KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್ ಆದೇಶ
ಕೆಎಸ್ಆರ್ಟಿಸಿ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಸಂಘದ 11 ಮಂದಿ ನಿರ್ದೇಶಕರು ಹೈಕೋರ್ಟ್ ಮೊರೆಹೋಗಿದ್ದು, ಈ ಸಂಬಂಧ ಇದೇ ಜೂನ್ 12ರಂದು ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಅರುಣ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾಯಪೀಠ ಈ ಆದೇಶ ನೀಡಿದ್ದು, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬೆಂಗಳೂರು: ಕೆಎಸ್ಆರ್ಟಿಸಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಓಂಕಾರಪ್ಪ ಸಂಘದ ಲಕ್ಷಾಂತರ ರೂಪಾಯಿಯನ್ನು ಅಕ್ರಮವಾಗಿ ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ ಕೈ ಕೋರ್ಟ್ ಈತನ ಸಹಿ ಮಾಡುವ ಅಧಿಕಾರವನ್ನು ರದ್ದುಗೊಳಿಸಿ ತನಿಖೆಗೆ ಆದೇಶಿಸಿದೆ.
ಇನ್ನು ನೌಕರರ ಪತ್ತಿನ ಸಹಕಾರ ಸಂಘದ ಹಣಕಾಸಿನ ವ್ಯವಹಾರಕ್ಕೆ ಅಡ್ಡಿಯಾಗಬಾರದು ಎಂಬ ದೃಷ್ಟಿಯಿಂದ ಸಂಘದ ನಿರ್ದೇಶಕರಾದ ಕೃಷ್ಣ ಹಾಗೂ ಪಿ.ಬಿ.ರಾಘವೇಂದ್ರ ಅವರಿಗೆ ಚೆಕ್ಗಳಿಗೆ ಸಹಿ ಮಾಡುವ ಅಧಿಕಾರವನ್ನು ತಾತ್ಕಾಲಿಕವಾಗಿ ನೀಡಿ ಆದೇಶ ಮಾಡಿದೆ.
ಕೆಎಸ್ಆರ್ಟಿಸಿ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಸಂಘದ 11 ಮಂದಿ ನಿರ್ದೇಶಕರು ಹೈಕೋರ್ಟ್ ಮೊರೆಹೋಗಿದ್ದು, ಈ ಸಂಬಂಧ ಇದೇ ಜೂನ್ 12ರಂದು ಹೈಕೋರ್ಟ್ನ ನ್ಯಾಯಮೂರ್ತಿ ಅರುಣ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾಯಪೀಠ ಈ ಆದೇಶ ನೀಡಿದ್ದು, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಭ್ರಷ್ಟಾಚಾರ ಎಸಗುವುದರಲ್ಲಿ ಓಂಕಾರಪ್ಪ ನಂ.1: ಎಸ್.ಓಂಕಾರಪ್ಪ ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗದಲ್ಲಿ ಒಬ್ಬ ಜೂನಿಯರ್ ಅಸಿಸ್ಟೆಂಟ್ ಕಮ್ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇನ್ನು ಕೆಎಸ್ಆರ್ಟಿಸಿ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಆ ವೇಳೆ ಈತನ ತಂಡ ಹಿಂದಿನ ಆಡಳಿತ ಮಂಡಳಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ, ಭ್ರಷ್ಟಾಚಾರ ಹಾಗೂ 39ಮಂದಿಯ ಅಕ್ರಮ ನೇಮಕಾತಿ ಆಗಿದ್ದು, ಅದನ್ನು ನಾವು ಅಧಿಕಾರಕ್ಕೆ ಬಂದ ಕೂಡಲೇ ಬಯಲಿಗೆಳೆದು ನ್ಯಾಯಯುತವಾಗಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸಂಘದ ಸದಸ್ಯರನ್ನು ನಂಬಿಸಿ ಚುನಾವಣೆಯಲ್ಲೂ ಗೆದ್ದ.
ಇನ್ನು ಆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಗದ್ದುಗೆಯನ್ನು ಏರಿ ಮೂರು ವರ್ಷಗಳಾದರೂ ಹಿಂದಿನ ಆಡಳಿತ ಮಂಡಳಿ ಅವರ ಯಾವುದೇ ಭ್ರಷ್ಟಾಚಾರವನ್ನು ಬಯಲಿಗೆಳೆದಿಲ್ಲ.ಅಲ್ಲದೆ ಸಂಘದ ಸದಸ್ಯರಿಗೆ ಆಗಿರುವ ಆರ್ಥಿಕ ನಷ್ಟವನ್ನು ಸರಿಪಡಿಸುವ ಬಗ್ಗೆ ಯಾವುದೇ ಕ್ರಮವನ್ನಯ ತೆಗೆದುಕೊಳ್ಳದೇ ಈತನೇ ಭ್ರಷ್ಟಾಚಾರಲ್ಲಿ ಮುಗುಳಿಗೆ ಹೋಗಿದ್ದಾನೆ.
ಅಲ್ಲದೆ ಈ ಹಿಂದೆ ಸಂಘದಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ ಈತನೇ ಅವರೊಂದಿಗೆಯೇ ಕೈ ಜೋಡಿಸಿ 39 ಜನರ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸದೆ ಅವರಂತೆಯೇ ಭ್ರಷ್ಟಾಚಾರದಲ್ಲಿ ಮುಂದುವರಿದ್ದಿದ್ದಾನೆ.
ಇನ್ನು ಮುಖ್ಯವಾಗಿ ಹೇಳಬೇಕು ಎಂದರೆ, ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದ ತಕ್ಷಣ ಕೆಎಸ್ಆರ್ಟಿಸಿ ಸಂಸ್ಥೆಯ ಬೆಂಗಳೂರು ವಿಭಾಗಕ್ಕೆ ಡೆಪ್ಯುಟೇಷನ್ ಮೇಲೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ, ಈ ವೇಳೆ 05.08.2025 ರಿಂದ ಜಂಟಿ ಕ್ರಿಯ ಸಮಿತಿಯವರು ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ಈ ಮೊದಲು ಗುರ್ತಿಸಿಕೊಂಡಿದ್ದ ಕೂಟದ ಸಂಘಟನೆಯ ಲೆಟರ್ಹೆಡ್ಅನ್ನು ದುರ್ಬಳಕೆ ಮಾಡಿಕೊಂಡು ನಕಲಿ ಸಹಿ ಮಾಡಿ ಬೆಂಬಲ ಘೋಷಣೆ ಮಾಡಿರುವ ಆಪಾದನೆ ಮೇಲೆ ಈತನ ಡೆಪ್ಯುಟೇಷನ್ ರದ್ದುಗೊಳಿಸಿ ದಾವಣಗೆರೆ ವಿಭಾಗಕ್ಕೇ ಕಳುಹಿಸಲಾಗಿತ್ತು. (ಈ ನಕಲಿ ಸಹಿ ಮಾಡಿದ್ದರ ಬಗ್ಗೆ FIR ಸಹ ಆಗಿದೆ).
ಇನ್ನು ಮತ್ತೆ ದಾವಣಗೆರೆಗೆ ಹೋದ ಈತ ಸುಮಾರು ಎರಡು ತಿಂಗಳು ಸಹ ಅಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ (ಈ ಬಗ್ಗೆ ವಿಜಯಪಥ ಕೂಡ ಎಲ್ಲ ದಾಖಲೆಗಳೊಂದಿಗೆ ಸುದ್ದಿ ಮಾಡಿತ್ತು) ತಮ್ಮ ಹಣಬಲ ಮತ್ತು ಅಧಿಕಾರ ಬಲವನ್ನು ಬಳಸಿಕೊಂಡು ಮತ್ತೆ ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಗೆ ಡೆಪ್ಯುಟೇಷನ್ ಮಾಡಿಸಿಕೊಂಡು ಬಂದ. ಇದಕ್ಕೆ ಕೆಲ ಭ್ರಷ್ಟ ಅಧಿಕಾರಿಗಳು ಈತನಿಗೆ ಸಾಥ್ ನೀಡಿ ಮತ್ತೆ ಬೆಂಗಳೂರಿಗೆ ಕರೆ ತಂದರು ಎಂದರೆ ತಪ್ಪಾಗಲಾರದು.
ಇನ್ನು ಆ ಬಳಿಕ ಮತ್ತೆ ಇತ್ತೀಚೆಗೆ ನಡೆದ ದಾವಣಗೆರೆಯ ವಿಧಾನಸಭೆ ಬೈ ಎಲೆಕ್ಷನ್ ಸಮಯದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಮತ್ತೆ ಸಂಸ್ಥೆಯಿಂದ ಅಮಾನತು ಮಾಡಲಾಗಿದೆ. ಪ್ರಸ್ತುತ ಅಮಾನತು ತೆರವುಗೊಳಿಸಿ ಮತ್ತೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ಕರ್ತವ್ಯಕ್ಕೆ ಮಾಡುವುದಕ್ಕೆ ಭ್ರಷ್ಟ ಮಾರ್ಗವನ್ನು ಅನುಸರಿಸುತ್ತಿದ್ದಾನೆ. ಆದರೆ, ಅಧಿಕಾರಿಗಳು ಈತನ ಪ್ರಯತ್ನಕ್ಕೆ ಸೊಪ್ಪುಹಾಕುತ್ತಿಲ್ಲ. ಹೀಗಾಗಿ ಕೆಲ ರಾಜಕಾರಣಿಗಳ ಕಡೆಯಿಂದ ಲೆಟರ್ಗಳನ್ನು ತಂದು ಅಧಿಕಾರಿಗಳ ಮುಂದೆ ನಿಲ್ಲುತ್ತಿದ್ದಾನೆ. ಆದರೆ ಅಧಿಕಾರಿಗಳು ಮಾತ್ರ ಕಾನೂನು ಮೀರಿ ನಡೆದುಕೊಳ್ಳಲಾಗುವುದಿಲ್ಲ ಎಂದು ಖಡಕ್ಆಗಿ ಹೇಳಿ ಕಳಿಸಿದ್ದಾರಂತೆ.
ಈ ರೀತಿ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾಲು ಸಾಲು ಆರೋಪಗಳನ್ನು ಹೊತ್ತಿರುವ ಈತನ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಕೇಂದ್ರ ಕಚೇರಿಯ ಅಧಿಕಾರಿಗಳು ಈವರೆಗೂ ಕಂಡು ಕಾಣದಂತೆ ಇರುವುದು ನೋಡಿದರೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಇನ್ನು ಕೆಎಸ್ಆರ್ಟಿಸಿ ಪತ್ತಿನ ಸಹಕಾರ ಸಂಘವು ಸಂಸ್ಥೆಯ ನೌಕರರಿಂದ ನಡೆಯುತ್ತಿರುವುದರಿಂದ ಮತ್ತು ಈತ ಸಹ ಸಂಸ್ಥೆಯ ಒಬ್ಬ ಸಿಬ್ಬಂದಿ ಆಗಿರುವ ಕಾರಣ ಈ ಕೂಡಲೇ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಈತ ಹಾಗೂ ಈತನ ಕೆಲವು ಸಂಗಡಿಗರು ಮಾಡಿರುವ ಭ್ರಷ್ಟಾಚಾರ, ಹಣದ ಅವ್ಯವಹಾರದ ಬಗ್ಗೆ ಸಂಸ್ಥೆ ವತಿಯಿಂದಲೂ ತನಿಖೆಗೆ ಒಳಪಡಿಸಿ ಸಂಸ್ಥೆಯ ನಿಯಮಾವಳಿಗಳಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ತಿನ ಸಹಕಾರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
Related









