NEWSನಮ್ಮಜಿಲ್ಲೆ

BMTC: ದೈಹಿಕವಾಗಿ ಫಿಟ್‌ ಇದ್ದರೂ ಲಘುಡ್ಯೂಟಿ ಮಾಡುತ್ತಿರುವ ನೌಕರರ ಸಂಘಟನೆಯ ಮುಖಂಡ- ಕಂಡು ಕಾಣದಂತೆ ಮೌನವಾಗಿರುವ ಅಧಿಕಾರಿಗಳು

ನಾನು ನೌಕರರ ಪರವಾಗಿದ್ದೇನೆ ಎಂದು ಉದ್ದುದ್ದ ಭಾಷಣಗಳನ್ನು ಬಿಗಿಯುವ ಈತ ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ಸೇವಾ ಹಿರಿತನದ ಮೇಲೆ ಮಾಡಬೇಕಿರುವ ಲಘು ಡ್ಯೂಟಿಯನ್ನು ಮಾಡುತ್ತಿದ್ದಾನಲ್ಲ ನಾಚಿಕೆ ಆಗುವುದಿಲ್ವಾ? ನಾನು ಸಾಚಾ ಉಳಿದವರು ಭ್ರಷ್ಟರು ಎಂದು ಹೇಳಿಕೊಳ್ಳುತ್ತಾನೆ. ಅಂದರೆ ಈಗ ಮಾಡುತ್ತಿರುವುದು ಏನು? ಬೇರೆಯವರು ಮಾಡುವ ಡ್ಯೂಟಿ ಕಸಿಯೋ ಕೆಲ.  ಇದು ಸುಮಾರು 6 ತಿಂಗಳುಗಳಿಂದ ಮಾಡುತ್ತಿದ್ದಾನೆ. ಇದು ಸಂಸ್ಥೆಯ ನಿಯಮಾವಳಿಗೆ ವಿರುದ್ಧವಾದುದಲ್ಲವೇ? ಇವನೊಬ್ಬ ಸಾರಿಗೆ ನೌಕರರ ಮುಖಂಡನಂತೆ...

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 21ನೇ ಘಟಕದಲ್ಲಿ ಚಾಲಕನಾಗಿ ಡ್ಯೂಟಿ ಮಾಡುತ್ತಿರುವ ಡಿ.ರಾಮು ಎಂಬಾತ ದೈಹಿಕವಾಗಿ ಫಿಟ್‌ ಆಗಿದ್ದರೂ ಕೂಡ ಡಿಪೋಸ್ಪೇರ್‌ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈತ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಒಬ್ಬ ಪದಾಧಿಕಾರಿಯಾಗಿದ್ದೇನೆ ಎಂಬ ಅಹಂನಿಂದ ಸಂಸ್ಥೆಯ ನಿಯಮವನ್ನೇ ಗಾಳಿ ತೂರಿ ಅಧಿಕಾರಿಗಳನ್ನು ಹೆದುರಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಸೇವಾ ಹಿರಿತನ ಚಾಲಕರು ಮಾಡುವಂಥ ಡಿಪೋಸ್ಪೇರ್‌ ಡ್ಯೂಟಿ ಮಾಡುತ್ತಿದ್ದಾನೆ. ಇದು ಇಲ್ಲ ಎಂದರೆ ನೈಟ್‌ ಫಿಲಿಂಗ್‌ (ಡಿಪೋದಲ್ಲಿರುವ ಬಸ್‌ಗಳಿಗೆ ರಾತ್ರಿ ಡೀಸೆಲ್‌ ಹಾಕಿಸುವ ಕೆಲಸ) ಮಾಡಿಕೊಂಡು ನಾನು ಡ್ಯೂಟಿ ಮಾಡುತ್ತಿದ್ದೇನೆ ಎಂದು ತಿಂಗಳ ಸಂಬಳ ಎಣಿಸಿಕೊಳ್ಳುತ್ತಿದ್ದಾನೆ.

ಈತ ಒಬ್ಬ ಕೋ-ವರ್ಕರ್‌ ಆಗಿದ್ದು, ಇದೇ ನೆಪ ಹೇಳಿಕೊಂಡು ಸಂಸ್ಥೆಯ ನಿಯಮವನ್ನೇ ಗಾಳಿಗೆ ತೂರಿ ತಿಂಗಳಲ್ಲಿ ತನಗೆ ಟೈಮ್‌ ಸಿಕ್ಕ ಸಮಯದಲ್ಲಿ ಬಂದು ಡಿಪೋಸ್ಪೇರ್‌ ಅಥವಾ ನೈಟ್‌ಫಿಲಿಂಗ್‌ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಈತ ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ಹಿರಿಯ ಚಾಲಕರಿಗೆ ಸಿಗಬೇಕಾದ ಲಘು ಡ್ಯೂಟಿಯನ್ನು ಕಸಿದುಕೊಂಡಿದ್ದಾನೆ.

ಸಂಸ್ಥೆಯ ನಿಯಮಾವಳಿ ಪ್ರಕಾರ ಒಬ್ಬ ಕೋ-ವರ್ಕರ್‌ ಆದವರು ಕನಿಷ್ಠ 10ದಿನಗಳು (ವಾರದ ರಜೆ ಇನ್ನಿತರೆ ರಜೆಗಳನ್ನು ಹೊರತುಪಡಿಸಿ) ಮಾರ್ಗದ ಮೇಲೆ ಡ್ಯೂಟಿ ಮಾಡಬೇಕು. ಆದರೆ, ಈತ ಡಿಪೋ 21ಕ್ಕೆ ಬಂದು ಕೋ-ವರ್ಕರ್‌ ಆದಾಗಿನಿಂದ ಸರಿಯಾಗಿ ಮಾರ್ಗದ ಮೇಲೆ ಡ್ಯೂಟಿ ಮಾಡುತ್ತಿಲ್ಲ. ಇನ್ನು ಕೌನ್ಸೆಲಿಂಗ್‌ ಆದ ಬಳಿಕವಂತು ಮಾರ್ಗದ ಮೇಲೆ ಡ್ಯೂಟಿಯನ್ನೇ ಮಾಡದೆ ಸಂಸ್ಥೆಯ ನಿಯಮವನ್ನೇ ಗಾಳಿಗೆ ತೂರಿದ್ದಾನೆ ಎಂದು  ತಿಳಿದು ಬಂದಿದೆ.

ಇನ್ನು ನಾನು ಒಬ್ಬ ಸಾರಿಗೆ ನೌಕರರ ಮುಖಂಡ ಎಂದು ಅಹಂಕಾರದಿಂದ ವರ್ತಿಸುವ ಈತ ಇತರರಿಗೆ ಮಾದರಿಯಾಗುವುದನ್ನು ಬಿಟ್ಟು ಅಂದರೆ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಸೇವಾಹಿರಿತನದ ನೌಕರರು ಡ್ಯೂಟಿ ಮಾಡುವುದಕ್ಕೆ ಅವಕಾಶ ಕೊಡುವುದನ್ನು ಬಿಟ್ಟು ಅವರ ಕೆಲಸವನ್ನು ಈತ ಮಾಡುತ್ತಿರುವುದು ಒಬ್ಬ ಮುಖಂಡನೆಸಿನಿಕೊಳ್ಳುವವನಿಗೆ ಶೋಭೆ ತರುತ್ತದೆಯೇ?

ಅಲ್ಲದೆ ಈತ ಡಿಪೋಸ್ಪೇರ್‌ ಮಾಡುವುದಕ್ಕೆ ಕೇಂದ್ರ ಕಚೇರಿಯಿಂದ ಅಥವಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಆದೇಶ ಮಾಡಿಸಿಕೊಂಡು ಆ ಆದೇಶದ ಪ್ರತಿಯನ್ನು ಡಿಪೋ ವ್ಯವಸ್ಥಾಪಕರಿಗೆ ಕೊಟ್ಟು ಆ ಬಳಿಕ ಡಿಪೋಸ್ಪೇರ್‌ ಮಾಡಬೇಕು. ಆದರೆ, ಈ ಯಾವುದೇ ಆದೇಶವಿಲ್ಲದೆ ಈತ ಡಿಪೋಸ್ಪೇರ್‌ ಡ್ಯೂಟಿ ಹೇಗೆ ಮಾಡುತ್ತಿದ್ದಾನೆ. ಇದಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಸಂಸ್ಥೆಯ ನಿಯಮದಲ್ಲಿ ಸಡಿಲಿಕೆ ಇದೆಯೇ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.

ಅಲ್ಲದೆ, ಈತ ತನ್ನ ಡ್ಯೂಟಿಯನ್ನು ಮಾಡದೆ ಅಂದರೆ ಕೋ-ವರ್ಕರ್‌ ಜತೆಗೆ ಸಂಸ್ಥೆಯ ನಿಯಮದಂತೆ ಕನಿಷ್ಠ 10ದಿನಗಳು ಮಾರ್ಗದಲ್ಲಿ ಡ್ಯೂಟಿ ಮಾಡದೆ ಈ ರೀತಿ ಡಿಪೋಸ್ಪೇರ್‌ ಮಾಡಿಕೊಂಡು ಇರುವುದರಿಂದ ಈತನ ಮೇಲೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿರುವ ಆದೇಶದಂತೆ ನಿರ್ದೇಶನಗಳನ್ನು ಪಾಲಿಸದೆ ಲೋಪ-ದೋಷಗಳನ್ನು ಎಸಗುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿ, ಇದನ್ನು ದರ್ನಡತೆ ಎಂದು ತೀರ್ಮಾನಿಸಿ ಮುಂದಿನ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನೌಕರರು ಒತ್ತಾಯಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ ಜೂನ್, 21ರಂದು ವಿಶ್ವ ಯೋಗ ದಿನ ಆಚರಿಸೋಣ ಬನ್ನಿ ಡಿಸಿ ಡಾ.ಅನುರಾಧ ಕರೆ ಇ-ಖಾತಾ ತಿದ್ದುಪಡಿ ಜವಾಬ್ದಾರಿ ಉಪ ಆಯುಕ್ತರಿಗೆ ಕೊಡಿ: ಮಹೇಶ್ವರ್ ರಾವ್ ವಿದ್ಯುತ್ ಖಾಸಗೀಕರಣ ನಿಲ್ಲಿಸಿ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಗ್ರಹ