ಹೃದಯಾಘಾತದಿಂದ ಪಾರಾಗಲು ನಿಮಗೆ ಬಾದಾಮಿ ಅಥವಾ ಬಡವರ ಬಾದಾಮಿ ಕಡಲೆಕಾಯಿ ಯಾವುದು ಹಿತ?
ಇತ್ತೀಚಿನ ದಿನಗಳಲ್ಲಿ ಸಣ್ಣಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೆಚ್ಚಾಗಿ ಕೇಳಿ ಬರುವ ಸಾವು ಎಂದರೆ ಅದು ಹೃದಯಾಘಾತದಿಂದ ಎಂಬುವುದು. ಬಸ್ ಚಾಲಕರು ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟರು, ಹೋಟೆಲ್ನಲ್ಲಿ ತಿಂಡಿ ಆರ್ಡರ್ ಮಾಡಿ ಟೇಬಲ್ ಬಳಿ ಬಂದ ಯುವಕನ ಸಾವು ಹೀಗೆ ವಿವಿಧ ರೀತಿಯಲ್ಲಿ ಸಾವು ಎಂದು ಕೇಳಿರುತ್ತೇವೆ ನೋಡಿರುತ್ತೇವೆ. ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಬೇಡದ ಕೆಟ್ಟ ಕೊಬ್ಬು ಇರುವುದೇ ಆಗಿರುತ್ತದೆ. ಅದನ್ನು ಸರಿ ಪಡಿಸಿಕೊಳ್ಳುವ ಕ್ರಮ ಏನು ಎಂಬುದಕ್ಕೆ ನಮ್ಮ ಇಂದಿನ ಲೇಖನ ನಿಮಗೆ ಸಹಕಾರಿಯಾಗಬಹುದು

- ಎರಡೂ ಆರೋಗ್ಯಕರ ಕೊಬ್ಬಿನಿಂದ ತುಂಬಿವೆ, ಆದರೆ ಯಾವ ಕಾಯಿ ನಿಮ್ಮ ಹೃದಯಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತದೆ? ಪೌಷ್ಟಿಕಾಂಶ ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಸಮಯ
ಇಂದಿನ ಈ ಲೇಖನದಲ್ಲಿ ಬಾದಾಮಿ ಹಾಗೂ ಕಡಲೆಕಾಯಿಯಿಂದಾಗು ಪ್ರಯೋಜನಗಳ ಬಗ್ಗೆ ತಿಳಿಸುತ್ತಿದ್ದು, ಇವೆರಡರಲ್ಲಿ ಯಾವುದು ಉತ್ತಮ ಎಂದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಸಮತೋಲಿತ ಆಹಾರ ಸೇರಿದಂತೆ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದಾಗಿದೆ. ಇಲ್ಲಿ ಕಡಲೆಕಾಯಿ ಮತ್ತು ಬಾದಾಮಿ ಹೃದಯದ ಆರೋಗ್ಯವನ್ನು ಕಾಪಾಡುವ ಎರಡು ಪೌಷ್ಟಿಕ-ಭರಿತ ಆಹಾರಗಳಾಗಿವೆ.
ಅಮೆರಿಕಾದಂತಹ ದೇಶದಲ್ಲೇ ಪ್ರತಿ 3 ಸಾವುಗಳಲ್ಲಿ 1 ಸಾವು ಹೃದಯಾಘಾತದಿಂದ ಸಂಭವಿಸುತ್ತಿದೆ ಎಂಬ ಆತಂಕಕಾರಿ ವಿಷಯ ತಿಳಿದು ಬಂದಿದೆ. ಈ ಸಾವಿನ ಸಂಖ್ಯೆ ಗಮನಾರ್ಹವಾಗಿದ್ದರೂ, ಪ್ರೋತ್ಸಾಹದಾಯಕ ಸುದ್ದಿಯೆಂದರೆ, ನೀವು ಏನು ತಿನ್ನುತ್ತೀರಿ ಎಂಬುದು ಸೇರಿದಂತೆ ದೈನಂದಿನ ಆಯ್ಕೆಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರವು ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆಯ್ಕೆ ಮಾಡಲು ಸಾಕಷ್ಟು ಪೋಷಕಾಂಶ ಭರಿತ ಆಹಾರಗಳಿದ್ದರೂ, ಒಟ್ಟಾರೆ ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ಅತ್ಯಂತ ಅನುಕೂಲಕರ ಆಯ್ಕೆಗಳಲ್ಲಿ ಒಂದು ಈ ಕಡಲೆಕಾಯಿ ಬಾದಾಮಿ ಬೀಜಗಳು.
ಹಲವು ವಿಧಗಳಲ್ಲಿ, ಬಾದಾಮಿ ಮತ್ತು ಕಡಲೆಕಾಯಿಗಳು ಹೃದಯರಕ್ತನಾಳದ ಪ್ರಯೋಜನಗಳಿಗೆ ಸಂಬಂಧಿಸಿದ ಎರಡು ಜನಪ್ರಿಯ ತಿನಿಸುಗಳೂ ಕೂಡ ಆಗಿರುವುದು ಎದ್ದು ಕಾಣುತ್ತದೆ. ಈ ಎರಡರ ಸೇವನೆಯಿಂದ ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳು ಸಮೃದ್ಧವಾಗಿ ದೊರೆಯುತ್ತವೆ, ಅವುಗಳಲ್ಲಿ ಕೊಬ್ಬು, ಫೈಬರ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿವೆ. ಆದರೂ ಇವುಗಳ ಸೇವನೆ ಸಮತೋಲಿತ ಆಹಾರಕ್ರಮಕ್ಕೆ ಉತ್ತಮ.
ಆದರೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ವಿಷಯಕ್ಕೆ ಬಂದಾಗ, ನಿಮ್ಮ ದಿನಚರಿಯಲ್ಲಿ ಯಾವುದು ಹೆಚ್ಚು ನಿಯಮಿತವಾಗಿ ದೊರೆಯುತ್ತದೆ. ಅಂದರೆ ನಿಮಗೆ ಆರ್ಥಿಕವಾಗಿ ಯಾವುದು ಸರಳವಾಗಿ ಸಿಗುತ್ತದೆ ಎಂಬುದರ ಆಧಾರಮೇಲೆ ನೀವು ತೆಗೆದುಕೊಳ್ಳಬಹುದು. ಕಾರಣ ಮಹಾತ್ಮಗಾಂಧೀಜಿ ಅವರೇ ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆದಿದ್ದಾರೆ.
ಹೀಗಾಗಿ ಬಾದಾಮಿ ತೆಗೆದುಕೊಳ್ಳಲು ಶಕ್ತರಲ್ಲದವರು ಈ ಬಡವರ ಬಾದಾಮಿ ಕಡಲೆಕಾಯಿಯನ್ನು ತೆಗೆದುಕೊಂಡು ಸೇವಿಸುವುದರಿಂದ ನೀವು ಹೃದ್ರೋಗದ ಅಪಾಯದಿಂದ ಪಾರಾಗಬಹುದು ಎಂದು ತಜ್ಞರು ಕೂಡ ಹೇಳುತ್ತಿದ್ದಾರೆ.
ಇನ್ನು ಬಾದಾಮಿ ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನೋಡುವುದಾದರೆ, “ಬಾದಾಮಿಯಲ್ಲಿ ವಿಟಮಿನ್ ಇ, ಫೈಬರ್, ಮೆಗ್ನೀಸಿಯಮ್ ಮತ್ತು ಏಕಪರ್ಯಾಪ್ತ ಕೊಬ್ಬು ಹೆಚ್ಚಾಗಿ ಇರುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಹೀಗಾಗಿ ಈ ಪೋಷಕಾಂಶಗಳ ಹೊಂದಿರುವ ಬಾದಾಮಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಬಾದಾಮಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಮೀರುವುದಿಲ್ಲ. ಅಂದರೆ, ಬಾದಾಮಿ ಕಡಿಮೆ ಕೊಬ್ಬಿನ ಆಹಾರವಲ್ಲ, ಆದರೆ ಅದನ್ನು ತಿನ್ನುವುದು ನಿಜಕ್ಕೂ ಒಳ್ಳೆಯದು. 28 ಗ್ರಾಂ ಬಾದಾಮಿ ಸುಮಾರು 14 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ, ಆದರೂ ಇದು ಹೆಚ್ಚಾಗಿ ಹೃದಯಕ್ಕೆ ಆರೋಗ್ಯಕರವಾದ ಕೊಲೆಸ್ಟ್ರಾಲ್ ಆಗಿರುತ್ತದೆ ಎಂದು ಆಹಾರತಜ್ಞರು ಹೇಳುತ್ತಾರೆ.
ಅಪರ್ಯಾಪ್ತ ಕೊಬ್ಬು (Unsaturated Fat) ಎಂದರೇನು? ಇದು ದೇಹಕ್ಕೆ ಆರೋಗ್ಯಕರ ಕೊಬ್ಬು. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ, ಅಲ್ಲಿ ಆರೋಗ್ಯಕರ ಕೊಬ್ಬನ್ನು ಒದಗಿಸುವ ಸಾಮರ್ಥ್ಯವನ್ನು ಈ ಬಾದಾಮಿ ಹೊಂದಿದೆ.
ಅಷ್ಟೇ ಅಲ್ಲ ಈ ಬಾದಾಮಿಯಿಂದ ಕೆಟ್ಟ ಬೇಡದ ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಬಾದಾಮಿಯ ಅಪರ್ಯಾಪ್ತ ಕೊಬ್ಬುಗಳು, ಫೈಬರ್ ಮತ್ತು ಸಸ್ಯ ಸಂಯುಕ್ತಗಳ ಸಂಯೋಜನೆಯು ಆರೋಗ್ಯಕರ HDL (“ಒಳ್ಳೆಯ”) ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಂಡು LDL (“ಕೆಟ್ಟ”) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಒಟ್ಟಾರೆ ಕಡಲೆಕಾಯಿ ಮತ್ತು ಬಾದಾಮಿಯಲ್ಲಿರುವ “ನಾರಿನಾಂಶ ದೇಹದಿಂದ ಕೊಲೆಸ್ಟ್ರಾಲ್ ಅನ್ನು ಶೋಧಿಸಿ ತೆಗೆದುಹಾಕಲು ಸಹಾಯ ಮಾಡುತ್ತದೆ, ಕೊಲೆಸ್ಟ್ರಾಲ್ ನಿರ್ವಹಣೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಇವು ಕಾಪಾಡಿಕೊಳ್ಳಲು ಉತ್ತಮ ತಿನಿಸುಗಳು ಅಥವಾ ಬೀಜಗಳಾಗಿವೆ ಎಂದು ಎಂಎಸ್, ಆರ್ಡಿ, ಸಿಎಸ್ಎಸ್ಡಿ ವೈದ್ಯರೇ ಹೇಳುತ್ತಾರೆ.
ಇನ್ನೇಕೆ ತಡ ಹೃದ್ರೋಗದಿಂದ ಪಾರಾಗಲು ಪ್ರತಿಯೊಬ್ಬರು ತಮ್ಮ ಕೈಗೆಟುಕಬಹುದಾದವುಗಳನ್ನು ತೆಗೆದುಕೊಂಡು ತಿನ್ನುವ ಅಭ್ಯಾಸವನ್ನು ಇಂದಿನಿಂದಲೇ ರೂಡಿ ಮಾಡಿಕೊಳ್ಳಿ. ಈ ಮೂಲಕ ಎಲ್ಲರೂ ಆರೋಗ್ಯಕರ ಹೃದಯ ಹೊಂದುವ ಜತೆಗೆ ಕುಟುಂಬದೊಂದಿಗಿ ಉಲ್ಲಾಸದ ಜೀವನ ಸಾಗಿಸಿ.. ಶುಭವಾಗಲಿ
Related









