ಭಾರೀ ಮಳೆಗೆ ನೆಲಕಚ್ಚಿದ ಪರಂಗಿ ಅಡಿಕೆ ಗಿಡಗಳು -ಅಪಾರ ಪ್ರಮಾಣದ ಬೆಳೆ ಹಾನಿ ರೈತರ ಗೋಳಾಟ
ಧಾರಾಕಾರ ಮಳೆಗೆ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ, ದೊಣ್ಣೆಹಳ್ಳಿಯಲ್ಲಿ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಎನ್ನುವ ರೈತರಿಗೆ ಸೇರಿದ ಎರಡು ಎಕರೆ ಪಪ್ಪಾಯ ಬೆಳೆ ನೆಲಕಚ್ಚಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ದಾವಣಗೆರೆ/ವಿಜಯನಗರ: ಜಿಲ್ಲೆಯ ಉಜ್ಜಯಿನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಸರ್ಕಾರಿ ಶಾಲೆ ಮೇಲ್ಛಾವಣಿಯ ಶೀಟುಗಳು ಹಾರಿ ಹೋಗಿವೆ.

ಕೊಟ್ಟೂರು ತಾಲೂಕಿನ ಉಜ್ಜಯಿನಿ, ಮಂಗಾಪುರ, ನಿಂಬಳಗೇರೆ, ಯರಮ್ಮನಹಳ್ಳಿ ಭಾಗದಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಸುರಿದಿದೆ. ಭಾರೀ ಬಿರುಗಾಳಿಗೆ ಅಪಾರ ಪ್ರಮಾಣದ ಬಾಳೆ ಹಾಗೂ ಪಪ್ಪಾಯಿ ಗಿಡಗಳು ನೆಲಕ್ಕುರುಳಿದೆ. ಪರಿಣಾಣ ಕೈಗೆ ಬಂದಿದ್ದ ಬಾಳೆ ಹಾಗೂ ಪಪ್ಪಾಯಿ ಗಿಡಗಳು ಮುರಿದು ಬಿದ್ದಿದ್ದು, ರೈತರಿಗೆ ಭಾರಿ ನಷ್ಟ ಸಂಭವಿಸಿದೆ. ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ನಿಂಬಳಗೆರೆ ಗ್ರಾಮದ ಸರ್ಕಾರಿ ಶಾಲೆ ಸೋರುತ್ತಿದ್ದ ಕಾರಣ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಕಬ್ಬಿಣದ ಶೀಟ್‌ಗಳ ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಶಾಲಾ ಆವರಣದಲ್ಲಿದ್ದ ಮರ ಧರೆಗುರುಳಿದ್ದರಿಂದ ಶಾಲೆಯ ಕಟ್ಟಡ ಜಖಂಗೊಂಡಿದೆ.
ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಪರಂಗಿ ಹಾಗೂ ಅಡಿಕೆ ಗಿಡಗಳು ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು ಬೆಳೆ ಕಳೆದುಕೊಂಡ ರೈತರು ಗೋಳಾಡುತ್ತಿದ್ದಾರೆ.
ಮಂಗಳವಾರ ಸುರಿದ ಧಾರಾಕಾರ ಮಳೆಗೆ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ, ದೊಣ್ಣೆಹಳ್ಳಿಯಲ್ಲಿ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಎನ್ನುವ ರೈತರಿಗೆ ಸೇರಿದ ಎರಡು ಎಕರೆ ಪಪ್ಪಾಯ ಬೆಳೆ ನೆಲಕಚ್ಚಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಇನ್ನು ಉದ್ದಘಟ್ಟ ಗ್ರಾಮದಲ್ಲಿ ಮಳೆ ಗಾಳಿಗೆ ಸರ್ಕಾರಿ ಶಾಲೆಯ ಕೊಠಡಿ ಮೇಲೆ ಬೃಹತ್ ಮರ ಬಿದ್ದು ಕೊಠಡಿಯ ಶೀಟ್‍ಗಳು ಒಡೆದು ಹೋಗಿವೆ. ಶಾಲೆಯ ಅಡುಗೆ ಕೊಠಡಿ ಗೋಡೆ ಕೂಡ ಬಿರುಕು ಬಿಟ್ಟಿದೆ.
ಇದಿಷ್ಟೇ ಅಲ್ಲದೆ ಭರಮಸಮುದ್ರದಲ್ಲಿ ಮರ ಬಿದ್ದು ಮಹಾಂತೇಶ್ ಎನ್ನುವವರ ಮನೆಗೆ ಹಾನಿಯುಂಟಾಗಿದೆ. ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗುಡುಗು ಸಿಡಿಲಿನ ರಭಸಕ್ಕೆ ಮಹಮದ್ ಗನಿ ಎಂಬುವವರ ಆಕಳು ಮೃತಪಟ್ಟಿದೆ.
ಭಾರಿ ಮಳೆಯಿಂದಾಗಿ ಗ್ರಾಮದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನೀರನ್ನು ಹೊರಹಾಕಲು ಜನ ಹರಸಾಹಸಪಟ್ಟಿದ್ದಾರೆ. ಒಟ್ಟಾರೆ ನಿನ್ನೆ ಸುರಿದ ಮಳೆಯಿಂಧ ಅಪಾರ ಪ್ರಮಾಣದ ಹಾನಿಯಾಗಿದ್ದು ಮನೆ, ಜನಾನುವಾರು ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಜಯನಗರ: ಜಿಲ್ಲೆಯ ಉಜ್ಜಯಿನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಸರ್ಕಾರಿ ಶಾಲೆ ಮೇಲ್ಛಾವಣಿಯ ಶೀಟುಗಳು ಹಾರಿ ಹೋಗಿವೆ.

Related