NWKRTC: ನೌಕರರ 11 ತಿಂಗಳ ಹಿಂಬಾಕಿ ಕುರಿತು ವಿವರಣೆ ಸ್ಲಿಪ್ ನೀಡಲು ಆದೇಶ ಮಾಡುತ್ತೇನೆ- ನೌಕರರಿಗೆ ಎಂಡಿ ಭರವಸೆ
ಎಲ್ಲ ವಿಭಾಗಗಳ ಘಟಕಗಳಲ್ಲಿ ನೀಡಿರುವ ಹಿಂಬಾಕಿ ವ್ಯತ್ಯಾಸದ ಬಗ್ಗೆ ಮೇಡಂ ಅವರಿಗೆ ನೌಕರರು ತಿಳಿಸಿದಾಗ ಮೇಡಂ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ. ಅಲ್ಲದೆ ಹಿಂಬಾಕಿ ವ್ಯತ್ಯಾಸದ ಬಗ್ಗೆ ಎಲ್ಲ ಘಟಕಗಳಿಗೂ ವಿವರಣೆ ನೀಡುವ ಕುರಿತು ಹಿಂಬಾಕಿ ವಿವರಣೆ ಸ್ಲಿಪ್ ನೀಡಲು ಶೀಘ್ರದಲ್ಲಿ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ 11 ತಿಂಗಳ ಹಿಂಬಾಕಿ ಕುರಿತು ಹಾಗೂ ಘಟಕಗಳಲ್ಲಿನ ಜ್ವಲಂತ ಸಮಸ್ಯೆಗಳ ಬಗೆಹರಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರಿಗೆ ಧಾರವಾಡ ಗ್ರಾಮಾಂತರ ವಿಭಾಗದ ನೌಕರರು ಮನವಿ ಮಾಡಿದರು.
ಸೋಮವಾರ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಎಂಡಿ ಅವರನ್ನು ಭೇಟಿ ಮಾಡಿದ ನೌಕರರು, ಹಿಂಬಾಕಿ ವ್ಯತ್ಯಾಸದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಆಗಿರುವ ದೋಷದ ಬಗ್ಗೆ ಸ್ಪಷ್ಟಪಡಿಸಲು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚನೆ ನೀಡಿವಂತೆ ಮನವಿ ಸಲ್ಲಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಎಲ್ಲ ವಿಭಾಗಗಳ ಘಟಕಗಳಲ್ಲಿ ನೀಡಿರುವ ಹಿಂಬಾಕಿ ವ್ಯತ್ಯಾಸದ ಬಗ್ಗೆ ಮೇಡಂ ಅವರಿಗೆ ನೌಕರರು ತಿಳಿಸಿದಾಗ ಮೇಡಂ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ. ಅಲ್ಲದೆ ಹಿಂಬಾಕಿ ವ್ಯತ್ಯಾಸದ ಬಗ್ಗೆ ಎಲ್ಲ ಘಟಕಗಳಿಗೂ ವಿವರಣೆ ನೀಡುವ ಕುರಿತು ಹಿಂಬಾಕಿ ವಿವರಣೆ ಸ್ಲಿಪ್ ನೀಡಲು ಶೀಘ್ರದಲ್ಲಿ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನೌಕರರ ಇತರೆ ಬೇಡಿಕೆಗಳು ಏನು?: 1) HRMS ಶೀಘ್ರದಲ್ಲಿ ಅಳವಡಿಸುವ ಬಗ್ಗೆ ಗಮನಹರಿಸಬೇಕು. 2) CGHS 2014 ರಲ್ಲಿನ ಹಳೆಯ ವೈದ್ಯಕೀಯ ದರಪಟ್ಟಿಯೇ ಇದ್ದು, ಹೊಸ 2026ರ ವೈದ್ಯಕೀಯ ದರಪಟ್ಟಿ ಜಾರಿಗೆ ತಂದು ಅದನ್ನು ಅಳವಡಿಸಿಕೊಳ್ಳುವಂತೆ ಆದೇಶ ಮಾಡಬೇಕು.
ವಾಯವ್ಯ ಸಾರಿಗೆ ನಿಗಮದ ಪ್ರತಿಯೊಂದು ವಿಭಾಗದಲ್ಲಿ ಹಾಗೂ ಘಟಕಗಳಲ್ಲಿ ನೌಕರರ ಹಾಗೂ ಅಧಿಕಾರಿಗಳ ಮಧ್ಯೆ ಆರೋಗ್ಯಕರವಾದ ವಾತಾವರಣ ನಿರ್ಮಿಸಲು ಕುಂದುಕೊರತೆ ಸಭೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಿಕೊಂಡು ಹೋಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
4) ಇನ್ನು ವೈದ್ಯಕೀಯ ಮರುಪಾವತಿ ಬಿಲ್ಲಿನ ವಿಷಯದ ಬಗ್ಗೆ, ಬಹಳ ತಡವಾಗಿ ಆಸ್ಪತ್ರೆಗಳಿಗೆ ಹಣ ಸಂದಾಯ ಆಗುತ್ತಿದ್ದು, ಇದರಿಂದ ಚಿಕಿತ್ಸೆಗೆ ದಾಖಲಾಗುವ ಅಧಿಕಾರಿ/ ನೌಕರರಿಗೆ ಆಸ್ಪತ್ರೆಯಿಂದ ಬಿಡುಗಡೆ ಆಗಲು ಹಣದ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂಬ ಬೇಡಿಕೆಗಳನ್ನು ನೌಕರರು ಎಂಡಿ ಮುಂದೆ ಮಂಡಿಸಿದರು.
ಈ ವೇಳೆ ಎಂಡಿ ಪ್ರಿಯಾಂಗಾ ಅವರು ಮಾತನಾಡಿ, ಇನ್ನು ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಭೇಟಿ ಮಾಡಿದ ಎಲ್ಲ ನೌಕರರ ಜತೆಗೆ ಅತ್ಯಂತ ಸರಳ ಹಾಗೂ ಕಾಳಜಿ ಇಂದ ವಿಚಾರಿಸಿಕೊಂಡ ಅವರು ನಮ್ಮೆಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದು ಖುಷಿ ತಂದಿದೆ ಎಂದು ನೌಕರರು ಹೇಳಿದ್ದಾರೆ.
ಈ ಭೇಟಿ ವೇಳೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಬಸವರಾಜ್ ಎಸ್. ಕಮ್ಮಾರ್, ಎಂ.ಎಲ್.ನದಾಫ್, ಕಲಘಟಗಿ ಘಟಕದ ಜಿ.ಎಚ್.ಕೊಂಡಿಕೊಪ್ಪ, ಎಸ್.ಸಿ. ಹಿರೇಮಠ, ಎಚ್.ವಾಯ್ ತಳವಾರ ಹಾಗೂ ಗ್ರಾಮಾಂತರ ಘಟಕದ ಪಿ.ಬ.ಕೊಂಡಿವಾಡ, ನಿವೃತ್ತ ನೌಕರ ರಂಗಾರೆಡ್ಡಿ ರಾಯರೆಡ್ಡಿ ಸೇರಿದಂತೆ ಹತ್ತಾರೂ ನೌಕರರು ಇದ್ದರು.
Related









