NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನೌಕರರ 11 ತಿಂಗಳ ಹಿಂಬಾಕಿ ಕುರಿತು ವಿವರಣೆ ಸ್ಲಿಪ್‌ ನೀಡಲು ಆದೇಶ ಮಾಡುತ್ತೇನೆ- ನೌಕರರಿಗೆ ಎಂಡಿ ಭರವಸೆ

ಎಲ್ಲ ವಿಭಾಗಗಳ  ಘಟಕಗಳಲ್ಲಿ ನೀಡಿರುವ ಹಿಂಬಾಕಿ ವ್ಯತ್ಯಾಸದ ಬಗ್ಗೆ ಮೇಡಂ ಅವರಿಗೆ ನೌಕರರು ತಿಳಿಸಿದಾಗ ಮೇಡಂ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ.  ಅಲ್ಲದೆ ಹಿಂಬಾಕಿ ವ್ಯತ್ಯಾಸದ ಬಗ್ಗೆ ಎಲ್ಲ ಘಟಕಗಳಿಗೂ ವಿವರಣೆ ನೀಡುವ ಕುರಿತು ಹಿಂಬಾಕಿ ವಿವರಣೆ ಸ್ಲಿಪ್‌ ನೀಡಲು ಶೀಘ್ರದಲ್ಲಿ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ 11 ತಿಂಗಳ ಹಿಂಬಾಕಿ ಕುರಿತು ಹಾಗೂ ಘಟಕಗಳಲ್ಲಿನ ಜ್ವಲಂತ ಸಮಸ್ಯೆಗಳ ಬಗೆಹರಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರಿಗೆ ಧಾರವಾಡ ಗ್ರಾಮಾಂತರ ವಿಭಾಗದ ನೌಕರರು ಮನವಿ ಮಾಡಿದರು.

ಸೋಮವಾರ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಎಂಡಿ ಅವರನ್ನು ಭೇಟಿ ಮಾಡಿದ ನೌಕರರು, ಹಿಂಬಾಕಿ ವ್ಯತ್ಯಾಸದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಆಗಿರುವ ದೋಷದ ಬಗ್ಗೆ ಸ್ಪಷ್ಟಪಡಿಸಲು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚನೆ ನೀಡಿವಂತೆ ಮನವಿ ಸಲ್ಲಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಎಲ್ಲ ವಿಭಾಗಗಳ  ಘಟಕಗಳಲ್ಲಿ ನೀಡಿರುವ ಹಿಂಬಾಕಿ ವ್ಯತ್ಯಾಸದ ಬಗ್ಗೆ ಮೇಡಂ ಅವರಿಗೆ ನೌಕರರು ತಿಳಿಸಿದಾಗ ಮೇಡಂ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ.  ಅಲ್ಲದೆ ಹಿಂಬಾಕಿ ವ್ಯತ್ಯಾಸದ ಬಗ್ಗೆ ಎಲ್ಲ ಘಟಕಗಳಿಗೂ ವಿವರಣೆ ನೀಡುವ ಕುರಿತು ಹಿಂಬಾಕಿ ವಿವರಣೆ ಸ್ಲಿಪ್‌ ನೀಡಲು ಶೀಘ್ರದಲ್ಲಿ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನೌಕರರ ಇತರೆ ಬೇಡಿಕೆಗಳು ಏನು?: 1) HRMS ಶೀಘ್ರದಲ್ಲಿ ಅಳವಡಿಸುವ ಬಗ್ಗೆ ಗಮನಹರಿಸಬೇಕು. 2) CGHS   2014 ರಲ್ಲಿನ ಹಳೆಯ ವೈದ್ಯಕೀಯ ದರಪಟ್ಟಿಯೇ ಇದ್ದು, ಹೊಸ 2026ರ ವೈದ್ಯಕೀಯ ದರಪಟ್ಟಿ ಜಾರಿಗೆ ತಂದು  ಅದನ್ನು ಅಳವಡಿಸಿಕೊಳ್ಳುವಂತೆ  ಆದೇಶ ಮಾಡಬೇಕು.

ವಾಯವ್ಯ ಸಾರಿಗೆ ನಿಗಮದ ಪ್ರತಿಯೊಂದು ವಿಭಾಗದಲ್ಲಿ ಹಾಗೂ ಘಟಕಗಳಲ್ಲಿ ನೌಕರರ ಹಾಗೂ ಅಧಿಕಾರಿಗಳ ಮಧ್ಯೆ ಆರೋಗ್ಯಕರವಾದ ವಾತಾವರಣ ನಿರ್ಮಿಸಲು  ಕುಂದುಕೊರತೆ ಸಭೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಿಕೊಂಡು ಹೋಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು.

4) ಇನ್ನು ವೈದ್ಯಕೀಯ ಮರುಪಾವತಿ ಬಿಲ್ಲಿನ ವಿಷಯದ ಬಗ್ಗೆ, ಬಹಳ ತಡವಾಗಿ ಆಸ್ಪತ್ರೆಗಳಿಗೆ ಹಣ ಸಂದಾಯ ಆಗುತ್ತಿದ್ದು, ಇದರಿಂದ ಚಿಕಿತ್ಸೆಗೆ ದಾಖಲಾಗುವ ಅಧಿಕಾರಿ/ ನೌಕರರಿಗೆ ಆಸ್ಪತ್ರೆಯಿಂದ ಬಿಡುಗಡೆ ಆಗಲು ಹಣದ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂಬ ಬೇಡಿಕೆಗಳನ್ನು ನೌಕರರು ಎಂಡಿ ಮುಂದೆ ಮಂಡಿಸಿದರು.

ಈ ವೇಳೆ ಎಂಡಿ ಪ್ರಿಯಾಂಗಾ ಅವರು ಮಾತನಾಡಿ, ಇನ್ನು ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಭೇಟಿ ಮಾಡಿದ ಎಲ್ಲ ನೌಕರರ ಜತೆಗೆ ಅತ್ಯಂತ ಸರಳ ಹಾಗೂ ಕಾಳಜಿ ಇಂದ ವಿಚಾರಿಸಿಕೊಂಡ ಅವರು ನಮ್ಮೆಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದು ಖುಷಿ ತಂದಿದೆ ಎಂದು ನೌಕರರು ಹೇಳಿದ್ದಾರೆ.

ಈ ಭೇಟಿ ವೇಳೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಬಸವರಾಜ್ ಎಸ್. ಕಮ್ಮಾರ್, ಎಂ.ಎಲ್.ನದಾಫ್, ಕಲಘಟಗಿ ಘಟಕದ ಜಿ.ಎಚ್‌.ಕೊಂಡಿಕೊಪ್ಪ, ಎಸ್.ಸಿ. ಹಿರೇಮಠ, ಎಚ್.ವಾಯ್ ತಳವಾರ ಹಾಗೂ ಗ್ರಾಮಾಂತರ ಘಟಕದ ಪಿ.ಬ.ಕೊಂಡಿವಾಡ, ನಿವೃತ್ತ ನೌಕರ ರಂಗಾರೆಡ್ಡಿ ರಾಯರೆಡ್ಡಿ ಸೇರಿದಂತೆ ಹತ್ತಾರೂ ನೌಕರರು ಇದ್ದರು.

Megha
the authorMegha

Leave a Reply

error: Content is protected !!
Latest news
ನಾಳೆ ಮಧ್ಯಾಹ್ನದ ಬಳಿಕ ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿಗಳ ಕಟ್ಟಡದ ನೌಕರರಿಗೆ ರಜೆ ಘೋಷಿಸಿ ಸರ್ಕಾರದ ಆದೇಶ ಮುಂದಿನ 5 ವರ್ಷದಲ್ಲಿ ಉದ್ಯೋಗವಿಲ್ಲದ ಪದವೀಧರರ ಸಂಖ್ಯೆ ಹೆಚ್ಚಾಗಲಿದೆ, ಇತ್ತ ಪ್ಲಂಬರ್, ಎಲೆಕ್ಟ್ರಿಷಿಯನ್ಸ್‌ ಸಿಗಲ್ಲ–... ಬನ್ನೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾರ ಅಣ್ಣ ವಾಸುದೇವನ್ ನಿಧನ ಅದೃಷ್ಟ ಅಂದರೆ ಇದೇ ಅಲ್ವಾ- ನಾಲ್ಕಾರು ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಕಿ ಈಗ ಪಶ್ಚಿಮ ಬಂಗಾಳದ ಮಂತ್ರಿ ! NWKRTC: ನೌಕರರ 11 ತಿಂಗಳ ಹಿಂಬಾಕಿ ಕುರಿತು ವಿವರಣೆ ಸ್ಲಿಪ್‌ ನೀಡಲು ಆದೇಶ ಮಾಡುತ್ತೇನೆ- ನೌಕರರಿಗೆ ಎಂಡಿ ಭರವಸೆ ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ