NEWSಶಿಕ್ಷಣ

ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದೀತೆ!

ಇದು ಎಲ್ಲರ ಕಣ್ಣಂಚಲ್ಲಿ  ಆನಂದಬಾಷ್ಪದ ಜತೆಗೆ ಶಾಲಾ ಪ್ರಾಂಶುಪಾಲರ ಮಾನವೀಯತೆಗೆ ಯಾವರೀತಿಯ ಗೌರವ  ಸಲ್ಲಿಸಬೇಕು ಎಂಬುವುದು ತೋಚದ ಸಮಯವದು. 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆ ವಿದ್ಯಾರ್ಥಿನಿ ಓದಿನಲ್ಲಿ ಪ್ರತಿಭಾವಂತಳಾಗಿದ್ದು, ಉತ್ತಮ ಶಿಕ್ಷಣ ಪಡೆದು ಕುಟುಂಬದ ಬಡತನವನ್ನು ದೂರ ಮಾಡುವ ಕನಸು ಕಾಣುತ್ತಿರುವವಳು. ಆದರೆ, ಮನೆಯ ಆರ್ಥಿಕ ಸಂಕಷ್ಟದಿಂದಾಗಿ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗದೆ ತನ್ನ ತಂದೆ-ತಾಯಿಜತೆ ಹೊಲದಲ್ಲಿ ಕೋಲಿ ಕೆಲಸ ಮಾಡುತ್ತಿದ್ದಾಳೆ.

ಹೌದು! ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗದೆ ಕಳೆದ 15 ದಿನಗಳಿಂದ ಆಕೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ಆಕೆ, ಕುಟುಂಬದ ಜೀವನ ಸಾಗಿಸಲು ತನ್ನ ಪಾಲಕರೊಂದಿಗೆ ಹೊಲದಲ್ಲಿ ಕೂಲಿ ಕೆಲಸ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾಳೆ.

ಈ ನಡುವೆ ಓದಿನಲ್ಲಿ ಪ್ರತಿಭಾವಂತಳಾಗಿರುವ ತನ್ನ ವಿದ್ಯಾರ್ಥಿನಿ ಶಾಲೆಗೆ ಏಕೆ ಬರುತ್ತಿಲ್ಲ ಎಂದು ಕೇಳಿ ಆ ವಿಷಯವನ್ನು ಅಲ್ಲಿಗೆ ಬಿಡಬಹುದಿತ್ತು. ಆದರೆ, ಅದನ್ನು ಗಂಬೀರವಾಗಿ ತೆಗೆದುಕೊಂಡ ಶಾಲೆಯ ಪ್ರಾಂಶುಪಾಲರು, ಆಕೆಯನ್ನು ಹುಡುಕುತ್ತಾ ನೇರವಾಗಿ ಹೊಲಕ್ಕೆ ತೆರಳಿದರು. ಅಲ್ಲೇ ಆಕೆಗೆ ಧೈರ್ಯ ತುಂಬಿ, ಶಾಲಾ ಶುಲ್ಕವನ್ನು ತಾವೇ ಭರಿಸುವುದಾಗಿ ಹೇಳಿ, ಮತ್ತೆ ಶಾಲೆಗೆ ಕರೆತಂದರು.

ಇದು ಎಲ್ಲರ ಕಣ್ಣಂಚಲ್ಲಿ  ಆನಂದಬಾಷ್ಪದ ಜತೆಗೆ ಶಾಲಾ ಪ್ರಾಂಶುಪಾಲರ ಮಾನವೀಯತೆಗೆ ಯಾವರೀತಿಯ ಗೌರವ  ಸಲ್ಲಿಸಬೇಕು ಎಂಬುವುದು ತೋಚದ ಸಮಯವದು.  ಈ ವಿದ್ಯಾರ್ಥಿನಿ ಓದಿನಲ್ಲಿ ಪ್ರತಿಭಾವಂತಳಾಗಿದ್ದಳು. ಉತ್ತಮ ಶಿಕ್ಷಣ ಪಡೆದು, ಕುಟುಂಬದ ಬಡತನವನ್ನು ದೂರ ಮಾಡುವ ಕನಸು ಕಾಣುತ್ತಿರುವಾಕೆ. ಆದರೆ ಆ ಕನಸ್ಸಿಗೆ ಮನೆಯ ಆರ್ಥಿಕ ಸಂಕಷ್ಟ ಅಡ್ಡಿಯಾಗುತ್ತಿದೆ. ಅದರಿಂದಾಗಿ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗಲಿಲ್ಲ. ಶಾಲೆಯಲ್ಲಿ ಎಲ್ಲರ ಮುಂದೆ ಅವಮಾನವಾಗಬಹುದೆಂಬ ಭಯವೂ ಆಕೆಯನ್ನು ಕಾಡಿದ್ದರಿಂದ ಶಾಲೆಯನ್ನೇ ತೊರೆಯುವ ಮನಸ್ಸು ಮಾಡಿಬಿಟ್ಟಳು.

ಪರಿಣಾಮ ಆಕೆ 15 ದಿನಗಳಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿ, ಹೊಲದಲ್ಲಿ ದುಡಿಯಲು ಆರಂಭಿಸಿದ್ದಳು. ಕೈಯಲ್ಲಿ ಪುಸ್ತಕ ಮತ್ತು ಪೆನ್ನು ಹಿಡಿಯಬೇಕಾದ ವಯಸ್ಸಿನಲ್ಲಿ, ಆಕೆ ಭೂತಾಯಿಯ ಮೊರೆಹೋಗಿ ದುಡಿಯುತ್ತಿದ್ದಳು.

ವಿಷಯ ತಿಳಿದು ತನ್ನ ವಿದ್ಯಾರ್ಥಿನಿಯನ್ನು ಹುಡುಕುತ್ತಾ ಹೊಲಕ್ಕೆ ಬಂದ ಪ್ರಾಂಶುಪಾಲರು ಶಾಲಾ ಶುಲ್ಕ ಭರಿಸಿ ಮತ್ತೆ ಶಾಲೆಗೆ ಕರೆತಂದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಮನಮುಟ್ಟಿದೆ.

ಇಂದಿನ ದಿನಗಳಲ್ಲಿ ಶಿಕ್ಷಣವೂ ವ್ಯಾಪಾರೀಕರಣದತ್ತ ಸಾಗುತ್ತಿರುವ ಸಂದರ್ಭದಲ್ಲಿ, ಈ ಪ್ರಾಂಶುಪಾಲರ ಕಾರ್ಯ ಎಲ್ಲ ಶಿಕ್ಷಕರಿಗೂ ಮಾದರಿಯಾಗಿದೆ. ಜತೆಗೆ ಶಿಕ್ಷಕರು ಕೇವಲ ಅಂಕಗಳನ್ನು ನೀಡುವವರಲ್ಲ, ಸಂಕಷ್ಟದಲ್ಲಿರುವ ತನ್ನ ವಿದ್ಯಾರ್ಥಿಗಳಿಗೆ ಪಾಲಕರಾಗಿಯೂ ಮಾರ್ಗದರ್ಶನ ನೀಡುವ ನಿಜವಾದ ಗುರುಗಳು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

ಬಡತನದ ಕಾರಣದಿಂದ ಯಾವುದೇ ಮಗುವಿನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಅವರ ಕಾಳಜಿ ನಿಜಕ್ಕೂ ಶ್ಲಾಘನೀಯ. ಈ ಘಟನೆ ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಸಮಾಜದಲ್ಲಿ ಇಂತಹ ಮಾನವೀಯತೆ ಹೊಂದಿರುವ ಶಿಕ್ಷಕರು ಮತ್ತು ಅಧಿಕಾರಿಗಳಿರುವುದರಿಂದಲೇ ಅನೇಕ ಬಡ ಮಕ್ಕಳ ಬದುಕಿನಲ್ಲಿ ಆಶಾಕಿರಣ ಬೆಳಗುತ್ತಿದೆ.

ತನ್ನ ವಿದ್ಯಾರ್ಥಿನಿಯ ಕಣ್ಣೀರು ಒರೆಸಿ, ಆಕೆಯ ಶಿಕ್ಷಣದ ಕನಸಿಗೆ ಹೊಸ ಜೀವ ತುಂಬಿದ ಈ ಪ್ರಾಂಶುಪಾಲರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಂತಹ ಪ್ರೇರಣಾದಾಯಕ ಸತ್ಯ ಸಂಗತಿಗಳು ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ. ಇನ್ನು ಇದು ಶಿವಮೊಗ್ಗದಲ್ಲಿ ಶಿಕ್ಷಕರೊಬ್ಬರು ಮಾಡಿದ ಸಹಾಯಕ್ಕೆ ಅವರು ನಿವೃತ್ತರಾದಾಗ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿ ಅವರಿಂದ ಆಶೀರ್ವಾದ ಪಡೆದ ಶಿಷ್ಯನ ನೆನಪು ಇಲ್ಲಿ ಬಾರದೆ ಇರದು. ಆಲ್‌ ದಿ ಬೆಸ್ಟ್‌ ಕಂದ ಒಳ್ಳೆ ವಿದ್ಯೆಪಡೆದು ನಿನ್ನ ಪ್ರಾಂಶುಪಾಲರ ಹೆಸರನ್ನು ಉಳಿಸು.

Deva
the authorDeva

Leave a Reply

error: Content is protected !!
Latest news
BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ ಜೂನ್, 21ರಂದು ವಿಶ್ವ ಯೋಗ ದಿನ ಆಚರಿಸೋಣ ಬನ್ನಿ ಡಿಸಿ ಡಾ.ಅನುರಾಧ ಕರೆ ಇ-ಖಾತಾ ತಿದ್ದುಪಡಿ ಜವಾಬ್ದಾರಿ ಉಪ ಆಯುಕ್ತರಿಗೆ ಕೊಡಿ: ಮಹೇಶ್ವರ್ ರಾವ್ ವಿದ್ಯುತ್ ಖಾಸಗೀಕರಣ ನಿಲ್ಲಿಸಿ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಗ್ರಹ BMTC: ದೈಹಿಕವಾಗಿ ಫಿಟ್‌ ಇದ್ದರೂ ಲಘುಡ್ಯೂಟಿ ಮಾಡುತ್ತಿರುವ ನೌಕರರ ಸಂಘಟನೆಯ ಮುಖಂಡ- ಕಂಡು ಕಾಣದಂತೆ ಮೌನವಾಗಿರುವ ಅಧಿಕ... ಮೃತ ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆ ಸೇರಿದೆ ಬರೋಬರಿ 79.75 ಕೋಟಿ ರೂ.ಗೂ ಹೆಚ್ಚು ಹಣ