NEWSನಮ್ಮರಾಜ್ಯಲೇಖನಗಳು

ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅಧಿಕಾರಿ ಅಥವಾ ನೌಕರ -ನಿಯಮವೇ ಇದೆ!

“ಸಂಸ್ಥೆಯ ನೌಕರ" ಎಂದರೆ ರಸ್ತೆ, ಸಾರಿಗೆ ಸಂಸ್ಥೆ ಅಧಿನಿಯಮ, 1950ರ ಅಡಿಯಲ್ಲಿ ರಚಿಸಲಾದ ನಿಯಮಗಳ ಮೂಲಕ ಯಾರ ನೇಮಕದ ಮತ್ತು ಸೇವೆಯ ಷರತ್ತುಗಳನ್ನು ಸಂಸ್ಥೆಯು ನಿರ್ಧರಿಸಬಹುದಾಗಿಯೋ ಅಂತಹ ಸಂಸ್ಥೆಯು ಒಬ್ಬ ಅಧಿಕಾರಿ ಅಥವಾ ನೌಕರ ಎಂದು ಅರ್ಥ. ಸಾರಿಗೆ ಸಂಸ್ಥೆಗೆ ನೇಮಕಗೊಂಡವರು ಅಧಿಕಾರಿಗಳು ಇದ್ದಾರೆ ಹಾಗೂ ಚಾಲನಾ ಸಿಬ್ಬಂದಿಗಳು ಇದ್ದಾರೆ. ಈ ಚಾಲನಾ ಸಿಬ್ಬಂದಿಗಳನ್ನು ಸಿ-ವರ್ಗದ ನೌಕರರು ಎಂದು ಸಂಸ್ಥೆ ಪರಿಗಣಿಸಿದೆ. ಹೀಗಾಗಿ ಚಾಲನಾ ಸಿಬ್ಬಂದಿಗಳು ಕಾರ್ಮಿಕರಲ್ಲ ಎಂದು ಸ್ಪಷ್ಟವಾಗಿ ಲಿಖಿತ ದಾಖಲೆಗಳೇ ಸಂಸ್ಥೆಯಲ್ಲಿ ಇವೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಸಾರಿಗೆ ಸಂಸ್ಥೆ ಅಧಿನಿಯಮ 1950ರ ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1971 ರಲ್ಲಿ ರಚಿಸಿದ ಸಂಸ್ಥೆಯ ನಿಯಮಗಳಲ್ಲೂ ಕೂಡ ಸರ್ಕಾರ ಅಡಳಿತ ಮಂಡಳಿ ಸಾರಿಗೆ ಸಂಸ್ಥೆಯಲ್ಲಿ ನೇಮಕಗೊಂಡವರನ್ನು ನೌಕರರು ಎಂದು ಪರಿಗಣಿಸಿದೆ.

ಅಲ್ಲದೆ ಸಂಸ್ಥೆಯ ಎಲ್ಲ ನಿಯಮಗಳಲ್ಲೂ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಕಾನೂನಾತ್ಮಕವಾಗಿ ನೇಮಕಗೊಂಡಿರುವವರನ್ನು ನೌಕರ ಎಂದು ಸಂಬೋಧಿಸಲಾಗುತ್ತಿದೆ. ಆದರೆ, ತದನಂತರ ಯಾರು ಈ ನಮ್ಮ ಸಾರಿಗೆ ನೌಕರರನ್ನು ಕಾರ್ಮಿಕರು ಎಂದು ಮಾಡಿದರು. ಈಗಲೂ ಅದು ಯಕ್ಷಪ್ರಶ್ನೆಯಾಗಿದೆ.

ಇನ್ನು ಈ ಬಗ್ಗೆ ಹಿಂದಿನಿಂದಲೂ ಕೂಡ ವಿಜಯಪಥ ಸಾರಿಗೆ ನಿಗಮಗಳಲ್ಲಿ ನೇಮಕವಾಗಿರುವವರು ಯಾರೇ ಆಗಲಿ ಎ-ವರ್ಗ, ಬಿ-ವರ್ಗ, ಸಿ-ವರ್ಗ ಹಾಗೂ ಡಿ-ವರ್ಗಕ್ಕೆ ನೇಮಕಗೊಂಡವರು ನೌಕರರೇ ಹೊರತು ಕಾರ್ಮಿಕರಲ್ಲ ಎಂದು ಒತ್ತಿ ಒತ್ತಿ ಹೇಳಲಾಗಿದೆ. ಅದಕ್ಕೆ ಸ್ಪಷ್ಟವಾದ ಲಿಖಿತ ನಿಯಮವೂ ಸಂಸ್ಥೆಯಲ್ಲಿ ಇದೆ.

ಆ ನಿಯಮವನ್ನು ಮರೆಮಾಚಿ ಚಾಲನಾ ವರ್ಗ ಹಾಗೂ ತಾಂತ್ರಿಕಾ ಸಿಬ್ಬಂದಿಗಳನ್ನು ಕಾರ್ಮಿಕರು ಎಂದು ಟ್ರೇಡ್‌ ಯೂನಿಯನ್‌ಗಳನ್ನು ಹುಟ್ಟಿಹಾಕಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ನೌಕರರ ಜೀವನವನ್ನೇ ಹಾಳುಮಾಡುತ್ತಿರುವ ಈ ಸಂಘಟನೆಗಳ ಅಡಿಯಲ್ಲಿ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲನಾ ಹಾಗೂ ತಾಂತ್ರಿಕಾ ಸಿಬ್ಬಂದಿಗಳನ್ನು ಕಾರ್ಮಿಕ ಎಂದು ಕರೆದು ಒಡೆದಾಳುವ ನೀತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಯಾವುದೇ ನೇಮಕಗೊಂಡ ನೌಕರರು ಕಾರ್ಮಿಕರಲ್ಲ, ಹೀಗಾಗಿ ಈ ಬಗ್ಗೆ ನೌಕರರು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸಾರಿಗೆ ನಿಗಮದ ನಿಯಮದಲ್ಲಿ ಏನಿದೆ?: ಸಾರಿಗೆ ನಿಗಮದ ಸ.ಆ.ಸಂ.ಎಚ್‌.ಡಿ.109 ಟಿಆರ್‌ಇ 71. ದಿನಾಂಕ 15ನೇ ಮಾರ್ಚ್‌ 1972 ಇದರ ಅನುಬಂಧ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಗಳು 1971

ರಸ್ತೆ, ಸಾರಿಗೆ ಸಂಸ್ಥೆ ಅಧಿನಿಯಮ, 1950ರ (1950ರ ಕೇಂದ್ರ ಅಧಿ ನಿಯಮ 64) 14 ಮತ್ತು 45ನೇ ಪ್ರಕರಣಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮತ್ತು ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಪಡೆದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸುತ್ತದೆ.

ಅದು ಯಾವುದೆಂದರೆ:
ಭಾಗ-I ಪ್ರಾರಂಭಿಕ
1. ಹೆಸರು ಮತ್ತು ಪ್ರಾರಂಭ :

1. ಈ ನಿಯಮಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಗಳು, 1971 ಎಂದು ಕರೆದುತಕ್ಕುದು.

2. ಅವು ಬೆಂಗಳೂರಿನಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಸೂಚನಾ ಫಲಕದಲ್ಲಿ ದಿನಾಂಕವನ್ನು ನಿರ್ದಿಷ್ಟಪಡಿಸಿ ಒಂದು ಸೂಚನಾ ಪತ್ರವನ್ನು ಪ್ರಕಟಪಡಿಸುವ ಮೂಲಕ ಗೊತ್ತುಪಡಿಸುವಂತಹ ದಿನಾಂಕದಂದು ಜಾರಿಗೆ ಬರತಕ್ಕುದು.

2. ಪರಿಭಾಷೆಗಳು:
ಈ ವಿನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು
ಎ) “ಅಪೀಲು ಪ್ರಾಧಿಕಾರ ” ಎಂದರೆ ಅಪೀಲು ಪ್ರಾಧಿಕಾರದ ಅಧಿಕಾರಗಳನ್ನು ಚಲಾಯಿಸಲು ಈ ನಿಯಮಗಳ ಮೇರೆಗೆ ಸಕ್ಷಮನಾದ ಅಧಿಕಾರಿ.

ಬಿ) ” ಸಂಸ್ಥೆ ” ಎಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.

ಸಿ) “ಸಂಸ್ಥೆಯ ನೌಕರ” ಎಂದರೆ ರಸ್ತೆ, ಸಾರಿಗೆ ಸಂಸ್ಥೆ ಅಧಿನಿಯಮ, 1950ರ ಅಡಿಯಲ್ಲಿ ರಚಿಸಲಾದ ನಿಯಮಗಳ ಮೂಲಕ ಯಾರ ನೇಮಕದ ಮತ್ತು ಸೇವೆಯ ಷರತ್ತುಗಳನ್ನು ಸಂಸ್ಥೆಯು ನಿರ್ಧರಿಸಬಹುದಾಗಿಯೋ ಅಂತಹ ಸಂಸ್ಥೆಯು ಒಬ್ಬ ಅಧಿಕಾರಿ ಅಥವಾ ನೌಕರ ಎಂದು ಅರ್ಥ.

ಹೀಗೆ ಸಂಸ್ಥೆಯ ನಿಯಮಾವಳಿಯಲ್ಲೇ ನೌಕರರು ಎಂದು ಇದೆ. ಇಷ್ಟಿದ್ದರೂ ಕೂಡ ಸಾರಿಗೆ ಸಂಸ್ಥೆಯ ನೌಕರರನ್ನು ಅವರು ನೌಕರರಲ್ಲ ಕಾರ್ಮಿಕರು ಎಂದು ಪದೇಪದೇ ಕರೆಯುವ ಮೂಲಕ ಕಳೆದ 4 ದಶಕಗಳಿಂದಲೂ ನೌಕರರನ್ನು ಕಾರ್ಮಿಕರು ಎಂದು ನಂಬಿಸಿಕೊಂಡು ಬರುತ್ತಿವೆ ಈ ಸಂಘಟನೆಗಳು.

ಅಲ್ಲದೆ ಇಲ್ಲಿ ಅಂದರೆ ಸಾರಿಗೆ ಸಂಸ್ಥೆಯಲ್ಲಿ ನೇಮಕಗೊಂಡ ಅಧಿಕಾರಿ ಅಥವಾ ನೌಕರರಿಗೆ ವೇತನ ಹೆಚ್ಚಳವಾಗುವುದು ಅವರ ಮೂಲ ವೇತನದ ಆಧಾರದ ಮೇರೆಗೆ. ಅಂದರೆ, ಇಲ್ಲಿ ಕಾರ್ಮಿಕರೆನಿಸಿಕೊಂಡವರು ಬೀದಿಗಿಳಿದು ಹೋರಾಟ ಮಾಡುವ ಚಾಲನಾ ಸಿಬ್ಬಂದಿಗಳಿಗೂ ಹಾಗೂ ಕಚೇರಿಯಲ್ಲಿ ಕುಳಿತು ಇದೇ ಚಾಲನಾ ಸಿಬ್ಬಂದಿಗಳು ಹೋರಾಟಕ್ಕೆ ಇಳಿದರೂ ಎಂಬ ಕಾರಣ ನೀಡಿ ಅಮಾನತು, ವಜಾ ಹಾಗೂ ಪೊಲೀಸ್‌ ಪ್ರಕರಣ ದಾಖಲಿಸುವ ನೌಕರರಿಗೂ (ಅಧಿಕಾರಿಗಳಿಗು) ಸರ್ಕಾರ ಘೋಷಣೆ ಮಾಡಿದ ವೇತನ ಹೆಚ್ಚಳವೇ ಈವರೆಗೂ ಅನ್ವಯವಾಗುತ್ತಿರುವುದು.

ಆದರೂ ಇಲ್ಲಿ ನೌಕರರು ಅಂದರೆ ಚಾಲನಾ ಸಿಬ್ಬಂದಿಗಳನ್ನು ಹಿಂಸಿಸಿ ಇದೇ ಅಧಿಕಾರಿಗಳ ವರ್ಗ ಇವರ ಹೋರಾಟದಿಂದ ಹೆಚ್ಚಳವಾಗುವ ವೇತನವನ್ನು ಅದೂ ಕೂಡ ಯಾವುದೇ ಶಿಕ್ಷೆ (Punishmen) ಇಲ್ಲದೆ, ಯಾವುದೇ ಇಂಕ್ರಿಮೆಂಟ್‌ ಕಳೆದುಕೊಳ್ಳದೆ ಈವರೆಗೂ ಪಡೆದುಕೊಂಡು ಬಂದಿರುವವರು ಎಂದು ನಂಬಲಾಗಿದೆ. ಇದಕ್ಕೆಲ್ಲ ಕಾರಣ ಈ ಕಾರ್ಮಿಕ ಸಂಘಟನೆಗಳು ಎಂಬ ಶೀರ್ಷಿಕೆಯಡಿ ಬರಿ ಸಾರಿಗೆ ಚಾಲನಾ ಸಿಬ್ಬಂದಿಗಳನ್ನು ಹೋರಾಟ ಇಳಿಸಿರುವುದು.

ಇಲ್ಲಿ ಅಧಿಕಾರಿಗಳ ವರ್ಗವನ್ನು ಬೇರ್ಪಡಿಸಿ ಬರಿ ಚಾಲನಾ ಹಾಗೂ ತಾಂತ್ರಿಕಾ ಸಿಬ್ಬಂದಿಗಳನ್ನು ಮಾತ್ರ ಹೋರಾಟಕ್ಕೆ ಬರುವಂತೆ ಕರೆ ನೀಡಿ ಈ ನೌಕರರ ಮನೆ ಹಾಳು ಮಾಡುತ್ತಿರುವುದು ಇದೇ ಟ್ರೇಡ್‌ ಯೂನಿಯನ್‌ಗಳು. ಹೀಗಾಗಿ ಇಲ್ಲಿ ಅಧಿಕಾರಿ ಅಥವಾ ನೌಕರ ಎಂದರೆ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರೂ ಎಂದು ತಿಳಿಯಬೇಕಿದೆ. ಅಲ್ಲದೆ ಇನ್ನು ಮುಂದೆ ಅಧಿಕಾರಿಗಳು ಕೂಡ ತಮ್ಮ ವೇತನದಲ್ಲಿ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಿಕೊಳ್ಳಲು ಹೋರಾಟ ಮಾಡಬೇಕಿದೆ.

ಒಂದು ವೇಳೆ ಅಧಿಕಾರಿಗಳು ಹೋರಾಟಕ್ಕೆ ಮುಂದಾಗದಿದ್ದರೆ ಸಾರಿಗೆಯ ಚಾಲನಾ ಹಾಗೂ ತಾಂತ್ರಿಕಾ ಸಿಬ್ಬಂದಿಗಳು ಕೂಡ ಈ ವೇತನ ಸಂಬಂಧ ಟ್ರೇಡ್‌ ಯೂನಿಯನ್‌ಗಳು ಕರೆ ನೀಡುವ ಹೋರಾಟದಿಂದ ದೂರ ಇರುವುದು ಒಳ್ಳೆಯದು. ಕಾರಣ ಅಧಿಕಾರಿಗಳು ಭಾಗವಹಿಸದ ಹೋರಾಟ ನಿಮಗೆ ಶಿಕ್ಷೆಯಾಗಿ ಪರಿಣಮಿಸುತ್ತದೆ. ಇದು ನಿಮಗೆ ಬೇಕಾ ಎಂಬುದರ ಬಗ್ಗೆ ಯೋಚಿಸಿ. ಇನ್ನು ಮೊದಲು ಈ ಕಾರ್ಮಿಕ ಎಂಬ ಗೊಂದಲದಿಂದ ಚಾಲನಾ ಸಿಬ್ಬಂದಿ ಹೊರಬನ್ನಿ ಎಂದು ಈ ಮೂಲಕ ವಿಜಯಪಥ ಸಾರಿಗೆ ಸಂಸ್ಥೆಯ ನಿಯಮಾವಳಿಯ ದಾಖಲೆ ಸಹಿತ ನಿಮ್ಮ ಮುಂದೆ ಇಟ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದು ಇನ್ನಾದರೂ ಅರಿತು ಮುನ್ನಡೆಯಿರಿ.

Deva
the authorDeva

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು