ಆನೇಕಲ್: ತಾನು ಪ್ರೀತಿಸಿದ ಯುವತಿ ಕೈಕೊಟ್ಟಿದ್ದಾಳೆ ಎಂದು ಆರೋಪಿಸಿದ ಪಾಗಲ್ ಪ್ರೇಮಿಯೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿದ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ಸೋಮಶೇಖರ್ ಹೈಟೆನ್ಷನ್ ಕಂಬ ಹತ್ತಿ ಹುಚ್ಚಾಟವಾಡಿದ ಯುವಕ. ಚಿನ್ನಯ್ಯನಪಾಳ್ಯ ನಿವಾಸಿಯಾದ ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದ. ಇತ್ತೀಚಿಗೆ ಆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.
ಹೀಗಾಗಿ ಲವ್ ಬ್ರೇಕಪ್ ಮಾಡಿಕೊಳ್ಳಲು ಆಕೆ ಮುಂದಾದ ಹಿನ್ನೆಲೆ ಸೋಮಶೇಖರ್ ಮನೆಯ ಶೀಟ್ ಒಡೆದು ದಾಂಧಲೆ ಮಾಡಿದ್ದಾನೆ. ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರೋವರೆಗೆ ಕೆಳಗೆ ಇಳಿಯುವುದಿಲ್ಲ ಎಂದು ಹಠಹಿಡಿದು ಕುಳಿತ್ತಿದ್ದ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಆನೇಕಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಮನವೊಲಿಸಿದರೂ ಕಿಡಿಗೇಡಿ ಕೆಳಗಿಳಿಯಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಗ್ರಾಮಾಸ್ಥರು ಜಮಾಯಿಸಿದ್ದು, ಯುವಕನನ್ನ ಕೆಳಗಿಳಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
Related










