NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ

ಸಂಘದ ರಾಜ್ಯಾಧ್ಯಕ್ಷ ಎಫ್.ಎಚ್. ಜಕ್ಕಪ್ಪ ಅವರ ಆದೇಶದ ಮೇರೆಗೆ ನಮ್ಮ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯಿಂದ ಈ ಕೂಡಲೇ ನಿರ್ಗಮಿಸುತ್ತಿದ್ದೇವೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರುತ್ತಿದ್ದು, ಹೀಗಾಗಿ ಮೇ 20ರ ಮುಷ್ಕರದಲ್ಲಿ ನಾವು ಭಾಗವಹಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಸ್‌ಸಿ ಎಸ್‌ಟಿ ನೌಕರರ ಸಂಘ ತಿಳಿಸಿದೆ.

ಈ ಸಂಬಂಧ ಇಂದು ಕೆಎಸ್‌ಆರ್‌ಟಿಸಿ ಎಂಡಿ ಅವರಿಗೆ ಲಿಖಿತವಾಗಿ ಮಾಹಿತಿ ನೀಡಿರುವ ಸಂಘದ ಪದಾಧಿಕಾರಿಗಳು, ನಮ್ಮ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಭಾಗವಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 20.05.2026 ರಂದು ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಲಾಗಿತ್ತು.

ಆದರೆ, ನಮ್ಮ ಸಂಘದ ರಾಜ್ಯಾಧ್ಯಕ್ಷ ಎಫ್.ಎಚ್. ಜಕ್ಕಪ್ಪ ಅವರ ಆದೇಶದ ಮೇರೆಗೆ ನಮ್ಮ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯಿಂದ ಈ ಕೂಡಲೇ ನಿರ್ಗಮಿಸುತ್ತಿದ್ದೇವೆ.

ಹೀಗಾಗಿ ಈ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಮುಷ್ಕರದಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕ್ಷಣದಿಂದ ಭಾಗವಹಿಸುವುದಿಲ್ಲವೆಂದು ಈ ಮೂಲಕ ತಿಳಿಸುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅವರ ವಿಳಾಸ ನಮೂದಿಸಿ ಪತ್ರ ರವಾನಿಸಲಾಗಿದೆ.

ಇಂದು ಎಂಡಿ ಅವರಿಗೆ ಪತ್ರ ಬರೆದಿರುವ ಸಂಘದ ಮುಖಂಡರು, ರಾಜ್ಯ ಕಾರ್ಯಾಧ್ಯಕ್ಷ ರವಿಪ್ರಕಾಶ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ ಅವರ ಸಹಿಯೊಂದಿಗೆ ಈ ಪತ್ರವನ್ನು ಎಂಡಿ ಅವರಿಗೆ ರವಾನಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ