ ವೇತನ ಪರಿಷ್ಕರಣೆಯು 01.04.2025 ರಿಂದ 31.03.2029ರವರೆಗೆ ಅಂದರೆ, ನಾಲ್ಕು ವರ್ಷದ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ಅನುಮೋದನೆ ನೀಡುವಂತೆ ಎಂಡಿ ಕೋರಿದ್ದರು.
ವ್ಯವಸ್ಥಾಪಕ ನಿರ್ದೇಶಕರ ಈ ಪ್ರಸ್ತಾವನೆಯನ್ನು ಹಾಗೂ ಸಾರಿಗೆ ನಿಗಮಗಳ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಾಗೂ ಹೊಣೆಗಾರಿಕೆಗಳನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ತಿಳಿಸಿದ್ದಾರೆ.
12.05.2026 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950ರ ಸೆಕ್ಷನ್ 34(1)ರನ್ವಯ 01.04.2025ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿ/ ನೌಕರರ ವೇತನ ಪರಿಷ್ಕರಣೆಗೆ ಈ ಕೆಳಕಂಡ ನಿಬಂಧನೆಗೊಳಪಟ್ಟು ಸರ್ಕಾರವು ಅನುಮೋದನೆ ನೀಡಿ ಆದೇಶಿಸಿದೆ.
1) ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿಗಳು/ ನೌಕರರು31.03.2025 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು;
2) ಪೂರ್ವ ಕಿಂಕೋ ನೌಕರರು ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳ ಅರ್ಹ ಅಧಿಕಾರಿ/ನೌಕರರ ಉನ್ನತ ವೇತನ ಶ್ರೇಣಿ, ಮಧ್ಯಂತರ (Selection Grade) ವೇತನ ಶ್ರೇಣಿಗಳು ಸೇರಿದಂತೆ ಪ್ರಸ್ತುತ ಇರುವ ಎಲ್ಲ ವೇತನ ಶ್ರೇಣಿಗಳನ್ನು ಶೇ.12.50ರಷ್ಟು ಹೆಚ್ಚಿಸಿ ಅದಕ್ಕನುಗುಣವಾಗಿ ಪರಿಷ್ಕರಿಸಲು;
3) ಈ ವೇತನ ಪರಿಷ್ಕರಣೆಯನ್ನು :01.07.2026ರ ಮಾಹೆಯ ವೇತನದಲ್ಲಿ ಅನುಷ್ಠಾನಗೊಳಿಸಿ ಎಲ್ಲ ಅರ್ಹ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಲು;
01.04.2025 ರಿಂದ 30.06.2026ರ ಅವಧಿಯ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಹಂತ ಹಂತವಾಗಿ ಪಾವತಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ತಿಳಿಸಿದ್ದಾರೆ.
ಈ ಹಿಂದಿನ ಸರ್ಕಾರದ ಆದೇಶದಲ್ಲಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950ರ ಸೆಕ್ಷನ್ 34(1)ರನ್ವಯ 01.03.2023ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿ/ ನೌಕರರು ದಿನಾಂಕ:31.12.2019ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಪರಿಷ್ಕರಿಸಿ ಶೇ.15ರಷ್ಟು ಹೆಚ್ಚಿಸಿ ಆದೇಶಿಸಲಾಗಿತ್ತು.
ಈ ಸರ್ಕಾರದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳಿಗೆ (ಪೂರ್ವ ಕಿಂಕೋ ನೌಕರರು ಸೇರಿದಂತೆ) 01.01.2021 ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಅದರಂತೆ ಮೊದಲನೆಯ ಕಂತಿನ ಮೊತ್ತ 450 ಕೋಟಿ ರೂ.ಗಳನ್ನು ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
Related









