BMTC: ಜೂನ್ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್ ಖಾತೆ ವಿವರ ಸಲ್ಲಿಸಿ
ಸಂಸ್ಥೆಯಲ್ಲಿ ಸೇವಾವಿಮುಕ್ತಿಗೊಂಡ ಸಿಬ್ಬಂದಿಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲು ಎಲ್ಲ ಸೇವಾ ವಿಮುಕ್ತಿ (ನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ, ವಜಾ, ನಿಧನ) ಸಿಬ್ಬಂದಿಗಳನ್ನು ಸಂಪರ್ಕಿಸಿ ಅವರ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರಗಳ ನಕಲು ಪ್ರತಿಯನ್ನು ಪಡೆದುಕೊಂಡು (ನಿಧನ ಪ್ರಕರಣಗಳಲ್ಲಿ ನಾಮನಿರ್ದೇಶಿತರ ಪಾಸ್ ಪುಸ್ತಕದ ಪ್ರತಿಯನ್ನು ಪಡೆದುಕೊಳ್ಳುವುದು) ಈ ಆರ್.ಟಿ.ಜಿ.ಎಸ್ ನಮೂನೆಯಲ್ಲಿ ಭರ್ತಿ ಮಾಡಿ ದೃಡೀಕರಿಸಿ 18.06.2026 ರೊಳಗೆ ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಿದೆ.

ಬೆಂಗಳೂರು: ಸೇವಾ ವಿಮುಕ್ತಿ ಸಿಬ್ಬಂದಿಗಳು ಏಪ್ರಿಲ್-2018 ರಿಂದ ಜುಲೈ-2018ರವರೆಗಿನ ಮೂಲ ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆಯ ಹಿಂಬಾಕಿ ಮೊತ್ತವನ್ನು ಪಡೆಯುವುದಕ್ಕೆ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲುಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೂಚನೆ ಹೊರಡಿಸಿದೆ.
ಇಂದು ಆದೇಶ ಹೊರಡಿಸಿರುವ ನಿಗಮದ ಮುಖ್ಯಲೆಕ್ಕಾಧಿಕಾರಿ 01.07.2017 ರಲ್ಲಿದ್ದ ಶೇ.45.25 ರಷ್ಟು ತುಟ್ಟಿಭತ್ಯೆಯನ್ನು 01.04.2018ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರಾಗಿರುವಂತೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳಲು ಸುತ್ತೋಲೆಗಳನ್ನು ಹೊರಡಿಸಲಾಗಿದ್ದು, ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ ಹಿಂಬಾಕಿ ಮೊತ್ತಗಳ ಪಾವತಿಯ ಬಗ್ಗೆ ಆದೇಶಿಸಿದೆ.
ಈ ಮೊತ್ತವನ್ನು ಮುಂದುವರಿದಂತೆ, ಸಂಸ್ಥೆಯಲ್ಲಿ ಸೇವಾವಿಮುಕ್ತಿಗೊಂಡ ಸಿಬ್ಬಂದಿಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲು ಎಲ್ಲ ಸೇವಾ ವಿಮುಕ್ತಿ (ನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ, ವಜಾ, ನಿಧನ) ಸಿಬ್ಬಂದಿಗಳನ್ನು ಸಂಪರ್ಕಿಸಿ ಅವರ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರಗಳ ನಕಲು ಪ್ರತಿಯನ್ನು ಪಡೆದುಕೊಂಡು (ನಿಧನ ಪ್ರಕರಣಗಳಲ್ಲಿ ನಾಮನಿರ್ದೇಶಿತರ ಪಾಸ್ ಪುಸ್ತಕದ ಪ್ರತಿಯನ್ನು ಪಡೆದುಕೊಳ್ಳುವುದು) ಈ ಆರ್.ಟಿ.ಜಿ.ಎಸ್ ನಮೂನೆಯಲ್ಲಿ ಭರ್ತಿ ಮಾಡಿ ದೃಡೀಕರಿಸಿ 18.06.2026 ರೊಳಗೆ ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಿದೆ.
ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಕೂಡಲೇ ಮಾಹಿತಿಯನ್ನು ಕಲೆಹಾಕಿ ನಿಗದಿತ ನಮೂನೆಯಲ್ಲಿ ಆರ್.ಟಿ.ಜಿ.ಎಸ್ ಪಟ್ಟಿಯನ್ನು ತಯಾರಿಸಿ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಕೇಂದ್ರ ಕಚೇರಿಯ ಲೆಕ್ಕಪತ್ರ ಇಲಾಖೆಗೆ ಸಲ್ಲಿಸಲು ಈ ಮೂಲಕ ಆದೇಶಿಸಲಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.
Related









