ಇಂದಿನಿಂದ KSRTC ಬಸ್‌ನಲ್ಲಿ ಯಾವುದೇ ವಿಶೇಷ ಕಾರ್ಡ್ ಇಲ್ಲದೆ ಮಹಿಳೆಯರ ಮುಕ್ತ ಪ್ರಯಾಣಕ್ಕೆ ಅವಕಾಶ- “ಪ್ರಿಯದರ್ಶಿನಿ ಯೋಜನೆ”ಗೆ ಚಾಲನೆ ನೀಡಿದ ಸಿಎಂ ಹೇಳಿಕೆ
ಕೇರಳ ಮಹಿಳೆಯರು, ತೃತೀಯ ಲಿಂಗಿಗಳಿಗೆ ಕೆಎಸ್‌ಆರ್‌ಟಿಸಿಯ 3,125 ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮುಕ್ತ ಅವಕಾಶ ನೀಡಲಾಗಿದೆ. ಇಂದಿನಿಂದ ಸರ್ಕಾರಿ ಬಸ್ ಸೇವೆಯ ಸೌಲಭ್ಯ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ವಿ.ಡಿ.ಸತೀಶನ್ ಕರೆ ನೀಡಿದರು.

ತಿರುವನಂತಪುರಂ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವುದು ಮಹಿಳೆಯರಿಗೆ “ದಾನವಾಗಿ ನೀಡುತ್ತಿರುವುದಲ್ಲ ಅದು ಸರ್ಕಾರ ಅವರಿಗೆ ಕೊಡುತ್ತಿರುವ ಹಕ್ಕು” ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದು, ಪ್ರತಿಯೊಬ್ಬ ಹೆಂಗಳೆಯರು ನಮ್ಮ ಸರ್ಕಾರಿ ಬಸ್‌ನಲ್ಲಿ ಯಾವುದೇ ಯಾವುದೇ ವಿಶೇಷ ಕಾರ್ಡ್‌ಗಳು ಅಥವಾ ಟಿಕೆಟ್‌ಗಳ ಅಗತ್ಯವಿಲ್ಲ ಹೆಮ್ಮೆಯಿಂದ ಪ್ರಯಾಣಿ ಎಂದು ಕರೆ ನೀಡಿದ್ದಾರೆ.
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಇಂದಿನಿಂದ ಅಂದರೆ ಜೂನ್ 15ರ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ಗಳಿಗೆ ಉಚಿತ ಪ್ರಯಾಣ ಕಲ್ಪಿಸಲಾಗುವ “ಪ್ರಿಯದರ್ಶಿನಿ ಯೋಜನೆ”ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಸತೀಶನ್ ದೀಪ ಬೆಳಗಿಸಿಚಾಲನೆ ನೀಡಿದ ಬಳಿಕ ಮಾತನಾಡಿದರು.
110 ವರ್ಷಗಳ ಹಿಂದೆ ಶ್ರೀ ಚಿತ್ತಿರ ತಿರುನಾಳ್ ಅವರು ಇಲ್ಲಿಂದಲೇ ಮೊದಲ ಸಾರಿಗೆ ಬಸ್ ಸೇವೆಗೆ ಚಾಲನೆ ನೀಡಿದರು. 1965 ರಲ್ಲಿ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಜನತಾ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಇತಿಹಾಸದ ಈ ಮಹತ್ವದ ಘಟ್ಟದಲ್ಲಿ ನಮ್ಮ ಸರ್ಕಾರವು ಮಹಿಳೆಯರಿಗಾಗಿ “ಪ್ರಿಯದರ್ಶಿನಿ ಯೋಜನೆ”ಯನ್ನು ಜಾರಿಗೆ ತಂದಿದೆ ಅದೂ ಕೂಡ ನಮ್ಮ ರಾಜ್ಯದಲ್ಲಿ ಇಂದಿರಾ ಗ್ಯಾರಂಟಿ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಮೊದಲದಿನ ಇಲ್ಲಿಂದಲೇ ಆರಂಭವಾಗುತ್ತಿದ್ದು, ಇದು ಮರೆಯ ಕ್ಷಣ ಎಂದು ಹೇಳಿದರು.
ಈ ಯೋಜನೆಯು ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ ಅದನ್ನು ನಿಭಾಯಿಸಲು ನಮ್ಮ ಸರ್ಕಾರ ಶಕ್ತವಾಗಿದೆ. ಹೀಗಾಗಿ ಈ ಉಚಿತ ಬಸ್ ಸೇವೆಯನ್ನು “ಮಹಿಳೆಯರಿಗಾಗಿ ಮಾಡುವ ದಾನವೆಂದು ನಾನು ನೋಡುವುದಿಲ್ಲ. ಈ ಯೋಜನೆಯು ಮಹಿಳೆಯರಿಗೆ ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುತ್ತದೆ ಎಂದು ನಾನು ನಂಬುತ್ತೇನೆ. ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ಯಾವುದೇ ವಿಶೇಷ ಕಾರ್ಡ್ ತೋರಿಸದೆ ಅಥವಾ ಟಿಕೆಟ್ ಪಡೆಯದೇ ಹೆಮ್ಮೆಯಿಂದ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ವಾರ್ಷಿಕವಾಗಿ ಸುಮಾರು 7800 ಕೋಟಿ ರೂ. ಖರ್ಚು: “ಈ ಯೋಜನೆಗಾಗಿ ಸರ್ಕಾರ ವಾರ್ಷಿಕವಾಗಿ ಸುಮಾರು 7800 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ನಿಗಮದ ಆದಾಯವನ್ನು ಹೆಚ್ಚಿಸುವಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾವು ನಂಬಿದ್ದೇವೆ. ಇತ್ತ ಈ ಸೇವೆ ನೀಡುತ್ತಿರುವುದರಿಂದ ಖಾಸಗಿ ಬಸ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ, ಆದರೆ ಅವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವೂ ಹೌದು.
ಸರ್ಕಾರಿ ಬಸ್‌ಗಳು ಕಾರ್ಯನಿರ್ವಹಿಸದ ಅನೇಕ ಪ್ರದೇಶಗಳಲ್ಲಿ ಜನರು ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕಾರ್ಯವಿಧಾನಗಳನ್ನು ಪರಿಚಯಿಸುತ್ತದೆ. ಯಾವುದೇ ವಲಯವು ಕುಸಿಯಬಾರದು ಮತ್ತು ತೊಂದರೆಗಳನ್ನು ಎದುರಿಸುತ್ತಿರುವ ವಲಯಗಳನ್ನು ಬೆಂಬಲಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇನ್ನು ಪ್ರಿಯದರ್ಶಿನಿ ಯೋಜನೆಯು ಕೇರಳದ ಮಹಿಳೆಯರಿಗೆ ಸರ್ಕಾರದಿಂದ ನೀಡುತ್ತಿರುವ ಗೌರವದ ಸಂಕೇತವಾಗಿದೆ. ನಾವು ಮೊದಲು ಮಹಿಳೆಯರ ಗೌರವಿಸುವುದನ್ನು ಕಲಿಯಬೇಕು ಎಂಬ ಸಂದೇಶವೂ ಆಗಿದೆ. ಗಮನಾರ್ಹವಾಗಿ, ಪ್ರಿಯದರ್ಶಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಆದೇಶಕ್ಕೆ ಮಹಿಳಾ ಕಾರ್ಯದರ್ಶಿಯೊಬ್ಬರು ಸಹಿ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯವು ಪ್ರಸ್ತುತ 3,125 ಸಾಮಾನ್ಯ ಬಸ್‌ಗಳನ್ನು ಹೊಂದಿದ್ದು, ಇವೆಲ್ಲವೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಈ ಪ್ರಯೋಜನವು ಗ್ರಾಮೀಣ ಸಾರಿಗೆ ಭಾಗಗಳಿಗೂ ವಿಸ್ತರಿಸಲಿದೆ ಎಂದು ಹೇಳಿದರು.
ಕೇರಳ ಸಾರಿಗೆ ಸಚಿವ ಸಿ.ಪಿ. ಜಾನ್, ಈ ಯೋಜನೆಯು ಎಲ್ಲ ಮಹಿಳೆಯರನ್ನು ಒಳಗೊಳ್ಳುತ್ತದೆ, ಯಾವುದೇ ವಿಶೇಷ ಕಾರ್ಡ್‌ಗಳು ಅಥವಾ ಟಿಕೆಟ್‌ಗಳ ಅಗತ್ಯವಿಲ್ಲ ಮತ್ತು ಇದು ಕೆಎಸ್‌ಆರ್‌ಟಿಸಿಯ ಎಲ್ಲ ಸಾಮಾನ್ಯ ಬಸ್‌ಗಳಲ್ಲಿ ಮುಖ್ತವಾಗಿ ಮಹಿಳೆಯರು ಪ್ರಯಾಣಿಸಬಹುದು ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಲು ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಯಾವುದೇ ವಿಶೇಷ ಕಾರ್ಡ್ ಗಳು ಅಥವಾ ಪ್ರಮಾಣಪತ್ರಗಳ ಅಗತ್ಯವಿಲ್ಲ ಹೀಗಾಗಿ ಎಲ್ಲ ಮಹಿಳೆಯರು ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದರು.
Related









